ತುಂಬಿ ಬಂದ ಕಡಲಿನಲಿ
ಅಲೆ ಇಡುವ ಮುತ್ತಿನಲಿ
ಏಕೆ ಕಾಡುವೆ ನಿನಗೆ ಕರುಣೆ ಬೇಡವೆ?
ಹುಣ್ಣಿಮೆಯ ರಾತ್ರಿಯಲಿ
ಬೆಳದಿಂಗಳ ಮಳೆಯಲಿ
ತೋಯಿಸಬೇಡ ನನ್ನ ನೋಯಿಸಬೇಡ
ತಾರೆಯ ಕಣ್ ಹೊಡೆತದಲಿ
ರಭಸದ ಎದೆ ಬಡಿತದಲಿ
ಸಿಲುಕಿಸಬೇಡ ನನ್ನ ಕೈ ಬಿಡಬೇಡ
ಮುಸ್ಸಂಜೆಯ ಕೆಂಪಿನಲಿ
ಕಣ್ತುಂಬಿದ ಕನಸಿನಲಿ
ಪ್ರೇಮದ ಬರಹ; ಇಲ್ಲ ಯಾವುದೇ ವಿರಹ
ಕಣ್ತೆರೆದ ನಿಜದಲಿ
ಒಂಟಿ ಹಕ್ಕಿ ಬಾನಲಿ
ಹಾಡಿದೆ ಶೋಕ; ಧರೆಯ ಮಾಡಿದೆ ಮೂಕ
*****