Home / ಕವನ / ಕವಿತೆ

ಕವಿತೆ

“ವಾರಿಧಿಯ ತೆರೆಗಳನು ತಬ್ಬಿ ಚುಂಬಿಸಿದ ರವಿ. ಇರುಳು ಬರೆ ಪೆರೆಯ ದೌತ್ಯದಿ ತನ್ನ ಸಂದೇಶ- ವರುಹಿದನು ಸಂತಸದೊಳುಬ್ಬೆ ಸಾಗರದೆದೆಯು. ಮಾರನೆಯ ದಿನ ಸೂರ್ಯ ಪ್ರಿಯೆಗೆ ಹೊಂಗಿರಣಗಳ ಸೀರೆಯುಡಿಸುತ ನಲಿದ. ತೆರೆಗೊಂದು ರವಿಯಾಗಿ ನೀರ ಕೇಳಿಯನಾಡಿ ...

ನನ್ನ ಜೀವವರ್ತುಲಕೊಂದೆ ನಾನೆ ಅಮೃತ ಬಿಂದು ನನ್ನ ನಭೋಮಂಡಲಕೆ ನಾನೆ ಭಾನು ಇಂದು ನನ್ನ ಮನದ ಸರಸಿನೊಳೆಲ್ಲ ನಾನೆ ಮೀನ ಮೀಯು ನನ್ನ ಬಸಿರ ಬಯಲಿನಲಿ ನಾನೆ ಪ್ರಾಣವಾಯು ಹಕ್ಕಿಯಾಗಿ ಹಾರುತಲಿರುವೆ ನನ್ನ ತೋಟದಲ್ಲಿ ಸೊಕ್ಕಿದ ಗಜ ಧುಮಕುವೆ ನಾ ನನ್ನರಣ್ಯ...

ಇಹುದೆನ್ನಲಿರವಿಲ್ಲ ಇಲ್ಲವೆನಲಿಹುದಿರವು ಇದರ ತೆರವರಿವರಾರವನೊಬ್ಬ ಹೊರತು ಜನ್ಮಮೃತ್ಯುಗಳೆರಡು ತುದಿನಡುವೆಯಾಡುವೀ ಜೀವಲೀಲೆಯ ಮರ್ಮವೊರೆವರಾರರಿತು? ಬಿಂದು ಬಹುವಾಗೊಡೆದು ಅಂಗಾಂಗವಾಗುತ್ತ ಒಂದಾತ್ಮ ತಾನ್ನೆನ್ನುವನುಭಾವಹೊಂದಿ ಪಂಚಭೂತಗಳೊಡನೆ ಅದು-...

೧ ನನ್ನೆರಕ ನಿನ್ನಲ್ಲಿ ನೀನು ನನ್ನಿಸಲೊಲ್ಲಿ ಏಕಿಂಥ ಮನಸುಗೇಡು? ಮನ್ನಿಸೀ ಮನವಿಯನು ನನ್ನಿಸಿನ್ನಾದರೂ ಬಿಡು ಅಂಥ ಪಂಥಪಾಡು! ೨ ತಿಂಗಳಿನ ಒಡಲೊಳಗೆ ಬೆಳ್ದಿಂಗಳಡಗೀತೆ- ನೈದಿಲೆಯದಿಲ್ಲದಾಗೆ? ಇಂಗಡಲು ಇಂಗೀತೆ? ನನ್ನಿಯದು ಹಿಂಗೀತೆ? ಇಂಗಿತವ ಕಾಣೊ ...

ಹಿಡಿಯಿರಿ, ಹಿಡಿಯಿರಿ, ಕಳ್ಳನ ಹಿಡಿಯಿರಿ, ಯೆನ್ನಯಮನ ಕದ್ದೊಡುತಿಹ| ತಡೆಯಿರಿ ಅವನನು ಬಂಧಿಸಿಕೆಡಹಿರಿ ನಿಮ್ಮಯ ಮನದ ಬಂದಿಯಲಿ || ೧ || ಎಂದಿಗು ಕಳ್ಳನು ಗೊಲ್ಲಬಾಲನಿವ ಗೋಪಿಯ ಬೆಣ್ಣೆಯ ಕದ್ದಿಹೆನೂ | ತಂದೆಯ ಮನೆಯಲಿ ಗೊಂದಲವೆಬ್ಬಿಸಿ ಸರುವರಮನನ ...

