ಗುಳ್ಳೌ ಬಾರೇ ಗೌರೌ ಬಾರೇ

ಗುಳ್ಳೌ ಬಾರೇ ಗೌರೌ ಬಾರೇ
ಸೀಗೌ ಬಾರೇ ಸಿವನಾರೇ
ಗೆಳತೇರೆಲ್ಲಾ ಗರ್ದಿಲ್ಬಾರೆ
ಸುಬ್ಬೀ ಸುಬ್ಬೀ ಸುವನಾರೇ

ಗುರ್‍ಹೆಳ್ಹೂವಾ ಗುಲಗಂಜ್ಹಚ್ಚಿ
ಗೆಳತೇರ್‍ಕೂಡಿ ಆಡೋಣು
ಕುಂಬಾರ್‍ಗುಂಡಾ ತಿಗರೀ ತಿರುವಿ
ಬಗರೀ ಬಿಂಗ್ರೀ ಆಗೋಣು

ಚಂಚಂ ಚಂದಾ ಮುಗಿಲಾ ನೀರಾ
ಹಸಿರಾ ಪತ್ಲಾ ಉಟ್ಟೇವೆ
ತುರುಬಾ ನೋಡೇ ಕ್ಯಾದ್ಗೀ ಗಾಡೇ
ಹಳ್ಳಿ ಹುಡೇ ಆಗೇವೆ

ನಾವೇ ಹುಬ್ಬಿ ನಾವೇ ಸುಬ್ಬೀ
ನಾವೇ ಹಬ್ಬಾ ಹಿಗ್ಗೇವೆ
ನಾವೇ ಕರ್ಚೀಕಾಯಿ ಬೆಲ್ಲಾ
ಸುಳ್ಳೀ ಹೋಳ್ಗಿ ಆಗೇವೆ

ನಾನೇ ಗುಳ್ಳೌ ನಾನೇ ಗಂಗೌ
ಆತ್ಮಾ ರೂಪಾ ನಾನವ್ವಾ
ನಾನೇ ಸೀಗೌ ನಾನೇ ಶಂಕ್ರೌ
ಆತ್ಮಾದೇವಿ ರೂಪವ್ವಾ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಿಂಹಾಸನ
Next post ಅಮ್ಮಂದಿರ ಗುದ್ದು

ಸಣ್ಣ ಕತೆ

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…