ಕುಂಟಯ್ಯಾ ನಿನ್ನಲ್ಲೇ ಸತ್ಯಕಿ ಉಂಟಯ್ಯಾ ||ಪ|| ಎಂಟು ದಿಕ್ಕನು ಒಯ್ದು ಒಂಟಿ ಬಾಯೊಳಗಿಟ್ಟು ಸುಂಟರಗಾಳಿಗೆ ಸಿಗದ ಮಹಾತ್ಮನೆ ||೧|| ಬಯಲು ಬ್ರಹ್ಮಜ್ಞಾನಿಯಂದೆನಿಪ ನೆಲಗುಡ್ಡ ದಯದ ಯೋಗಿಯ ಮನಕೆ ಒಲಿಸಿದ ಮಹಿಮನೆ ||೨|| ವಸುಧಿಪ ಶಿಶುನಾಳಧೀಶನ ಮಗನಿ...

ದಾಸರೋ ಹರಿದಾಸರೋ ||ಪ|| ದಾಸರೆನಿಸಿ ಧರ್ಮ ಹಿಡಿದು ಆಸೆ ಕಡಿದು ತೂರ್ಯದಲ್ಲಿ ಕಾಸು ಕವಡಿ ಕಾಲಿಲೊದ್ದು ಈಶನೊಲಿಸಿಕೊಂಬುವಂಥಾ ||೧|| ಸ್ವಾಮಿ ಕೇಶವ ಅಚ್ಯುತ ಗೋಕುಲದ ಗೋವಿಂದ ರಾಮ ಕೃಷ್ಣ ಎಂಬ ಪಂಚ- ನಾಮ ನಿತ್ಯ ಪಠಿಸುವಂಥ ||೨|| ತನುವ ತಂಬೂರಿ ಮಾ...

ಹುಬ್ಬಳ್ಳಿಯೊಳು ಮನಿ ಮಾಡಿದ್ಯಾ ಅಬ್ಬರದಿ ಮಾಂತನೊಳು ಕೂಡಿದ್ಯಾ ||ಪ|| ಮಂಗಳಾತ್ಮನೊಡನೆ ಮಾತಾಡಿದ್ಯಾ ಗಂಗಾಧರನಿಗೆ ಕೋರಿಯ ಬೇಡಿದ್ಯಾ ||೧|| ಮರ್ಟಾಳ ಪತಿಯ ಪದವ ಹಾಡಿದ್ಯಾ ಕಾಟ ಕರ್ಮ ಕಳಿದು ಈಡ್ಯಾಡಿದ್ಯಾ ||೨|| ತಾನರಸಿ ವಿಷಯ ಕಲಿ ದೂಡಿದ್ಯಾ ದ...

ಒಡೆಯ ಬಸವಲಿಂಗಾ ಜಂಗಮ ನೆಲಸಿರ್ದ ಕಡಕೋಳದಲಿ ವಸತಿ ಮಾಡಿದಿಯೋ ||ಪ|| ಬಿಡದೆ ಈ ಗ್ರಾಮದ ಜನರೆಲ್ಲ ಕೂಡಲು ನೋಡಿ ಕನ್ನಡ ಪದ ಹಾಡಿದರಯ್ಯಾ ||೧|| ಮನಸಿ ನಿನಗೆ ನಾ ಏನಂದೆ ಆತ್ಮದಿ ನೆಲಸಿಕೊಂಡು ಸುಖವನು ಬೇಡಿಕೊಂಬೆನಯ್ಯಾ ||೨|| ರಸಿಕರಾಜ ಗೋವಿಂದನ ಸ...

ವಿರುಪಾಕ್ಷಲಿಂಗವಿದ್ದ ಹಂಪಿ ನೋಡೋಣ ಬಾರಾ ಇಬ್ಬರು ಕೂಡಿ ||ಪ|| ಅಂಗಲಿಂಗ ಸುಖ ಎರಡು ಕೂಡಿ ಒಂದೆ ಶಿವ ಶಬ್ಬದೊಳಗೆ ||೧|| ಗಂಗಿ ಸರಸ್ವತಿ ಯಮುನಾ ತೀರ ಮಧ್ಯದಿ ಹುಡುಕೋಣ ಬಾರೆ ||೨|| ಶ್ರೀಶಂಕರನ ಪಾದದಡಿಯಲ್ಲಿ ನೋಡಿದ ಕೊನೆಯೊಳು ನೋಡೋಣು ಬಾರೆ ||...

