Home / ಕವನ / ಕವಿತೆ

ಕವಿತೆ

ಕೋಲು ಕೋಲನ್ನ ಕೋಲೇ ರನ್ನದ ಕೋಲು…. ||ಪ|| ಶಾಲು ಬಣ್ಣದ ಹೊದ್ದೋನ್ಯಾರೆ ಲೋಲು ಕಿನ್ನುರಿ ನುಡಿಸೋನ್ಯಾರೆ ಬಾಲವೃದ್ಧರಿಗೆಲ್ಲ ಮೋಡಿಯ ಮಾಡೋನ್ಯಾರೆ ||ಅ.ಪ|| ಬಾವ್ಯಾಗೆ ಜಲಬತ್ತಿ ಬಾಯಾರಿ ನಾವೆಲ್ಲ ಇರುವಾಗ ಕಾವಾಳದೊಳಗೊಂದು ಕೋಲ್ಮಿಂಚು ಹೊಳ...

ಹೇ ಸಖೀ ಬೃಂದಾವನ ಎಷ್ಟು ಚೆಂದವೇ! ತೆತ್ತು ಕೊಂಡಿತಲ್ಲ ಇದು ಹರಿಗೆ ತನ್ನನೇ ಕುಣಿವ ರೀತಿ ಹರಿವಳು ಇಲ್ಲಿ ಯಮುನೆಯು ತುಳಸಿವನಕೆ ತರುವಳು ನಿತ್ಯ ನೀರನು ಹರಿಯು ತುಳಿದ ನೆಲವ ಸೋಕಿ ಅಲೆಯ ಕೈಯಲಿ ಹರಿನಾಮವ ಜಪಿಸುತಿಹಳು ಮಧುರ ದನಿಯಲಿ! ಕಾಮಧೇನು ಹಿ...

ಅಕ್ಷರ ಜ್ಯೋತಿಯ ಬೆಳಗೋಣ ನಾವ್ ಅಕ್ಷರ ಸುಖವನು ಪಡೆಯೋಣ ||ಪ|| ಬಾಳಿನ ನೆಮ್ಮದಿ ಸುಖ ಸೌಭಾಗ್ಯದ ಮನ್ವಂತರಕಿದು ಮೊದಲ ಪಣ ನೂತನ ಸಮಾಜ ಕಟ್ಟೋಣ ನಾವ್ ಭವ್ಯ ಭಾರತವ ಬೆಳೆಸೋಣ ||೧|| ಅಜ್ಞಾನವೆಂಬ ಕತ್ತಲೆ ಮನೆಯಲಿ ಕೊಳೆಯುತ ಬಾಳೋದು ಸಾಕಣ್ಣ ಜ್ಞಾನದ ...

ಭಾರೀ ಸರಕೇ ದೊರಕಿದೆ ನನಗೆ ಇಲ್ಲ ಸಣ್ಣ ಬಯಕೆ – ನನಗೆ ಇಲ್ಲ ಏನೂ ಕೊರತೆ ಗಂಗೆಯಾಳದಿ ಈಜುವ ಮೀನಿಗೆ ಕಿರಿಯ ಕೆರಗಳೇಕೆ? ವಿಶಾಲ ಆಲವೆ ಆಸರೆ ನೀಡಿದೆ ಕುರುಚಲು ಗಿಡ ಬೇಕೆ? ಎತ್ತರ ಶಿಖಿರಕೆ ತುಡಿಯುವ ಕಾಲಿಗೆ ದಿನ್ನೆ, ಮರಡಿ ಸಾಕೆ? ಲೋಕದ ಸ್...

ನಗ್ತರಲ್ಲೋ ತಮ್ಮ ನಮ್ಮನ್ನು ನಗ್ತಾರಲ್ಲೋ ಅಣ್ಣಾ ||ಪ|| ಎದುರಿಗೆ ಕೊಂಡಾಡಿ ಭಾಷಣ ಬಿಗಿದಾಡಿ ಹಿಂದಿಂದೆ ನಗ್ತಾರೋ ತಮ್ಮಾ ನಮ್ಮನ್ನು ನಗ್ತಾರಲ್ಲೋ ಅಣ್ಣಾ ||ಅ.ಪ.|| ನೀನೇ ದೇಶಕ್ಕೆ ಬೆನ್ನೆಲುಬು ಅಂತಾರೆ ತಾಂಡವ ತುಳದಾರೆ ಮ್ಯಾಲೆ ದೇಶಕ್ಕೆ ಅನ್ನ...

