ಮಗ ಪ್ರದೀಪ್ ನಿಂದ ಆ ಸುದ್ದಿ ತಿಳಿದ ಬಳಿಕ ಪಾರ್ವತಮ್ಮನ ಕಣ್ಣಿಗೆ ನಿದ್ರೆ ಸರಿಯಾಗಿ ಹತ್ತಿರಲಿಲ್ಲ. ಏಕೈಕ ಮಗನ ಮನಸ್ಸು ನೋಯಿಸಲೂ ಆಕೆಗೆ  ಇಷ್ಟವಿರಲಿಲ್ಲ. ಹಾಗಂತ ತನ್ನ ನಂಬಿಕೆಗಳನ್ನು ಬಿಟ್ಟುಬಿಡಲು ಆಕೆ ಸಿದ್ಧಳಿರಲಿಲ್ಲ, ಮತ್ತೆ ಮತ್ತೆ ಮಗನ ಮ...

ಕಾಶಮ್ಮ – ಮಲ್ಲೇಶಿ ಎಂಬ ಅಜ್ಜಿ ಮೊಮ್ಮ್ಮಗ ಇದ್ದರು. ಮೊಮ್ಮಗನು ದುಡಿದು ತಂದಷ್ಟರಲ್ಲಿಯೇ ಅವರಿಬ್ಬರೂ ಕಷ್ಟದಿಂದ ಬಾಳ್ವೆ ಮಾಡುತ್ತಿದ್ದರು. ಒಂದು ದಿನ ಮಲ್ಲೇಶಿ ಹೇಳಿದನು ಅಜ್ಜಿಗೆ – “ಅಜ್ಜೀ, ಈ ಚಿಕ್ಕ ಹಳ್ಳಿಯಲ್ಲಿ ಬಾಳ್ವ...

ಕಾಲೇಜು ಸೇರಿದಂದಿನಿಂದ ಅವನಿಗೆ ಮನಃಪೂರ್ವಕ ವಾಗಿ ನಗುವುದು ಮರೆತೇ ಹೋಗಿದೆ. ಬೃಹತ್ ಕಟ್ಟಡದ ಬೃಹತ್ ಕೋಣೆಯೊಳಗೆ ಬೃಹದಾಕಾರದ ಕಪಾಟುಗಳಲ್ಲಿ ಡಬ್ಬದೊಳಗೆ ಅದುಮಿಟ್ಟ ಗೋಧಿ ಹಿಟ್ಟಿನಂತೆ ಪುಸ್ತಕಗಳು! ಕೆಲವಂತೂ ಮಣಭಾರ. “ಈ ಆಥರಿನ ಈ ಪುಸ್ತಕದ...

ಗೋಡಿಹಾಳ ಗ್ರಾಮ ಚಿಕ್ಕದಾದರೂ ಅಲ್ಲಿಯ ಗೌಡರು ದೊಡ್ಡವರಾಗಿದ್ದರು. ಶ್ರೀಮಂತಿಕೆಗಿಂತ ಅವರಲ್ಲಿ ತಿಳಿವಳಿಕೆ ಹೆಚ್ಚಾಗಿತ್ತು. ವಯಸ್ಸಿನಿಂದಲೂ ಹಿರಿಯರಾಗಿದ್ದರು. ಮಕ್ಕಳೆಲ್ಲ ಕೈಗೆ ಬಂದಿದ್ದರು. ಹಿರೇಮಗ ಗೌಡಿಕೆಯನ್ನೂ, ಚಿಕ್ಕವನು ಹೊಲಮನೆಗಳ ಮೇಲ್ವ...

ಇದು ನಮ್ಮ ಅಜ್ಜ ಹೇಳುತ್ತಿದ್ದ ಕಥೆ. ಅವರ ಕಾಲದಲ್ಲಿ ಊರಿನ ದೊಡ್ಡವರೆಂದರೆ ಪಟೇಲರು. ಅವರು ಸುಪ್ರೀಂ ಕೋರ್ಟು ಇದ್ದ ಹಾಗೆ. ಅವರಿಗೆ ಯಾರೂ ಎದುರಾಡುವಂತಿಲ್ಲ. ಎಲ್ಲಾ ವಿಷಯಗಳಲ್ಲೂ ಅವರದ್ದೇ ಅಂತಿಮ ತೀರ್ಮಾನ. ಅದು ಬ್ರಿಟಿಷರ ಕಾಲವಾದುದರಿಂದ ಊರಿನ ...

