ಕುಲಕರ್ಣಿ ಕೊಟ್ಟ ಪಾವಲಿ ರೊಕ್ಕದೀ ಬ್ರಹ್ಮನೆಲಗಾಂಬುದ್ಯಾಂಗಲೋ ಮನಸೇ ಬಲುದಿನದ ಸಲಗಿಯಲಿ ಸಾಲಿ ಬರಸಿದ ಸ್ನೇಹ ತಿಳಿದು ಇಲ್ಲಿಗೆ ಬಂದೆಲ್ಲೇ ಮನಸೇ ||೧|| ಪೊಡವಿಯೊಳು ಗುಡಗೇರಿ ಹಿರಿಯ ಪೋಲೀಸ- ಗೌಡ ಕರೆದರೆ ಇಲ್ಲಿಗೆ ಬಂದೆಲ್ಲೇ ಮನಸೇ ಕಡು ಹರುಷ ಇವ...

ಅಲ್ಲಿ-ಚರ್ಚಿನಲ್ಲಿ, ಸಿಲ್ವರ್ ಮರಗಳ ದೊಡ್ಡ ಕಾಡು ಬೆಳೆದುಕೊಂಡಿದ್ದರಿಂದ ವರ್ಷಾ ವರ್ಷ ಅವುಗಳನ್ನು ಕಡಿದು, ಸವರಲಾಗುತ್ತಿತ್ತು. ಆ ಆಶ್ರಮಕ್ಕೆ ನರ ನಾಡಿಗಳೇ ಇಲ್ಲದ ಕ್ರಿಮಿನಲ್‌ಗಳು, ನಿವೃತ್ತ ಸೂಳೆಯರು, ಎಲ್ಲಾ ವಿಧದ ಅಂಗವೈಕಲ್ಯ, ಮನೋವೈಕಲ್ಯಗಳ...

ನಿನ್ನ ನೆನಪನ್ನು ನೆನಪೆನ್ನಲೆ ? ಇಲ್ಲ, ನೆನಪೂ ನಾಚಿತಲ್ಲ ! ನಿನ್ನ ನೆನಪನ್ನು ನೀನೇ ಎನ್ನಲೆ ? ಇಲ್ಲ, ಅದೂ ಎಂದಿತು ಒಲ್ಲೆ ! || ಜಗದ ಯಾವುದಕೆ ಹೋಲಿಸಲಿ ನೀನವಕೆ ಸಮವಲ್ಲ ಮೊಲ್ಲೆ ಬರಿ ಹೋಲಿಕೆ ಸಾಂತ್ವನವಲ್ಲೆ ತತ್ವ ಸೇರಿದ ಮಾತಿದಲ್ಲ ನಲ್ಲೆ |...

ಕಾಣದ ಕೈಗಳ ಲೀಲ ಹಾದಿಯಲಿ ಸಾಗಿದೆ ವಿಶ್ವದ ತೇರು, ಮಾಣದ ಶಕುತಿಯ ಮಾಯಾದೋಳಲಿ ನಡೆದಿದೆ ಸೃಷ್ಟಿಯ ಉಸಿರು. ನಿನ್ನಯ-ನನ್ನಯ, ನಿನ್ನೆಯ ಇಂದಿನ ನಾಳೆಗಳಾ ಕತ್ತಲೆ ಬೆಳಕು ಬೀಳುತಲೇಳುತ ಸಾಗೆ ನಿರಂತರ ಶೂನ್ಯ ಥಳುಕು ಬಳುಕು. ಚಿರ-ಸ್ಥಿರ-ಚರ ಚಿರಂತನವಾವ...

ಸೂಜಿಯೇ ನೀನು ಸೂಜಿಯೇ ಈ ರಾಜ್ಯದೊಳಗೆಲ್ಲ ತೇಜ ಕಾಣಿಸುವಂಥ ||ಪ|| ಹರಿಯ ಶಿರದಮ್ಯಾಲೆ ಮೆರೆದಂಥ ಸೂಜಿಯೇ ಹರನ ಕಪಾಲದಿ ಬೆರೆದಂಥ ಸೂಜಿಯೇ ಮರವಿಯ ಅರವಿಯ ಹೊಲಿವಂಥ ಸೂಜಿಯೇ ಮರೆ ಮೋಸವಾಗಿ ಮಾಯವಾದಂಥ ಸೂಜಿಯೇ ||೧|| ತಂಪುಳ್ಳ ಉಕ್ಕಿನೊಳ್ ಹುಟ್ಟಿದ ಸ...

