ಶ್ರೀ, ರಾಮಚಂದ್ರ ದೇವರು ವನವಾಸವನ್ನು ಮುಗಿಸಿ ಅಯೋಧ್ಯೆಗೆ ಒಂದು ಸಿಂಹಾಸನಾರೂಢನಾಗಿ ರಾಜ್ಯವಾಳುವುದಕ್ಕೆ ಸುರುಮಾಡಿದನು. ಅಧಿಕಾರ ಸೂತ್ರವು ತನ್ನ ಕೈಗೆ ಬಂದೊಡನೆಯೇ ಸೀತಾಪತಿಯು ತನ್ನೊಡನೆ ಅರಣ್ಯಲ್ಲಿ ದುರ್ದಿನಗಳನ್ನು ಕಳೆದ, ಲಂಕೆಯನ್ನು ಸುಟ್ಟು...

ಒಮ್ಮೆ ಶಿಷ್ಯ ಗುರುಗಳಲ್ಲಿ ಬಂದು ಕೇಳಿದ, “ಗಿಡದ ವೃಕ್ಷಗಳು ಏಕೆ ಹಚ್ಚ ಹಸುರಾಗಿವೆ?” “ಶಿಷ್ಯಾ! ಅವು ಸೂರ್‍ಯನ ನವ್ಯತೆಯನ್ನು ಪಾನ ಮಾಡುತ್ತವೆ. ಮತ್ತೆ ಗಾಳಿಯ ಕಾವ್ಯವನ್ನು ಹಾಡುತ್ತವೆ” ಎಂದರು. “ಹೂವುಗಳ ಆನ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ...

ಮಾಸ್ಕೋಕ್ಕೆ ರಾಯಭಾರಿಯಾಗಿ ಹೊರಟ ಸರ್ ರಾಧಾಕೃಷ್ಣನಂತೆ ಅಂಜನೇಯನು ಲಂಕೆಗೆ ಹಾರಿದನು. ರಾವಣೇಶ್ವರನು ಅವನನ್ನು ಗೌರವದಿಂದ ಸ್ವಾಗತಿಸಿ ಸತ್ಕರಿಸಿದನು. ಮಾರುತಿಯು ದಶಕಂಠನ ಮುಂದೆ ತನ್ನ ಬಾಲದ ಸುರಳಿಯ ಮೇಲೆ ಕುಳಿತು ಅವನಿಗೆ ಆದರ್ಶ ಜೀವನದ ತತ್ವಗಳನ...

ಒಬ್ಬ ಝೆನ್ ಗುರು, ಶಿಷ್ಯನಲ್ಲಿ ಕೇಳಿದರು- “ನಾನು ಧ್ಯಾನಕ್ಕೆ ಕುಳಿತಾಗ ನಿನಗೆ ಕೇಳುವುದು ಏನು”? ಎಂದು. “ಗುರುಗಳೇ! ಇದು ಬಲು ಕಠಿಣ ಪ್ರಶ್ನೆ. ಅಲ್ಲಿ ಅನುಭಾವಿಯಾದವರು ಗುರು. ಎದುರಿಗೆ ನಿಂತಿರುವ ಶಿಷ್ಯ ಅವನೊಂದು ಕಂಭವಷ್...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು....

“ಹಾ ಸೀತೇ! ಓ ಲಕ್ಷಣಾ!” ಎಂದು ಮಾರೀಚ ಪ್ರಾಣಬಿಟ್ಟ. ಅದನ್ನು ಕೇಳಿ ಸೀತೆಯ ಜೀವ ಥರ ಥರ ನಡುಗಿತು. ಲಕ್ಷಣನಿಗೆ “ಓಡು ರಾಕ್ಷಸನ ವಶವಾಗಿರುವ ನಿನ್ನ ಅಣ್ಣನನ್ನು ಉಳಿಸು” ಎಂದು ಒತ್ತಾಯಪಡಿಸಿದಳು. ಲಕ್ಷ್ಮಣ ಕದಲಲಿಲ್ಲ. ಮತ್ತೆ ಒತ್ತಾಯ ಮಾಡಿದ...

ಕಣ್ಣ ಕಿಡಕಿಯಲ್ಲಿ ದೇಹ ಜಗವ ಕಂಡಿತ್ತು. ಕಿವಿಯಿಂದ ಜಗದ ಸಮ್ಮೋಹನ ಕೇಳಿತ್ತು. ಮೂಗಿನಿಂದ ಜಗ ಮೂಸಿತ್ತು. ಬಾಯಿಯಿಂದ ಜಗದ ಹಾಡ ಹಾಡಿತ್ತು. ಇದರಲ್ಲಿ ತನ್ನ ಇಡೀ ದೇಹದ ಅವಯವಗಳು ಜಗದ ಅರಿವಿಗೆ ಕಿಡಕಿ, ಬಾಗಿಲು, ಹೊಸಿಲಿನಂತಾಗಿ ಅರ್ಥವಿಸಲು ನೆರವು ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕ...

ಶ್ರೀ ರಾಮಚಂದ್ರ ದೇವರು ಶಬರಿಯು ಕೊಟ್ಟ ಎಂಜಲು ಬೋರೆಯನ್ನು ತಿಂದ ಸುದ್ದಿಯು ಆ ಅರಣ್ಯ ಪ್ರದೇಶದಲ್ಲಿ ಕಾಳಿಚ್ಚಿನಂತೆ ಹಬ್ಬಿತು. ಕೇಳುವದೇನು? ಬುಟ್ಟಿ ತುಂಬ ಎಂಜಲು ಬೋರೆಯನ್ನು ಹೊತ್ತು ಬೇಡತಿಯರ ಹಿಂಡೇ ಅವರ ಪರ್ಣಶಾಲೆಗೆ ಬಂದು ಆ ಹಣ್ಣನ್ನು ತಿನ್...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...