ಉದ್ದ ಅಗಲಕ್ಕ ಲಕಲಕ್ಕ ಚೊಕಚೊಕ್ಕ ನಿನಕಂಡು ಆಗ್ಯಾರೆ ಹುಂಚಿಪಕ್ಕ ಪಾತರಗಿ ಪಕ್ಕಕ್ಕ ಲಕ್ಕಕ್ಕ ಲಡಿಯಕ್ಕ ಚಕಚಕ್ಕ ತೂಯ್ಯಾರೆ ರೊಕ್ಕಪಕ್ಕ ||೧|| ನಿನ ಸೆರಗು ಗಗನಕ್ಕ ನಿನ ತುರುಬು ಸಾಗರಕ ನೀಬಂದಿ ಓಗರಕ ನಗಿಮಾರೆ ಕಣ್ಣಾಗ ಕಂಡೋರು ಕಣ್ಣಾಗ ಸತ್ತಾರೆ ...

ಅವಳಿಗೆ ಬೇರೆ ಕೆಲಸವಿರಲಿಲ್ಲ. ತನ್ನ ಗೆಳತಿಯರ ಗಂಡಂದಿರನ್ನು ಗಡಸು, ಕುಡುಕ, ಮೋಸಗಾರ, ನಿರ್‍ದಯಿ, ಕಪಟಿ ಎಂದು ಹೇಳಿ ಲೇಬಲ್ ಹಚ್ಚುತ್ತಿದ್ದಳು. ಅವಳ ಗಂಡನ ಬಗ್ಗೆ ಯಾರಾದರು ಟಿಕೀಸಿದರೆ ಒಡನೆ “ನನ್ನ ಗಂಡ ಹೇಗಿದ್ದರೇನು? ನೀವು ಏನು ಹೇಳಬೇ...

ಕತ್ತಲ ಮಗ್ಗದಲ್ಲಿ ಬೆಳಕು ನೆಯ್ದವರು ಬೆವರಿನ ಜನ, ನಾವು ತವರಿನ ಜನ. ನಾಡ ಒಳಿತಿಗೆ ಸುಖವೆಲ್ಲ ಸುಟ್ಟು ರಕುತದ ಹನಿಹನಿಯನು ಕೊಟ್ಟು ಕನಸಿಗೆ ಕಿವಿ ಕಣ್ಣು ಕೊಟ್ಟೆವು ಬರಿ ಬೆತ್ತಲೆಯ ಉಟ್ಟೆವು. ಗುಡಿ ಗುಡ್ಡಗಳಲ್ಲಿ ಬರೆಸಿಕೊಂಡರು ಹೆಸರು ತುಳಿವ ನೆ...

ಹೆಣ್ಣಿರದ ಬಾಳು ಬಾಳೇ ಬಣಗುಡುತ್ತಿದೆ ಬದುಕು ಬೆಳಕು, ಬಿನ್ನಾಣ, ಶೃಂಗಾರವಿಲ್ಲದಲೆ| ಒಂಟಿತನದಲಿ ಅದೇನು ಸುಖವಿದೆಯೋ ಕಾಣೆ! ಗಂಡಿನ ಈ ಒಣ ಹರಟೆಗೆಲ್ಲಿದೆ ಮಾನ್ಯತೆಯು|| ಹೆಣ್ಣಿರದ ಮನೆಯು ದೀಪವಿಲ್ಲದ ಗುಡಿಯಂತೆ, ಗೃಹಿಣಿ ಇಲ್ಲದ ಮನೆಯು ಕಳಸವಿಲ್ಲ...