ಹೇಗೆ ಹೋದನೇ ಹರಿ ನಮ್ಮನೆಲ್ಲ ತೊರೆದು ಹೇಗೆ ಹೋದ ಮಧುರೆಗೆ ನಮ್ಮೆದೆಯನು ಇರಿದು? ಮಾಯೆಯನ್ನು ಹರಡುತಿದ್ದ ಮುರಳಿಯನ್ನು ತ್ಯಜಿಸಿ ಮೈಗೆ ಒರಗಿ ನಿಲ್ಲುತಿದ್ದ ಸುರಭಿ ಹಿಂಡ ಸರಿಸಿ ನಂದಗೋಪಿ ಬಂಧು ಬಳಗ ಎಲ್ಲರ ಹುಸಿ ಮಾಡಿ ಹೋದನಲ್ಲ ಕೊನೆಗೂ ಮಧುರೆಯ ...

ದುಡಿಮೆಯೆ ದೇವರು ದುಡೀ ದುಡೀ ಅಕ್ಷರ ಬ್ರಹ್ಮನ ಪಡೀ ಪಡೀ ||ಪ|| ಭೂಮಿ ತಾಯಿಯು ದುಡಿತಾಳೆ ಸೂರ್ಯ ಚಂದ್ರರು ದುಡಿತಾವೆ ಗಾಳಿ ಬೀಸುತಾ ನೀರು ಹರಿಯುತಾ ಬೆಂಕಿ ಉರಿಯುತಾ ದುಡಿತಾವೆ ||೧|| ದುಡಿಮೆಯಿಂದಲೇ ಕೋಟೆ ಕೊತ್ತಲ ವೈಭವ ರಾಜ್ಯವು ಮೆರೆದಾವೆ ಗ...

ನನ್ನ ಶ್ಯಾಮನ ಮಂದಹಾಸ ಮಿಂಚುವ ಮುಖ ಕಾಡುವುದೆ ಸಖಿ ನನ್ನ ಇರುಳಿನಲ್ಲಿ, ಕುಡಿನೋಟ ಚಿಮ್ಮುವಾ ಬಾಣಗಳು ಎದೆ ತಾಗಿ ಹೊರಳುವೆನು ನಾ ಮಧುರ ನೋವಿನಲ್ಲಿ. ಕರಯುವಳು ನನ್ನ ಸಖಿ “ಬಾರೆ ಮಿರಾ ಬಾರೆ ಕಟ್ಟಲೇನೇ ಕೈಗೆ ತಾಯಿತವನು? ಬೇರು ಮೂಲಿಕೆ ತಂದ...

ಧರ್ಮಾ ಧರ್ಮಾ ಅಂತಾರೋ ಎಲ್ಲಿದೆ ಧರ್ಮಾ ತೋರಿಸರೋ ||ಪ|| ನಮ್ಮದು ಧರ್ಮಾ ನಿಮ್ಮದು ಧರ್ಮಾ ಅವರದು ಧರ್ಮಾ ಅಂತಾರೆ ಜನಗಳ ನಡುವೆ ಗೋಡೆಗಳೆಬ್ಬಿಸಿ ಆಗಸ ಕಾಣದೆ ನಿಂತಾರೆ ||೧|| ಕೊಂಬಿ ರೆಂಬಿಗಳ ಜೋತು ಬಿದ್ದು ಅವುಗಳೆ ಮರ ಮರ ಅಂತಾರೆ ಬೊಡ್ಡೆಗೆ ಕ...

ಕೃಷ್ಣ ಬಂದನೆ ಸಖೀ ನೋಡು ಹೊರಗೆ ಶುಭ ಶಕುನವಾಗುತಿದೆ ಎಲ್ಲ ಕಡೆಗೆ! ಶ್ರಾವಣದ ಮೋಡ ಸುರಿಯುತ್ತಿವೆ ಕಾದಿರುವ ಭೂಮಿಗೆ ನೀರಧಾರೆ, ಬಾನು ಗುಡುಗಿನ ತಬಲ ನುಡಿಸುತ್ತಿದೆ ನಡುನಡುವೆ ಹೊಂಚುತಿದೆ ಮಿಂಚು ಬೇರೆ, ಕೋಗಿಲೆ ಮಯೂರ ಕೇಕೆ ಹಾಕಿ ಆಗಸದ ಪ್ರೀತಿಗ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...