Home / ಕವನ / ಕವಿತೆ

ಕವಿತೆ

“ಕಂದ, ಕೇಳುತ್ತಮದ ರಾಜ್ಯ ಒಂದಿಹುದು: ಮಂದಿ ಎಲ್ಲವು ಸುಖದಿ ಬಾಳುತ್ತಲಿಹುದು;” ಎಂದು ನೀನಾಡುವಾ ರಾಜ್ಯವೆಲ್ಲಿಹುದು? ಕಂದನಲಿ ಕರುಣಿಸುತ ಇಂದು ತಿಳಿಸಮ್ಮಾ! “ಕಿತ್ತಳೆಯ ಮರಗಳಲಿ ಹೂಗಳರಳುತ್ತ ಎತ್ತಲೂ ಮಿಂಚುಹುಳು ಚಿಮ್ಮಿ ಕ...

ಬ್ರಹ್ಮಮಾನಸ ಸರೋವರದಲಿ ನಾವು ತೇಲುವ ಚಲುವರು ವಿಮಲ ಮಾನಸ ಕಮಲ ವನದಲಿ ನಾವು ನವಯುಗ ರಾಜರು ಉಸಿರು ಉಸಿರಲಿ ಶಿವನ ಹೆಸರನು ಬರೆದ ಶಿವಾಚಾರ್ಯರು ಲಕುಮಿ ನಾರಾಯಣರು ನಾವೇ ದೇವ ಯುಗದಾ ಪೂಜ್ಯರು ನಾವು ಜ್ಯೋತಿರ್‍ಬಿಂದು ರಥಿಕರು ಜ್ಯೋತಿ ಸಾಗರ ಪಥಿಕರು...

ಹರಿದ ಸೀರೆಯಲಿ ನೂರೆಂಟು ತೇಪೆಯ ಚಿತ್ತಾರ ಅರಿಶಿನದ ಓಕುಳಿ ಕೆನ್ನೆಗೆ ಹಣೆಯಲಿ ಕಾಸಿನಗಲದ ಕುಂಕುಮದ ಸಿಂಗಾರ ಮುಡಿಯಲ್ಲಿ ಮಾಸದ ಹೂವಿನ ದಂಡೆ ಮುಗ್ಧ ಮಗುವಿನ ಮೊಗ ಅಲ್ಲಿ ನಗುವೆಂಬ ನಗ ಕಂಗಳಲ್ಲಿ ಬತ್ತದ ವಾತ್ಸಲ್ಯದ ಒರತೆ ಆಧುನಿಕ ಗಂಧಗಾಳಿಯ ಕೊರತೆ...

ಬಿಟ್ಟು ಬಿಡದೇ ನಡೆದೆ ನಡೆದರು ದಾರಿತುಂಬ ಕಲ್ಲು ಮಣ್ಣು ಹೆಂಟೆಗಳು. ಹಟ್ಟಿಯ ಮಾಡಿನಲಿ ಗುಬ್ಬಚ್ಚಿ ಗೂಡು. ಪುಟ್ಟ ಸೇತುವೆಯ ಕೆಳಗೆ ಸಳಸಳ ಮೀನುಗಳು, ಎಲ್ಲಾ ಗಿಡಗಳ ತುಂಬ ಹಕ್ಕೀ ಹಾಡು. ಹಸಿರು ಸೊಂಪಿನ ದಾರಿತುಂಬ ಕಂಡ, ಬೇಟೆಯ ಹೆಜ್ಜೆಗಳು, ಏರು ದ...

ನೆಹರು ನಿಮ್ಮ ನೆನಪು ನಮ್ಮೆಲ್ಲರ ಅಂತರಂಗವ ತುಂಬಿ ಬರಡಾಗಿದ್ದ ನೆಲವು ಹಸಿರಾಯ್ತು ನಿಮ್ಮ ನೆನಪು ಹೊನಲ ಚುಂಬಿ || ವರುಷವು ಉರುಳಿ ಬರಲು ನಿಮ್ಮ ನೆನಪು ಭಾವನೆ ಚೆಲುವ ಕವಲೊಡೆದ ಸಸಿಯು ಚಿಗುರಿ ಮೊಗ್ಗರಳಿ ಚೆಂಗುಲಾಬಿ ಕರೆಯುವಲ್ಲಿ || ಪಂಚಶೀಲ ದಿವ...

