ಕೆಲವು ಯಂತ್ರಗಳು ನೀರಿನಲ್ಲಿ ಚಲಿಸಿದರೆ, ಕೆಲವು ನೆಲದ ಮೇಲೆ ಮಾತ್ರ ಚಲಿಸುತ್ತವೆ. ನೀರಿನ ಒಳಗೂ ಚಲಿಸುವ ಸಬ್ಮೆರಿನ್‌ಗಳು ಸಹ ಇವೆ. ಆಕಾಶದಲ್ಲಿ ಅತ್ಯಂತ ವೇಗದಲಿ ಚಲಿಸುವ ಜೆಟ್‌ಗಳು ಇವೆ. ಇವು ಇಂದಿನ ಯುಗದಲ್ಲಿ ಮಾಮೂಲಿ ವಾಹನಗಳೆಂದು ಜನಹೇಳುತ್ತಾರೆ. ಆದರೆ ನೀರಿನಲ್ಲಿಯೂ ವೇಗವಾಗಿ ನೆಲದ ಮೇಲೂ ಓಡಬಲ್ಲ ಕಾರುಗಳನು ಇತ್ತೀಚೆಗೆ ನ್ಯೂಜಿಲೆಂಡ್ ಮೂಲದ “ಆಲನ್‌ಗಿಬ್ಸ್’, ಎಂಬ ವಿಜ್ಞಾನಿ ಕಂಡುಹಿಡಿದಿದ್ದಾರೆ. ಈತ ತನ್ನ ಶ್ರೀಮಂತಿಕೆಯ ಸ್ವಸಾಮರ್ಥ್ಯದಿಂದ ಈ ಸಾಧನೆ ಮಾಡಿದರು. ಇವರು ಕಂಡು ಹಿಡಿದ ಕಾರು ನೆಲದ ಮೇಲೆ ೧೬೦ ಕಿ.ಮೀ. ಚಲಿಸಿದರೆ ನೀರಿನ ಮೇಲೂ ಗಂಟೆಗೆ ೪೮ ಕಿ.ಮೀ. ಓಡುತ್ತದೆ. ೧೭೫ ಅಶ್ವಶಕ್ತಿಯ ೨.೫ ಲೀಟರ್ ವಿ೬ ಇಂಜನ್ ಈ ಕಾರಿನೊಳಗಿದೆ. ನೆಲದ ಮೇಲೆ ಸಾಮಾನ್ಯ ವಿಧಾನದಲ್ಲಿ ಓಡುವ ಇದಕ್ಕೆ ಜೆಟ್ ವ್ಯವಸ್ಥೆಯನ್ನು ಬಳಸಲಾಗಿದೆ. ಈ ವ್ಯವಸ್ಥೆಯಿಂದ ನೀರನ್ನು ಒಳಕ್ಕೆ ಎಳೆದುಕೊಂಡು ಸು. ಒಂದು ಟನ್ನಷ್ಟು ಒತ್ತಡದಲ್ಲಿ ಹಿಂದಕ್ಕೆ ಹೊರಹಾಕಲಾಗುತ್ತದೆ ಈ ಒತ್ತಡವು ವೇಗದ ಚಲನೆಗೆ ಅನುಕೂಲಮಾಡಿಕೊಡುತ್ತದೆ.
ಈ ಕಾರಿನ ನಿರ್ಮಾತೃ ಗಿಬ್ಸ್ ವಾಸಿಸುತ್ತಿದ್ದ ಸಮುದ್ರದ ಬದಿಯಲ್ಲಿರುವ ತನ್ನ ಬಂಗ್ಲೆಯಲ್ಲಿದ್ದಾಗ ಅಲ್ಲಿ ಬಳಸಲೆಂದೇ ಇಂಥಹ ಲಾಭಯದಾಯಕ ವಾಹನವೊಂದನ್ನು ರೂಪಿಸಿದ. ನಂತರ ಬ್ರಿಟನ್ನಲ್ಲೊಂದು ಕಾರ್ಖಾನೆಯನ್ನು ಸ್ಥಾಪಿಸಿದ. ಜಾಗ್ವರ್, ರೋಲ್ಸ್‌ರಾಯ್ ನಂತಹ ಸಂಸ್ಥೆಗಳಲ್ಲಿದ್ದ ಇಂಜನೀಯರ್ ನೀಲ್ ಜೆಂಕಿನ್ಸರನ್ನು ಜೊತೆಗೂಡಿಸಿಕೊಂಡ. ಸತತ ಪರಿಶ್ರಮದೊಂದಿಗೆ ಈ ಹೊಸ ತಂತ್ರಜ್ಞಾನವನ್ನು ಕಂಡು ಹಿಡಿದ.
‘ಅಕ್ವಡಾ’ ವನ್ನು ತಯಾರಿಸಿದ. ನಮ್ಮಲ್ಲಿರುವ ಲಕ್ಷಲಕ್ಷಗಳಿಗೆ ಸೀಮಿತಗೊಳ್ಳದ ಈ ಕಾರಿನ ಬೆಲೆ ಶ್ರೀಮಂತರಿಗೂ ಎಟುಕದಂತಾಗಿದೆ. ಅಂದ ಹಾಗೆ ಇದರ ಬೆಲೆ ೨,೩೦,೦೦೦ ಡಾಲರ್! ಅಂದರೆ ಭಾರತೀಯ ಬೆಲೆ ೧,೦೫,೮೦,೦೦೦ ಮಾತ್ರ. ಹಾಗೆ ನೋಡಿದರೆ ಈ ಕಾರಿನ ಬೆಲೆ ಕಡಿಮೆಯೆ. ಜರ್ಮನಿ ಮೂಲದ ಡೈಮ್ಲರ್ ಕ್ರೈಸ್ಲರ್ ಕಾರು ತಯಾರಿಕಾ ಕಂಪನಿಯು ಸಿದಪಡಿಸಿದ ‘ಮೇ ಬ್ಯಾಚ್,’ ಎಂಬ ಕಾರಿನ ಬೆಲೆ ೫ ಕೋಟಿಗಳಂತೆ! ಸದ್ಯಕ್ಕೆ ಈ ಭೂಮಂಡಲದ ಮೇಲಿರುವ ಐಶಾರಾಮಿ ಕಾರು ಇದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
*****