ಕಪ್ಪು ಮಣ್ಣ ನೆಲದಲಿ ಘಮ್ಮೆಂದು ಸೂಸಿ ತೇಲುವ ಎಳೆ ಹಾಲು ತುಂಬಿ ಜೋಳದತೆನೆಗಳ ಅರಿವಿಗೆ ಪರಿವಿಗೆ ಮೊಗ್ಗೊಡೆದು ಜೀವದ ಹರವಿಗೆ ಗಾಳಿ ಜೇಕು ಹಾಕುತ್ತಿದೆ ತಣ್ಣನೆಯ ಸ್ಪರ್ಶ ಜೀವದಾಳಕೆ ಇಳಿಯಲು ಕಾಯಬೇಕು. ಯಾರು ಹುಕುಂ ಮಂಜೂರ ಮಾಡಿದರು ಮೊಳಕೆಯೊಡದೆ ...

ಆಟೋದವನಿಗೆ ಹಣಕೊಡುತ್ತ ವಿನಯಚಂದ್ರ ತನ್ನಬಳಿ ಟಿಕೇಟುಗಳಿರುವುದನ್ನು ಖಚಿತಪಡಿಸಿಕೊಂಡ. ಸಿನಿಮಾದ ಮುಂದೆ ಈಗಾಗಲೆ ಠಳಾಯಿಸಿದ ಮಂದಿಯನ್ನು ಕಂಡು ತಾನು ಬೆಳಿಗ್ಗೆಯೆ ಬಂದು ಟಿಕೇಟು ಕೊಂಡುಕೊಂಡುದು ಅದೆಷ್ಟು ಒಳ್ಳೆಯದಾಯಿತು ಅನಿಸಿತು. ತನ್ನ ಜಾತಕ ನೋ...

ಹೊತ್ತು ಬೇಗನೆ ಮುಳುಗುವುದೆಂದರೆ ಥಂಡಿ ಗಾಳಿ ಬೀಸುವುದೆಂದರೆ ಸೀತಾಫಲ ಮಂಡಿಗೆ ಗಾಡಿಗಳು ಬರತೊಡಗಿದವೆಂದೇ ಲೆಕ್ಕ ಬರುತ್ತವೆ ಅವು ನಸುಕಿನಲ್ಲಿ ಮುಂಜಾವದ ಮುಸುಕಿನಲ್ಲಿ ಎಲ್ಲಿಂದಲೊ ಯಾರಿಗೆ ಗೊತ್ತು ಎಲ್ಲರಿಗೂ ನಿದ್ದೆಯ ಮತ್ತು ಎದ್ದು ನೋಡಿದರೆ ಮು...

ನಿತ್ಯ ಜುಳುಜುಳು ಝೇಂಕಾರ ಆಡೊಂಬಲ ನಿನಗೀ ನೆಲ ಓಂಕಾರ ಕೃಷ್ಣವರ್ಣ ಜಲಕನ್ಯೆಯ ವೈಯಾರ ಕಾಳಿ ನಿನಗಿದೋ ಅನ್ವರ್ಥ ಶೃಂಗಾರ ಸವಾಲು ಸಾಸಿರ ಎದುರಿಸಿ ಕರುಣೆ ಹೊನ್ನ ಬದುಕಿಗೆ ದಾನದ ಸ್ಫುರಣೆ ನಮ್ಮಯ ಮನದಲಿ ನಿನ್ನದೇ ಸ್ಮರಣೆ ಕಾಳಿ ಜಪವಿದೋ ಮರೆಸಿತು ಬವ...

ನಾನು ಪ್ರೀತಿಸಿದ್ದು ನನ್ನನ್ನೆ ನನ್ನ ಅಹಂಕಾರವನ್ನು ನನ್ನ ದುಃಖವನ್ನು ನನ್ನ ಕೆಟ್ಟತನವನ್ನು ಅದಮ್ಯವಾಗಿ ಪ್ರೀತಿಸಿದ್ದು ನಾನೆ. ಪ್ರೀತಿ ಬಟ್ಟಲು ತುಂಬುವ ಮೊದಲೆ ಆಸೆ ಬರುಕಿಯಂತೆ ಕುಡಿಯುತ್ತಿದ್ದವಳು ನಾನೆ. ಒಮ್ಮೆ ಮಾತ್ರ ನನಗೆ ಗೊತ್ತಿಲ್ಲದ ಹಾ...

ಗುಳ್ಳೌ ಬಾರೇ ಗೌರೌ ಬಾರೇ ಸೀಗೌ ಬಾರೇ ಸಿವನಾರೇ ಗೆಳತೇರೆಲ್ಲಾ ಗರ್ದಿಲ್ಬಾರೆ ಸುಬ್ಬೀ ಸುಬ್ಬೀ ಸುವನಾರೇ ಗುರ್‍ಹೆಳ್ಹೂವಾ ಗುಲಗಂಜ್ಹಚ್ಚಿ ಗೆಳತೇರ್‍ಕೂಡಿ ಆಡೋಣು ಕುಂಬಾರ್‍ಗುಂಡಾ ತಿಗರೀ ತಿರುವಿ ಬಗರೀ ಬಿಂಗ್ರೀ ಆಗೋಣು ಚಂಚಂ ಚಂದಾ ಮುಗಿಲಾ ನೀರಾ ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...