ಆನಂದ ತನುಜೆ, ಅನುಭೂತಿಯನುಜೆ, ಅದ್ಭುತ ಪವಾಡದಂತೆ ಓ ಜಾತಿವಂತೆ ನನ್ನಿದಿರು ಧ್ಯಾನದಲಿ ಮಗ್ನಳಾಗಿ ನಿಂತೆ ದಿಗ್ದಂತಿದಂತ ಚಾಚಿರುವನಂತದಾಚೆಯಲಿ ನಿನ್ನ ಚೂಚು ಏನು ಹಾರಿಕೆಯ ದೌಡು ಇಡುವೆ ಆ ಚಿರಂತನದ ಕೂಚು. ಗಗನ ಶಿಖರಕೇರುತ್ತ ನಡೆದೆ ಹೇ ಗಗನ ದೇಹ ...

(ಒಂದು ಕತೆ) ಚೆಲುವು ಹಿರಿಯದೊ-ಹೃದಯ- ದೊಲವು ಹಿರಿಯದೊ? ಚೆಲುವಿನಲಿಯೆ ಒಲವು ಇಹುದೊ? ಒಲವಿನಲಿಯೆ ಚೆಲುವು ಇಹುದೊ? ಎಳೆಯ ಚೆನ್ನನೊಬ್ಬನಿಂದು ಕೆಲೆದು ಕುಣಿದು ಆಡಿ .ಹಾಡಿ, ಕುಳಿತ ಜನರ ಕಣ್‌-ಮನಗಳ ಸೆಳೆದುಕೊಂಡ ಸೊಬಗನೂಡಿ. ನೆರೆದ ಮಂದಿಯಲ್ಲಿ ಒಂ...

ಜೀವನವೆಂದರೆ ಬರೀ ದುಡ್ಡಿನ ದುಡಿಮೆಯದಲ್ಲಾ| ಜೀವನವೆಂದರೆ ಬರೀ ಸದಾ ಸಮಯದ ಹಿಂದೆ ಓಡುವುದಲ್ಲಾ|| ಜೀವನವೆಂದರೆ ಬರೀ ಇತರರಿಗೆ ನ್ಯಾಯ ಹೇಳುವದಲ್ಲ ಜೀವನವೆಂದರೆ ಬರೀ ಓದು ಬರೆಯುವುದಲ್ಲಾ| ಜೀವನವೆಂದರೆ ಬರೀ ನೀತಿಯ ಪಾಠವ ಬೋದಿಸುವುದಲ್ಲ ಜೀವನವೆಂದರ...

ಬೆಂದಮನೆ ಭಾರತದಲ್ಲಿ ಕನ್ನಡಿಗಳ ಕೊಂದವರು ಮುಖಕಾಣದ ಮನೆಯಲ್ಲಿ ಬೆನ್ನುಡಿಗಳ ಬರೆ ಹಾಕಿ ಮುನ್ನುಡಿಗಳ ಮಾರಿದರು. ಅಕ್ಷರಗಳ ಒಡಲಲ್ಲಿ ಭ್ರೂಣಗಳ ಕೊಂದವರು ಪುಟಪುಟದ ಸುಳ್ಳಿನಲಿ ಕಂತೆಗಳ ಕಟ್ಟುತ್ತ ಜಂತೆಗಳ ಕಿತ್ತರು ಗೋಡೆಗಳು ಗೋಳಿಡುವಾಗ ಗೂಡುಗಳು ಗ...

ಚಲುವ ಕನ್ನಡ ನಾಡ ಮಣ್ಣೊಳಾದೀ ದೇಹ ಬೆಳೆದು ಕನ್ನಡ ತಾಯ ತೊಡೆಯಮೇಲೆ ಇಂಬಾಗಿ ಮಲಗಿರಲು ಹಾಡಿ ಕನ್ನಡಗಬ್ಬ ಹೃದಯದಲಿ ತುಂಬಿದಳು ರಸದ ಹಬ್ಬ. ಕನ್ನಡಿಗನಾನೆಂಬ ವಜ್ರಕವಚವ ತೊಡಿಸಿ ರಾಗರಸಭಾವಗಳ ಮನದೊಳಿಡಿಸಿ ಕನ್ನಡದ ಹಿರಿಮೆಗಳ ಹಾಡೆಂದು ಮನಗೊಟ್ಟು ಕನ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...