Home / ಕವನ / ಕವಿತೆ

ಕವಿತೆ

ಹೋಯಿತೆಲ್ಲಿ ನಿಸರ್ಗದ ದಟ್ಟ ಹಸಿರು ಹೋದರೆಲ್ಲಿ ಪ್ರೀತಿಯೊಡಲಿನ ಅಜ್ಜ ಅಜ್ಜಿ ಹೋದವೆಲ್ಲಿ ಸಂಭ್ರಮದ ಹಬ್ಬ ಹರಿದಿನಗಳು ಹೋದವೆಲ್ಲಿ ಡೊಳ್ಳಾರಗಿ ಕೌದಿ ಹೊರಸು ಸಂಬಂಧಗಳು ವಿಶ್ವಾಸಗಳು… ಬಿಕ್ಕದರೇನೀಗ, – ನಸುಕಿನ ಕೋಳಿಕೂಗಿಗೆ ನಡುರಾತ...

ತಾವರೆಯಿಲ್ಲ ತಾವರೆಯ ಎಲೆಯಿಲ್ಲ ಬೀಳುವ ಹೂವಿಲ್ಲ ಹೂಬಿಡುವ ಮರವಿಲ್ಲ ದಾಟಿಸುವ ಅಂಬಿಗನಿಲ್ಲ ಕಾದು ನಿಂತ ದೊಣಿಯಿಲ್ಲ ಆಕಾಶದಲ್ಲಿ ಚಂದ್ರನಿಲ್ಲ ನಕ್ಷತ್ರಗಳಿಲ್ಲ ಬೀಸುವ ಗಾಳಿಯಲ್ಲಿ ಹಾಡುವ ಹಕ್ಕಿಗಳಿಲ್ಲ ಪಾದ ತೊಳೆವ ಅಲೆಗಳಲ್ಲಿ ಮುತ್ತಿಡುವ ಮೀನುಗ...

ನಂಬಿದವರ ಎಂದೆಂದೂ ಕಾಯುವ ಗೋವಿಂದ ಬಿಡಿಸು ದಾಸಿ ಮೀರೆಯ ಲೋಕದ ಸುಳಿಯಿಂದ. ನಾಮದೇವ ಗೃಹದ ಮುಂದೆ ಚಪ್ಪರವನು ಕಟ್ಟಿದೆ ಧನ್ನಾಭಕ್ತನ ಹೊಲದಲಿ ಬೆವರ ಸುರಿಸಿ ಬಿತ್ತಿದೆ, ಕರಮಾಬಾಯಿ ನೀಡಿದ ಖಿಚಡಿಯೆಲ್ಲ ತಿಂದೆ ಭಕ್ತ ಕಬೀರನ ಮನೆಯ ಎತ್ತು ಹೊಡೆದು ತಂ...

ಮರಿಗಿಳಿಯನ್ನು ಕಾಡು ಬೆಕ್ಕು ಹೆದರಿಸುತ್ತಿದೆ ಬಳ್ಳಿ ಚಿಗುರಿನ ಸುತ್ತ ಕತ್ತಿ ಕತ್ತರಿಗಳು ಕುಣಿಯುತ್ತಿವೆ ಹೂ ಪಾದದ ಕೆಳಗೆ ಮುಳ್ಳು ಹರವುತ್ತಿವೆ ಆಶ್ರಮ ಶಾಂತಿಯಲ್ಲರಳಿದ ಕಿವಿಗಳ ಮೇಲೆ ಕೋಲಾಹಲದಲೆಯಪ್ಪಳಿಸುತ್ತಿವೆ ಮರಣದಾಚೆ ಇಣುಕಿ ಬಂದವನಿಗೆ ಉ...

ಅಂತರಿಕ್ಷ ನೌಕಾ ನಡುಮನೆಯೊಳಗೆ ಸುತ್ತು ಹೊಡೆದೂ ಹೊಡೆದೂ ಚಂಗನೆ ಆಕಾಶಕ್ಕೇರಿ ಪೆರಡೈಸ್ ನೋಡಿ ಮೊನ್ನೆಯಷ್ಟೇ ಬಂದಿಳಿದ ಡೆನಿಸ್ ಟಿಟೋ ಮಾತಿಗೆ ಸಿಕ್ಕ. ಎಂಥಾ ಛಲಗಾರನೋ ನೀನು ಟಿಟೋ ಕನಸು ನನಸಾಗಿಸಿಕೊಂಡು ಬಿಟ್ಟೆ ಹಣ ಇದ್ದರೇನಂತೆ ಸರಿಸಾಟಿ ಧೈರ್ಯವ...