ಪಾದ ಪೂಜೆಯಾದುದೇನಿದು ಪ್ರಭುವರನ ಕಾಣದೆ ||ಪ|| ಮೇಧಿನಿಯೊಳು ಸಂಶಿಯ ಜನ ವಿನೋದದಿಂದು ಮಾಡಿದಂಥಾ ||ಅ. ಪ.|| ಧರಿಗೆ ಸಂಶಿ ಮರೆವ ಮೋಜಿನ ಪರಿ ಬಾರೆ ಪ್ಯಾಟಿ ಮಳಗಿ ಸಾಲ್ಗಳೆರದು ಬಾಜಿನ ನೆರೆ ಶುಭದಿ ಅದರೊಳಗಿರುವರೈ ಅನೇಕ- ತರ ಜನ ಸರಿಗಾಣೆ ನಾ ಪಿರ...

ತೋಟವ ನೋಡಿರಯ್ಯಾ ಸದ್ಗುರುವಿನ ಆಟವ ನೋಡಿರಯ್ಯಾ || ಪ || ನೀಟಗೂಡಿ ನಿಜ ಬ್ರಹ್ಮಜ್ಞಾನದಿ ಕೋಟಿ ಕರ್ಮ ಸಂಹರಿಸಿದ ಧರ್ಮವ ||ಅ.ಪ.|| ಬೈಲೊಳು ಬೈಲಾಗಿ ಕವಲಿಲ್ಲದ ಮೂಲ ಸಹಿತವಾಗಿ ಜೋಲುವ ಫಲಗಳು ಗಾಳಿಗೆ ಒಲಿಯಲು ಸಾಲು ಸಾಲಿನ ಮೇಲೆನಿಸುವವರ ||೧|| ಭ...

ಎರಗಿ ಬಿನ್ನಾ ಮಾಡದ್ಹೋದರು ಗುರುವರನ ಗಣರಿಗೆರಗಿ ಬಿನ್ನಾ ಮಾಡದ್ಹೋದರು ನರಗುರಿಗಳು ಪರಿಹಾಸ್ಯದಿ ಜರಿದರು ಎನ್ನ ಕರೆಸಿದರೈ ಹರನ ಶಾಸ್ತ್ರಕೆ ವರಪ್ರಸ್ತಕೆ ಮರಿತರು ನಿಮಗರಿಕಿರಲೈ ||ಪ|| ಹಿಂದಕ್ಕೊಮ್ಮೆ ಪ್ರಥಮರೊಡನೆ ದ್ವಂದ್ವ ಬಯಸಿ ರೇಚಿತಂದೆ ಒಂದ...

ಬಾರದಿರುವರೇನೇ ಭಾಮಿನಿ ಬಾರದಿರುವರೇನೇ ||ಪ|| ಬಾರದಿರುವ ಕಾರಣವೇನಲೆ ಸಖಿ ದೂರದಿಂದ ಮುಖ ತೋರಿ ಸಮಯದಿ ||ಅ.ಪ. || ನಂಬದವನ ಕೂಡ ಭಾಮಿನಿ ಸಂಭ್ರಮಿಸುವದು ಬ್ಯಾಡ ನೋಡ ಅಂಬುಜಾಕ್ಷಿಯೇ ಕಂಬುಕಂದರಿಯೇ ಹಂಬಲಿಸುತ ನಿನ್ನ ಬೆಂಬತ್ತಿ ನಾ ||೧|| ಕುಸುಮಲ...

ಬಾರೇ ನೀರೆ ತೋರೇ ಮುಖ ವಾರಿಗ್ಯಾಕೆ ನಿಂತೆ ದೂರ ಹೋದಳೆಂದು ನಾ ದಾರಿ ನೋಡುತ ಕುಂತೆ ||ಪ|| ಆರಮುಂದೆ ಹೇಳಿದರೆ ತೀರದೀ ಮಾತು ಊರಮಂದಿ ಅರಿಯರು ನಮ್ಮ ನಿಮ್ಮ ಗೊತ್ತು ಬರತೀನಂತಾ ಹೇಳಿಹೋದೆಲ್ಲೆ ಮರೆತು ಮನ ಕಲ್ಲು ಮಾಡಿದರೇನು ಬಂತು ||ಆ. ಪ.|| ಸಣ್ಣ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....