ಹಿಡಿಗಂಟು ಕೊಟ್ಟು ಹಿಡಿ ಹಿಡೀ ಎಂದ ಹಿಡಿತ ಸಿಗಲೆ ಇಲ್ಲ ಹಿಡಿಯಬೇಕು ಅನ್ನುವುದರೊಳಗೆ ಪುಡಿ ಪುಡಿಯೆ ಆಯಿತಲ್ಲ ಬೊಗಸೆಯೊಳಗೆ ಹಿಡಿದಂಥ ನೀರು ಸಂದುಗಳ ಹಿಡಿದು ಜಾರಿ ಕೈಗೆ ಬಾರದೇ ಬಾಯ್ಗೆ ಸೇರದೇ ಹೋಯಿತಲ್ಲ ಸೋರಿ ಕೊಟ್ಟಾಗ ಗಂಟು ಹಿಡಿದದ್ದೆ ಗಟ್ಟಿ...

ಒಂದು ಡಿಜಿಟಲ್ ಸಂಕೇತದಿಂದ ಹಲವಾರು ಮನೆಗಳ ಟಿ.ವಿಗಳು ಕೆಲಸ ಮಾಡಲಿವೆ. ಡಿಜಿಟಲ್ ಸಂಕೇತ ಡೀಕೋಡರ್ ಇಲ್ಲದ ಡಿಜಿಟಲ್ ದೂರದರ್ಶಕ ಕೂಡ ಇದೆ. ಕಂಪ್ಯೂಟರ್ ಮಾನಿಟರ್‌ನಂತೆ- ೪೮೦ ಪೃಥಕ್ಕರಣರೇಖೆ (ಲೈನ್ಸ್ ಆಪ್ ರೆಸೂಲ್ಯೂಷನ್)ಗಳಲ್ಲಿ ಡೀ. ಟಿ.ವಿ. ಸತತವ...

ಸೋಮವಾರ ಸೋಂಬೇರಿ ಸುಖನಿದ್ರೆ ಮಂಗಳವಾರ ಮಂಗಳದ ನಿದ್ರೆ ಬುಧವಾರ ಬುದ್ಧಿವಿರಾಮ ನಿದ್ರೆ ಗುರುವಾರ ಗುರುವಿದಾಯ ನಿದ್ರೆ ಶುಕ್ರವಾರ ಚಕ್ರಗತಿಯಲಿ ನಿದ್ರೆ ಶನಿವಾರ ಅನಿವಾರ್ಯ ನಿದ್ರೆ ಭಾನುವಾರ ಸಾಲದ ಕೊಸರು ನಿದ್ರೆ ಇನ್ನು ಇದ್ದ ಬಿದ್ದ ಹೊತ್ತಲ್ಲಿ ...

ತಾಯೆ ನಿನ್ನ ಮಡಿಲಲಿ ಕಣ್ಣ ತೆರೆವ ಕ್ಷಣದಲಿ ಸೂತ್ರವೊಂದು ಬಿಗಿಯಿತಮ್ಮ ಸಂಬಂಧದ ನೆಪದಲಿ ಆಕಸ್ಮಿಕವೇನೋ ತಿಳಿಯೆ ನಿನ್ನ ಕಂದನಾದುದು, ಆಕಸ್ಮಿಕ ಹೇಗೆ ನಿನ್ನ ಪ್ರೀತಿ ನನ್ನ ಗೆದ್ದುದು? ಗುಣಿಕೆ ಮಣಿದು ನಾನು ನಿನ್ನ ಚರಣತಳಕೆ ಬಿದ್ದುದು? ಇಲ್ಲಿ ಹರ...

ಕತ್ತಲಾಗುವುದನೇ ಕಾದ ಹೊಲದೊಡೆಯ ಸಿಹಿ ಹಾಲು ತುಂಬಿದ ಬೆಳೆಸೆ ತೆನೆಯ ಕುಳ್ಳು ಬೆಂಕಿಯಲಿಟ್ಟು ಹದವಾಗಿ ಸುಟ್ಟು ಚೂರು ಚೂರೇ ಕಂಕಿಯನು ಕಿತ್ತು ಕರಿಯ ಕಂಬಳಿಯ ಒಡಲ ತುಂಬಿ ಬಲಿತ ದಂಟಿಲೆ ಒಡನೆ ಓಡೆಯ ಏರಿಸಾರಿಸಿ ತೂರಿಸಿ ಮೂಲೆಸೇರಿಸಿ ತಳ ಸರಿಸಿ ಹೊಡ...

ಸಾಗರ ಹುದುಗಿದೆ ಹನಿಹನಿಯಲ್ಲೂ ಸೂರ್ಯನಿರುವ ಪ್ರತಿ ಕಿರಣದಲೂ, ಒಂದೇ ಸಮ ಇದೆ ಮಾಧುರ್ಯದ ಹದ ಮರವೊಂದರ ಪ್ರತಿ ಹಣ್ಣಿನಲೂ. ಸಾವಿರ ಸಿಪ್ಪೆ, ಸಾವಿರ ಚಿಪ್ಪು ಸಾವಿರ ಬಗೆ ನಡೆನುಡಿ ಅನ್ನ, ಕಾಯದ ಕರಣದ ಸಾವಿರ ಚೇಷ್ಟೆ ಹೊರಗಿನ ತೋರಿಕೆ ಬಹು ಭಿನ್ನ. ಜ...

ಓದುತ್ತಿದ್ದಂತೆ ಮನೋಹರನ ಉಸಿರು ಬಿಗಿಯಾಯಿತು. ನಾಡಿಯಲ್ಲೆಲ್ಲ ನೆತ್ತರು ಧುಮ್ಮಿಕ್ಕೆ ಹರಿಯುತ್ತಿರುವ ಅನುಭವ. ಎಲ್ಲವನ್ನೂ ಮತ್ತೊಮ್ಮೆ ಜೀವಿಸಿದಷ್ಟು ಆಯಾಸ. ಡೆಸ್ಕಿ ನಿಂದ ಸಿಗರೇಟು ಎತ್ತಿಕೊಂಡ. ಸೇದಬಾರದು ಎಂದಿದ್ದರು ಡಾಕ್ಟರರು. ಉದ್ವೇಗಗೊಳ್ಳ...

ಹಬ್ಬ ಬಂತು, ಓ ಹಬ್ಬ! ಕೆಳೆಯರೇ, ತೋರಣ ಕಟ್ಟೋಣ! ಹಬ್ಬ ಹಬ್ಬಕೂ ಮನೆಯ ಬಾಗಿಲಿಗೆ ತೋರಣ ಕಟ್ಟೋಣ! ಮಾವಿನ ತೋಪಿಗೆ ಬನ್ನಿರಿ, ಕೆಳೆಯರೆ, ತೋರಣ ಕಟ್ಟೋಣ; ಬೆಳಗಿನ ಜಾವ ಮುಗಿಯುವ ಮುನ್ನ ತೋರಣ ಕಟ್ಟೋಣ! ಚುಕ್ಕಿಯಾಗಸದೆ ಮಾಸುವ ಮುನ್ನ ತೋರಣ ಕಟ್ಟೋಣ; ...

1...2223242526...73

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...