ತೂಗ ತೂಗನ್ನಿರೆ | ತೂಗಿರಿ ಮನವ ವಿಚಾಣದಲೆ ||ಪ||
ಚಂದುಗುತ್ತೀ ಅರಸ | ಅವ ತನ್ನ ಮಗಳ ಮ್ಯಾಗಿನ ಮನಸ
ದೇವ ದರುಮದ ಮಾತ | ಹಿರಿಯರೆ ಕೂತು ಕೆಳರಿ ನೀವು ||ತೂ||ಅ. ವ.||
ತೊಟ್ಟ ಕುಬುಸವ ಕಳೆದು | ಹಾಕ್ಯಾಳ ಬಾಲಿ ಬಾಗಿಲದೆದರು
ತಂದಿ ಕಚೇರಿಲಿ ಬಂದ | ಕುಬುಸದ ರಂಗ ಏನ ಚ೦ದ
ಕುಬನ ಯಾರದಂದ | ಮಡದಿನ ಕೇಳತಾನ ಬಂದ ||ತೂ|| ೧
ಮುತ್ತೋದಿ ನನ ಮಗಳ | ಮುತ್ತಿನ ಅಟಕೋಲ
ಬಚ್ಚಲೇರುತ ಬಾಲಿ | ನಿಂತ ಕೇಳ್ಯಾಳ ಮಾತ ||ತೂ|| ೨
ಸುಬಕ ಸೂವರಣಿ | ನಿನ ಮುಕವ ಬಂಗಾರ ವರಣಿ
ಕೇಳೆಲೆ ಪತಿವರತಿ | ನಿನ ಬಿಡುದಿಲ ಬಾಗಿರಽಥಿ ||ತೂ|| ೩
ನಷ್ಟ ಕರುಮದ ಅರಸ | ಅಕಿ ನಿನ್ಹೊಟ್ಟಲ್ಹುಟ್ಟಿದ ಮಗಳ
ಕರುಮದ ಮಾತೀವು | ನಿನ ದರುಮದಾವಲ್ಲಿ ಬಿಟ್ಟಿ||ತೂ|| ೪
ಪರವುತ ಮಲ್ಲಯ್ಯ | ಅಕಿ ಭಾವಕೊಲಿದನಲ್ಲ
ಬಚ್ಚಲ ಮೋಲ್ಯಾಗ | ಬಾಲಿನ ಪಾರ ಮಾಡಿ ಬಿಟ್ಟ ||ತೂ|| ೫
ಗಿರಿಯ ನೇರ್ಯಾಳ ಬಾಲಿ | ತಿರುಗಿ ನೋಡ್ಯಾಳ ಹೊರಳಿ
ನಷ್ಟ ಕರುಮದ ತಂದಿ | ನನ್ನ ಬೆನ್ನ ಹತ್ತಿ ಬಂದಿ ||ತೂ|| ೬
ಬೋರವ್ವ ನಮ ತಂಗಿ | ಇವನ ಬೆನ್ನಿಲಿ ಬಿರಿಯವ್ವ
ತುಂಬಿದ ಬಾಗಿಣವ | ತಂದು ಚ್ಯಾಜವ ಕೊಡುವೆ ||ತೂ|| ೭
ಶಿವಗುತ್ತಿ ನೀ ಅರಸ | ನಾ ಕೊಡುವೆ ನಿನಗೆ ಸರಾವ
ಪಾತಳ ಗಂಗ್ಯಾಗ | ನೀ ಕಲ್ಲಿನ ಸಿಲೆಯಾಗೊ
ಕಂಚಿನ ಕೋಳ್ಯಾಗೊ | ಹಗಲು ರಾತುರಿ ಕೂಗೊ ||ತೂ|| ೮
ಚಂದ್ರಗುತ್ತಿ ಅರಸ | ಹಿಡಿ ಕೊಡುವೆ ನಾ ಸರಾವ ೯
ಪಾತಳ ಗಂಗ್ಯಾಗ | ನೀ ಕಲ್ಲಿನ ಸಿಲೆಯಾಗೊ
ಕಂಚಿನ ಕೋಳ್ಯಾಗೊ | ನೀ ಹಗಲು ರಾತುರಿ ಕೂಗೊ ||ತೂ|| ೧೦
*****