ಬೇಂಡು ವಾದ್ಯಗಳು ನಿಂತು ದೀಪಗಳು ಆರಿ ಊರವರು ಅವರವರ ಮನೆಗಳಿಗೆ ತೆರಳಿ ಆನೆ ಕುದುರೆಗಳನ್ನು ಲಾಯದಲಿ ಕಟ್ಟಿ ಇಡಿಯ ಜಗತ್ತೇ ಮಲಗಿರುವ ಸಮಯ ಅದು ಬಫೂನನ ಸಮಯ ಕೆಂಪು ಮಣ್ಣಿನ ಗೆರೆಗಳು ಬಿಳಿಯ ಸುಣ್ಣದ ಬೊಟ್ಟುಗಳು ಇನ್ನೂ ಮಾಸಿಲ್ಲ ಮೂಗಿನ ಮೇಲೆ ಮೊಂಡ...

ಅಮ್ಮಾ! ನಿನ್ನ ಕಥೆಯ ಕೀರ್ತಿಸುತ ನಿಂತವರು ಬಹಳ, ನಿನ್ನ ಮೈಯಂದವ ಅಂದಗೆಡುವಷ್ಟು ಹಾಡಿ ಹೊಗಳಿದವರು ಬಹಳ, ಕಲ್ಪನೆಯ ಕುಂಚದಲಿ ಬಣ್ಣಿಸಿದವರು ಬಹಳ ನಿನ್ನ ಗುಡಿಯ ಸಾಲು ಸಾಲಭಂಜಿಕೆಗಳ, ಮದನಿಕೆಗಳ ಕುಸುರಿಗೆಲಸಗಳ ನೋಡಿ ಮರುಳಾಗಿ ಬಾಯ್ತೆರೆದು ಅಲ್ಲೇ...

ಹದಿಹರೆಯದವರ ಮರೆತಜಗತ್ತು ಮೊದಲೆರಡು ಸೀಟುಗಳಲಿ; ಹಿಂದೆ ಅಲ್ಲಲ್ಲಿ ಇಣುಕಿ ಹಾಕಿದ ಬಿಳಿಕೂದಲಿನ ಮಧ್ಯವಯಸ್ಕರ ಆಲೋಚನಾ ಮಾತುಕತೆ; ಇನ್ನೂ ಹಿಂದೆ ನೆರಿಗೆಹೊತ್ತ ಕೋಲು ಹಿಡಿದವರ ಗಂಭೀರ ನಿದ್ದೆ; ಬೋನಸ್‌ದಿನಕ್ಕೆ ಖುಷಿಪಟ್ಟು ಮೊಮ್ಮಕ್ಕಳು ತಿನಿಸಿದ ...

ಹಳೆಗನ್ನಡದ ಆಸೆ ಕರೆಯಿತು ನನ್ನ ಶತಮಾನಗಳ ಕೆಳಗೆ, ಸೆಳೆಯಿತು ನಾನರಿಯದ ಪರಂಪರೆಗೆ, ಭಾಷೆಗೆ, ಭಾಷೆ ಹತ್ತಿರವಾಯಿತು ಎನಿಸಿದ ಬಗೆಗೆ. ಉದಾಹರಣೆಗೆ: ಆ ಸೂತ ಆ ರಾಣಿಯ ಹಾರ ಕಿತ್ತುಕೊಂಡ ರೀತಿಯಷ್ಟೆ ಅಲ್ಲ, ಅದರ ಹರಳುಗಳು ನೆಲದಲ್ಲಿ ಚೆಲ್ಲಿದ ರೀತಿ. ...

ಇನ್ನೂ ಅರ್ಥಾಗಲಿಲ್ಲೇನ್ನಿನ್ಗೆ ನಾಕಕ್ಸರಾ ಬಾಯಾಗಿಟಗಂಡು ನಾಕ ಪುಸ್ತಕಾ ತಲೆಯಾಗಿಟ್ಟುಗಂಡು ನಾಕ ಕಾಸ ಕೈಯಾಗಿಟಗಂಡು ಯಾಕ ಮೆರೀತಿಯಲೇ ಬಾಯಾಗೇ ಅಂತ್ರಕ್ಕೇಣೀ ಹಾಕ್ತೀ ಸಮತಾ, ಸೋದರತಾ, ಗಾಂಧಿ ತಾತಾ ಅಂತಾ ಬಂಗಾರದೊಳ್ಳೊಳ್ಳೆ ನಾಣ್ಣಿಗಳನ್ನ ಒದರಿ ಒ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....