೧ ಮೊದಲು ಮುಂಜಾನೆಯದು ಮುಗುಳು ನಗು ನಗುತ, ಬಳಿಕ ಮಧ್ಯಾಹ್ನವದು ಬಿರುಸು ನಗೆಯುಗುತ, ಕಡೆಗೆ ಸಂಜೆಯ ಸಮಯ ಸೌಮ್ಯವಾಗುತ್ತ, ಕತ್ತಲೆಯ ಕಾಲಿಮೆಯೆ ಪರಿಣಾಮವು ೨ ಮರದ ರೆಂಬೆಗಳಲ್ಲಿ ಮೊಗ್ಗೆ ಮೊದಲೊಗೆದು, ಸರಿಯಾದ ಸಮಯಕ್ಕೆ ಸುಮವಾಗಿ ಬಿರಿದು, ದಿವಸದವಸ...

ಬಂತು, ಬಂತು, ವಿಕ್ರಮ! ತಂತು, ತಂತು, ಸಂಭ್ರಮ! ೧ ಕೊನೆಯ ಹಸುರ ಜತೆಯಸೇರಿ ಒಲುಮೆ ಮಿಲನ ಗೆರೆಯಕೂಡಿ ಬೆಳೆಯಬಾಳ, ಬಣ್ಣ ತೋರಿ ಬಂತು, ಬಂತು, ವಿಕ್ರಮ! ತಂತು, ತಂತು, ಸಂಭ್ರಮ! ೨ ಕಿರಿಯ ಎಳೆಯ ಬಾಲರೆಡೆ ಕೆಳೆಯ ಗೆಳತಿ ಮಿಳಿತದೆಡೆ ಹೊಸದುಹಾಡಿ, ಹರು...

ಹಿಂಸಿಸುವರು ನನ್ನನ್ನು ಸಾಮ್ರಾಜ್ಯವಾದಿಯೆಂದು: ದೂಷಿಸುವರು ನನ್ನನ್ನು ಮಹಾಪಾತಕಿಯೆಂದು. ಶಕ್ತಿಹೀನರ ಉಕ್ತಿಗಳಿವು, ಬಲವಂತರ ಬಲ್ನುಡಿಯಲ್ಲ! ಪಂಜರದಿಂದ ಇಲಿಯನ್ನು ಹಿಡಿದ ಬೆಕ್ಕಿಗೆ ಹೇಳಿರಿ-ತಿನ್ನದಿರೆಂದು. ಆನೆಯ ತಲೆ-ಮುತ್ತನುದುರಿಸಲು ಕಾಲೆತ್...

ಹೋಳಿಗತ್ತು:-ಪಾರೋತಿ ಮಾದೇವ, ಏರಿಸಬದಾಗಿರಲು ಪಾರೋತಿ ಹೇಳ ಚೆಲುವ್ಯಾರ | ಕೇಳುದಕ          ತೀರ ಚೆಲುವಾನ ಕಾಮಣ್ಣ  ೧          ಸಿಟ್ಟಿಗೇಳುತ ಶಿವನು, ಬಿಟ್ಟಾನೊ ಉರಿಗಣ          ಸುಟ್ಟು ಬೂದ್ಯಾದೊ ಕಾಮಣ್ಣ | ರತಿದೇವಿ          ಹೊಟ್ಟಿ ...

೧ ಹನ್ನೆರಡು ವರುಷಗಳು ಮೇಲೇಸೊ ದಿವಸಗಳು ಭೂತಕಾಲದ ಗರ್ಭಗೋರಿಯಲ್ಲಿ; ಉರುಳಿ ಹೋದರು ಕೂಡ ಮರಳಿ ಸುಳಿದಾಡಿಹವು ನೊಂದ ಜೀವಿಯ ಮನದ ರಂಗದಲ್ಲಿ. ೨ ಕವಿ ಶಿಸುವ ಬೆಳೆಸಿರುವ ಮೊಲೆಹಾಲನುಣಿಸಿರುವ ವಿಜಯಪುರವೇ ನಿನ್ನ ಮರೆಯಲಾರೆ; ನೂರಾರು ಮೈಲುಗಳ ಗಡಿಯಾಚ...

1...3031323334...626

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...