ಆ ಮನೆಯ ಕಣಜ ನಮಗೆ, ದಿನಾರಾತ್ರೆ  ಒಂದೊಂದು ನೀತಿಕಥೆಯನ್ನು ಹೇಳು ತ್ತಿತ್ತು; ಕೇಳಿಸಿಕೊಳ್ಳುತ್ತಿದ್ದದ್ದು ಮಾತ್ರ ಅವರಾಗಿದ್ದರು. ಅವರೆಕಾಳು, ರಾಗಿ, ಗೋಧಿ, ತೊಗರಿ, ಹೆಂಡ, ಹಳೆಬಟ್ಟೆಗಳು, ಔಷಧಿ ಬೇರುಗಳೆಲ್ಲವನ್ನೂ ತನ್ನೊಳಗೆ ಹೊತ್ತುಕೊಂಡು, ದ...

ಜಗದಲೆಲ್ಲ ಹುಡುಕಿದೆ ನಿರಂತರ ಕಳೆದವೆಷ್ಟೊ ಗೆಳತಿ ಮನ್ವಂತರ ಎಲ್ಲೂ ಸಿಗಲಿಲ್ಲ ನಿನ್ನ ನಗುತರ ನಾ ಮಡಿಲ ಮಾತೆ ಮಗು ತರ || ಅದೆಷ್ಟು ಶಕ್ತಿ ನವ ರೋಮಾಂಚನ ಜಡ ಬದಕಿಗೆಲ್ಲ ಗರಿಗೆದರಿ ಸಿಂಚನ ಎಣಿಸಲಾರದ ಬಣ್ಣ ಬಗೆಯರಂಜನ ಮನದೊಳು ಸುಳಿಯೊಡೆದ ತನನನ ||...

ಅಂತರಂಗದ ಕದವ ತೆರೆಯಿಸೊ ಅಂತರಾತ್ಮ ವಾಣಿಯನಾಲಿಸು ಅಂತಕಾಂತನ ಕೃಪೆಯ ನೆಳಲಲಿ ಚಿಂತಾತ್ಮನ ಕೊನೆಗಾಣಿಸು || ಚಿತ್ತ ಚಿತ್ತಾರ ಬಿತ್ತರ ಬಣ್ಣ ಬದುಕಿನ ಕೆಡುಕಿಗೆ ನೀನು ನಾನು ಎಲ್ಲರಿಲ್ಲಿ ಮೃತ್ಯುಗೈಯಮಣ್ಣ ಬಿಂದಿಗೆ || ಬಿಸಿಲಗುದುರೆಯ ಸವಾರಿಯಲ್ಲಿ ...

ಇನಸ್ಪೆಕ್ಟರ ದಯಾನಿಧಿ ವನಗಾವಲಧಿಕಾರ ||ಪ|| ಘನಸಿರಿಯ ಪರಿ ಅರಣ್ಯದಿ ಶೋಭಿತಹ ಜುರ್ಬಿಶರಿಯುತಾಧೀಶನ ಪದಾ ||೧|| ಹಮ್ ದೇಖಾ ತುಮ್ ಲೈಯನ್‍ತು ದೋದಿನ್ ಕರತೆ ಜಾವಿದಾ ಸುಮ್ಮನೆ ಸಂದಿದೆ ನಾ ಪೇಳುವೆ ಲಾಲಿಸು ಹಿಮಕರ ಕಷ್ಟದಿ ಮುನಿದಾ ||೨|| ಶಿಶುನಾಳ ...

ನನ್ನ ತಾಯಿ ಕಡೆಯ ಸಂಬಂಧಿಕರಿವರು, ಇದ್ದಿಲಿನಂತೆ ಕಗ್ಗತ್ತಲನ್ನು ಉಗಿಯಬಲ್ಲ ಮಹಾ ದರಿದ್ರರಂತಿದ್ದರು. ಹೆಂಡದಾಸೆಗೆ ದಿನ್ನೆ ಬಯಲಿನ ಪೊದೆಗಳಲ್ಲಿ ಇಸ್ಪೀಟು ಆಡಲು ಬರುವ ಗಂಡಸರ ಜೊತೆ ಮಲಗಿ ಎದ್ದದ್ದನ್ನು ಎಷ್ಟೋ ಸಲ ನೋಡಿದ್ದೇನೆ. ಒಂಟಿಗಿಡದ ಪನ್ನೀ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....