ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೫೬ ಶರತ್ ಹೆಚ್ ಕೆ June 9, 2024February 24, 2024 ಎದೆಯಲ್ಲಿ ಅದುಮಿಟ್ಟುಕೊಂಡ ಪ್ರೀತಿಯ ಹೇಗೆ ಹಾರಿ ಬಿಡಬೇಕೋ ತಿಳಿದಿಲ್ಲ ***** Read More
ಹನಿಗವನ ಉಮರನ ಒಸಗೆ – ೨೦ ಡಿ ವಿ ಗುಂಡಪ್ಪ June 4, 2024May 25, 2024 ಬಾಲ್ಯದಲಿ ತಾರ್ಕಿಕರ ತಾತ್ವಿಕರ ಸಭೆಗಳಿಗೆ ಆದರದೊಳಾಂ ಸಾರಿ ವಾದಗಳ ಕೇಳಿ, ಕಾದಾಟಕೆತ್ತ ಕೊನೆಯೆಂದು ಕಾಣದೆಯಿರಲು ಪೋದ ದಾರಿಯೊಳೆ ನಡೆಯುತ ಮರಳಿ ಬಂದೆಂ. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೫೫ ಶರತ್ ಹೆಚ್ ಕೆ June 2, 2024February 24, 2024 ಎದೆಯೊಳಗೆ ಒಲವಿನ ಹೂ ಮುಡಿಸಿದ ಹುಡುಗಿ ದೂರ ನಿಂತು ಕಣ್ಣರಳಿಸಿದ್ದಾಳೆ. ನನ್ನ ಕಣ್ಣಂಚು ಒದ್ದೆಯಾಗಿದೆ. ***** Read More
ಹನಿಗವನ ಉಮರನ ಒಸಗೆ – ೧೯ ಡಿ ವಿ ಗುಂಡಪ್ಪ May 28, 2024March 31, 2024 ಮುದಿ ಉಮ್ಮರನ ಕೂಡೆ ನಡೆ; ಪಂಡಿತರನ್ನೆಲ್ಲ ವಾದಿಸಲು ಬಿಡು; ದಿಟವಿದೊಂದಿಹುದು ಕೇಳು: ಬಾಳು ಅಳಿವುದೆ ದಿಟವು; ಮಿಕ್ಕೆಲ್ಲ ಸಟೆಯೆ ಸರಿ; ಒಮ್ಮೆ ಅರಳಿದ ಹೂವು ಬಾಡುವುದೆ ದಿಟವು. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೫೪ ಶರತ್ ಹೆಚ್ ಕೆ May 26, 2024February 24, 2024 ನೀನೆಂದರೆ ಮುನಿಸಿನ ಸಹವಾಸ ಅಚ್ಚಿಕೊಂಡಷ್ಟೂ ದೂರ ಸರಿಯುವ ಆಗಸ ***** Read More
ಹನಿಗವನ ಉಮರನ ಒಸಗೆ – ೧೮ ಡಿ ವಿ ಗುಂಡಪ್ಪ May 21, 2024March 31, 2024 ಪಂಡಿತರು ಶಾಸ್ತ್ರಿಗಳು ಸೂಕ್ಷ್ಮ ಚತುರತೆಯಿಂದೆ ಚರ್ಚಿಸಿಹರುಭಯಲೋಕಗಳ ಮರುಮಗಳ; ಅವರ ಪಾಡೇನಾಯ್ತು? ಉಳಿದರಂತವರೆಲ್ಲ, ಮಣ್ಣು ಬಾಯನು ಮುಚ್ಚೆ, ಸೋತು ಮಲಗಿದರು. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೫೩ ಶರತ್ ಹೆಚ್ ಕೆ May 19, 2024February 24, 2024 ಮನದಲ್ಲಿ ತೆರೆ ಕಾಣದ ಕನಸಿನ ಚಿತ್ರದ ಹೆಸರು ಅವಳ ಒಡಲು ***** Read More
ಹನಿಗವನ ಉಮರನ ಒಸಗೆ – ೧೭ ಡಿ ವಿ ಗುಂಡಪ್ಪ May 14, 2024March 31, 2024 ಇಂದಿಗೆಂದಾಯಾಸಪಡುವಂಗಮಂತಿರದೆ ನಾಳೆಯಿನ್ನೇನೆಂದು ಕೇಳ್ವಂಗಮಿಂತು ಕತ್ತಲೆಯ ಗೋಪುರದ ಗುರು ಸಾರ್ವನ್ : "ಎಲೆ ಮರುಳೆ! ಇರದು ಸೊಗಮಿತ್ತ, ನಿನಗಿರದದತ್ತಾನುಂ." ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೫೨ ಶರತ್ ಹೆಚ್ ಕೆ May 12, 2024February 24, 2024 ನಿನ್ನ ಹುಸಿ ಮುನಿಸಿನೆದುರು ಮಂಡಿಯೂರಿ ಕುಳಿತ ನನ್ನ ಅಹಂ ಮೂಳೆ ಮುರಿದುಕೊಂಡು ಮೂಲೆ ಸೇರಿದೆ ***** Read More
ಹನಿಗವನ ಉಮರನ ಒಸಗೆ – ೧೬ ಡಿ ವಿ ಗುಂಡಪ್ಪ May 7, 2024March 31, 2024 ಮಣ್ಣಿನೊಳಗಕಟ! ನಾಮಿಳಿಯುವಂದಿನ ಮುನ್ನ ಇನ್ನು ಮುಳಿದಿಹ ದಿನವ ಬರಿದೆ ನೀಗುವುದೇಂ. ಮಣ್ಣೊಳಗೆ ಮಣ್ಣಾಗಿ ಮಣ್ಣೊಡನೆ ಬೆರೆವುದೇಂ ಮಧು ಗೀತ ಸತಿ ಗತಿಗಳೊಂದನರಿಯದೆಯೆ? ***** Read More