Home / ಕಥೆ / ಕಿರು ಕಥೆ / ರಾವಣನ ವೇದಾಂತ

ರಾವಣನ ವೇದಾಂತ

ಮಾಸ್ಕೋಕ್ಕೆ ರಾಯಭಾರಿಯಾಗಿ ಹೊರಟ ಸರ್ ರಾಧಾಕೃಷ್ಣನಂತೆ ಅಂಜನೇಯನು ಲಂಕೆಗೆ ಹಾರಿದನು. ರಾವಣೇಶ್ವರನು ಅವನನ್ನು ಗೌರವದಿಂದ ಸ್ವಾಗತಿಸಿ ಸತ್ಕರಿಸಿದನು. ಮಾರುತಿಯು ದಶಕಂಠನ ಮುಂದೆ ತನ್ನ ಬಾಲದ ಸುರಳಿಯ ಮೇಲೆ ಕುಳಿತು ಅವನಿಗೆ ಆದರ್ಶ ಜೀವನದ ತತ್ವಗಳನ್ನು ತಿಳಿಸಿ ಹೇಳಿದನು. ಮಾನವ ಕುಲವು ಒಂದೇ ಆಗಿದೆ; ಪರಮಾತ್ಮನ ಸಂಕಲ್ಪದಿಂದ ಹುಟ್ಟಿದ ಈ ಪ್ರಪಂಚದಲ್ಲಿ ಜೀವಾತ್ಮ ಜೀವಾತ್ಮರಲ್ಲಿ ಭೇದವೆಣಿಸಕೂಡದು; ಶುದ್ಧ ಹೃದಯದಿಂದ ಸದ್ಧರ್ಮವನ್ನಾಚರಿಸಿ ಆತ್ಮದ ಉದ್ಧಾರ ಮಾಡಿಕೊಳ್ಳಲು ಈ ಆಯುಷ್ಯವು ಒಂದು ಸಂದರ್ಭ ಮಾತ್ರ; ಸರಿಯಾಗಿ ತಿಳೆದು ನೋಡಿದರೆ ಈ ಜಗತ್ತು ಮಾಯೆಯೇ ಆಗಿದೆ; ಆದರೆ “ಸತ್ಯಂ ಶಿವಂ ಸುಂದರಂ” ಈ ತಿರುಳನ್ನರಿತು ನೀನು ಸೀತಾಮಾತೆಯನ್ನು ಶ್ರೀ ರಾಮಚಂದ್ರದೇವರಿಗೆ ತಿರುಗಿ ಒಯ್ದು ಕೊಟ್ಟು ಮುಕ್ತಿಯನ್ನು ಪಡೆಯು ವಂಥವನಾಗು.

ಈ ಪ್ರವಚನವನ್ನು ಕೇಳಿ ರಾವಣನು ಹತ್ತು ಮುಖಗಳಿಂದ ದಿಗ್ಗಜಗಳು ನುಗ್ಗಾಗುವಂತೆ ಗಹಗಹಿಸಿದನು. ಅನಿರೀಕ್ಷಿತ ಆ ಅಟ್ಟಹಾಸಕ್ಕೆ ಮಾರುತಿಯು ಮಂಕು ಬಡಿದುಹೋದನು. ದಶಮುಖಗಳಿಂದ ಈ ಮಾತು ಹೊರಟವು.

“ಮಾನವ ಕುಲವು ಒಂದೇ ಎಂದು ನಂಬಿ ಜೀವಾತ್ಮರಲ್ಲಿ ಭೇದ ವೆಣಿಸದೆ ಶುದ್ಧ ಹೃದಯದಿಂದಲೇ ಸೀತೆಯನ್ನು ತಂದಿದ್ದೇನೆ. ಮಂಡೋದರಿಯ ಆತ್ಮವನ್ನೂ ಸೀತೆಯ ಆತ್ಮವನ್ನೂ ಒಂದೇ ರೀತಿಯಿಂದ ಕಾಣುತ್ತೇನೆ. ಈ ಜಗತ್ತೇ ಮಾಯೆಯಾಗಿರಲು, ನಾನು ರಾಮನ ಮಡದಿಯನ್ನು ತಂದುದಕ್ಕಾಗಿ ಆತನು ವಿಷಾದಿಸಬೇಕಾಗಿಲ್ಲ. ಈ ಘಟನೆಯೂ ಒಂದು ಮಾಯೆ, ಪರಮಾತ್ಮನ ಸಂಕಲ್ಪ ಎಂದು ತಿಳಿದು ಸುಖವಾಗಿರಲು ಹೇಳು ನಿನ್ನೊಡಯನಿಗೆ. ನನ್ನಾತ್ಮವೂ ಅವನಾತ್ಮವೂ ಒಂದೇ ಎಂಬುದನ್ನು ನಾನು ಬಲ್ಲೆ. ಸುಂದರವಾದುದನ್ನು ಆರಾಧಿಸುವುದೇ ಸತ್ಯದ ಸಾಕ್ಷಾತ್ಕಾರದ ಮಾರ್ಗ. ಅದರಿಂದಲೇ ಶಿವನ ಸಾನ್ನಿಧ್ಯ ಸಾಧ್ಯ- ಇವೆಲ್ಲವೂ ನನಗೆ ವಿದಿತವೇ ಇವೆ. ಕಾರಣ ನೀನು ನೇರವಾಗಿ ಮರಳಿ ರಾಮಚಂದ್ರನಿಗೆ ಇವುಗಳನ್ನೆಲ್ಲ ವಿವರಿಸಿ ಶುದ್ಧ ಹೃದಯದಿಂದ ಸದ್ಧರ್ಮವನ್ನಾಚರಿಸಿ ಆತ್ಮವನ್ನು ಉದ್ದಾರ ಮಾಡಿ ಕೊಳ್ಳಲು ಹೇಳು.”

ಚಕಾರ ಮಾರ್‍‌ ನುಡಿಯದೆ ಮಾರುತಿಯು ಮರಳಿ ಬಂದನು.

ಮರುದಿನವೇ ಲಂಕೆಗೆ ಸೇತು ಕಟ್ಟಲು ಸುರುವಾಯಿತು.
*****

Tagged:

Leave a Reply

Your email address will not be published. Required fields are marked *

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...