ಸಾಹುಕಾರನು ನೆಲಗಡಲೆ ತಿನ್ನುತ್ತ ತನ್ನ ಮನೆಯ ತಲೆವಾಗಿಲ ಮುಂದೆ ಕುಳಿತಿದ್ದನು. ಅತ್ತಕಡೆಯಿಂದ ಒಬ್ಬ ಸಾಧು ಬಂದು ಭಿಕ್ಷೆ ಬೇಡಿದನು. “ಮುಂದಿನ ಮನೆಗೆ ಹೋಗು’” ಎಂದು ಸಾಹುಕಾರನು ನುಡಿದನು. “ತಿನ್ನಲು -ನಾಲ್ಕು ಕಾಯಿಗಳನ್ನಾದ...

ಸದಾಶಿವರಾಯರು ಆ ಮಗುವನ್ನೇ ನೋಡುತ್ತಿದ್ದರು. ಅಂಬೆಗಾಲಿಟ್ಟು ತೆವಳುವ ಮಗುವಿನ ಚಲನವಲನಗಳು ಸೃಷ್ಟಿಸುವ ಭಾವನೆಗಳನ್ನು ಅವರು ಈವರೆಗೆ ಅನುಭವಿಸಿರಲಿಲ್ಲ. ನಿಧಾನವಾಗಿ ತೆವಳುತ್ತಾ ಒಮ್ಮೊಮ್ಮೆ ಹಿಂದಕ್ಕೆ ನೋಡುತ್ತಾ ತಾಯಿಯ ಮೆಚ್ಚುಗೆಗಾಗಿ ಹಂಬಲಿಸುತ...

ಚಿಕ್ಕ ಹಳ್ಳಿಯೊಂದರಲ್ಲಿ ಸಮಗಾರ ಗಂಡಹೆಂಡಿರಿದ್ದರು. ಗಂಡನು ಹಳೆಯ ಕಾಲ್ಮರೆಗಳನ್ನು ಗಟ್ಟಿಮಾಡಿಕೊಡುವ ಕೆಲಸಮಾಡುತ್ತಿದ್ದನು. ಇಡಿಯವಾರ ದುಡಿದರೂ ಅವನಿಗೆ ಒಂದು ರೂಪಾಯಿಗಿಂತ ಹೆಚ್ಚು ಗಳಿಕೆ ಆಗುತ್ತಿದ್ದಿಲ್ಲ. ನೆರೆಯೂರಿನ ಸಂತೆಗೆ ಹೋಗಿ ಉಪ್ಪು &...

ಅವಳು ಊರನ್ನು ಪ್ರವೇಶಿಸುವಾಗ ಬೇಕೆಂದೇ ತಡಮಾಡಿದ್ದಳು. ಮಬ್ಬುಗತ್ತಲಲ್ಲಿ ತನ್ನ ಗುರುತು ಯಾರಿಗೂ ತಿಳಿಯಲಾರದು. ನಾಲ್ಕು ವರ್ಷವಾಯಿತು, ಊರನ್ನು ಕಾಣದೆ. ಈಗ ಏನೇನೋ ಬದಲಾವಣೆಗಳಾಗಿವೆಯೋ? ಧುತ್ತೆಂದು ತಾನು ಪ್ರತ್ಯಕ್ಷಳಾಗಿ ಬಿಟ್ಟರೆ ಈಗಿನ ಹೊಸ ವಾ...

ಅತ್ತೆ ಸೊಸೆಯರು ಹಿತ್ತಲ ಮನೆಯಲ್ಲಿ ಒಂದಿಷ್ಟು ವಾದಿಸಾಡುತ್ತಿದ್ದರು. ಅಷ್ಟರಲ್ಲಿ ಹೊಲದಿಂದ ಮಗನು ಬಂದನೆಂದು ಅತ್ತೆ ಎದ್ದು ಹೋದಳು. ಮಗನಿಗೆ ಉಣಬಡಿಸಬೇಕಲ್ಲವೇ? ಊಟಕ್ಕೆ ಕುಳಿತ ಮಗನಿಗೆ ಉಣಬಡಿಸುತ್ತ ಹಗುರಾಗಿ ಎಳೆತೆಗೆದಳು ತಾಯಿ – &#822...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...