ಕೆಲವು ಯಂತ್ರಗಳು ನೀರಿನಲ್ಲಿ ಚಲಿಸಿದರೆ, ಕೆಲವು ನೆಲದ ಮೇಲೆ ಮಾತ್ರ ಚಲಿಸುತ್ತವೆ. ನೀರಿನ ಒಳಗೂ ಚಲಿಸುವ ಸಬ್ಮೆರಿನ್‌ಗಳು ಸಹ ಇವೆ. ಆಕಾಶದಲ್ಲಿ ಅತ್ಯಂತ ವೇಗದಲಿ ಚಲಿಸುವ ಜೆಟ್‌ಗಳು ಇವೆ. ಇವು ಇಂದಿನ ಯುಗದಲ್ಲಿ ಮಾಮೂಲಿ ವಾಹನಗಳೆಂದು ಜನಹೇಳುತ್ತ...

ಅರ್ಜುನನ ಪಾಡಿಂದೆನಗೆನ್ನ ಕೃಷಿಯ ಪರ ಬರೆವೀ ಹೊತ್ತಿನಲಿ, ಶಲ್ಯ, ಭೀಷ್ಮ, ದ್ರೋ ಣರಂಥವರೆಷ್ಟೊಂದು ಸಜ್ಜನ ಬಂಧುಗಳೆನ್ನ ವರಿಂದು ಪೇಟೆಯ ಪಕ್ಷದೊಳಿರುತಿಹರು ಪರಿಸರದ ಪರವಿತ್ತ ಕೃಷಿಗೆ ಬರಲೆಡೆ ಕಾಣದವರು – ವಿಜ್ಞಾನೇಶ್ವರಾ *****...

ವಿಶ್ವವು ಒಂದಾಗಲಿ… ಬಾಳಲಿ ಏಳಿಗೆ ಕಹಳೆಯು ಮೊಳಗಲಿ ದಿಗ್ದೆಸೆಗಳಲಿ ತಪ್ಪಾಗದೆ ಇರಲಿ ಎನ್ನುವ ಪ್ರೇಮದ ಕೂಗು, ವ್ಯಾಪಕವಾಗಿ ತಬ್ಬುತಲಿರುವಾಗ ಒಡೆಯುವ ಮಾತನು ಆಡದಿರಿ; ಸಣ್ಣವರಾಗದಿರಿ ಕನ್ನಡಕ್ಕೆ ದ್ರೋಹವ ಬಗೆಯದಿರಿ ಆದಿಕವಿ ಪಂಪನಿಗೆ ಇರಿಯ...

citಸಕ್ಕರೆ, ಬೆಲ್ಲ, ಬೇಳೆ, ಚಹಾಪುಡಿ, ರವಾ ಮುಂತಾದ ಸಾಮಾನುಗಳನ್ನು ಕಾರಿನಲ್ಲಿ ತುಂಬಿಕೊಂಡು ಮಂಜಪ್ಪ ರೈ ವೇಗವಾಗಿ ಮನೆಗೆ ಮರಳುತ್ತಿದ್ದರು. ಡ್ಯಾಶ್ ಬೋರ್ಡಿಗೆ ಜೋಡಿಸಿದ್ದ ಕ್ಯಾಸೆಟ್ ಪ್ಲೇಯರಿನಿಂದ ಬೆಸ್ಟ್ ಆಫ಼್ ರಫ಼ಿ ಹಾಡುಗಳು ಬರುತ್ತಿದ್ದರ...

ಗಕ್ಕೆಂದು ನಿಂತೆ ಒಂದು ಚಣ ಶುರುವಾಯಿತು ಅನುಮಾನ ಅವತ್ತು ಇಡೀ ದಿನ ಬೆಕ್ಕಿನದೇ ಧ್ಯಾನ ಮೀನು ಮಾರುವವಳಿಗೆ ಮಾಯೆ ಕವಿದಿರಲು ಒಣ ಮೀನಿಗೂ ಜೀವ ಬಂದಿರಲು ಘಮ ಘಮಿಸಿ ಅದು ಲೋಕವನೆ ಸೆಳೆದಿರಲು ಪರಿಮಳದ ಪರಿಣಾಮ ಮೂಗರಳಿಸಿ ಬೆಕ್ಕು ಅಡ್ಡ ಹೋಯಿತು. ***...

1...2122232425...111

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...