Home / ಕಥೆ / ಕಿರು ಕಥೆ

ಕಿರು ಕಥೆ

‘ಎಲ್ಲಿಗೆ ಹೋಗುತಿದ್ದೀ ಮಗು?’ ಎಂದು ಮೊಮ್ಮಗನನ್ನು ಅಜ್ಜಿ ಕೇಳಿದಳು. ‘ನಾನು ಕನಸಿನ ಲೋಕಕ್ಕೆ ಹೋಗುತ್ತಿರುವೆ’ ಎಂದ. ‘ಏನು ಕೆಲಸ ಅಲ್ಲಿ?’ ಎಂದಳು ಅಜ್ಜಿ ‘ಕನಸು ಓಡಿ ಹೋಗದೆ ಹಾಗೆ ಕಾಲಿಗೆ ಗೊಲಸುಕಟ್ಟಿ ಬರುವೆ’ ಎಂದ. ಬುದ್ಧಿವಂತ ಮೊಮ್ಮಗನ ಉತ್ತ...

“ಗುರುಗಳೇ! ಕಣ್ಣಿನ ರೆಪ್ಪ ಕಣ್ಣಿನ ಕಿಡಕಿ. ಅದನ್ನು ನಮ್ಮ ಇಚ್ಛೆಯಂತೆ ಮುಚ್ಚಬಹುದು. ಬಾಯಿಗೆ ತುಟಿಗಳು ಬಾಗಿಲುಗಳು. ಬೇಡವೆಂದಾಗ ನಾವು ತುಟಿಪಿಟಿಕೆನ್ನದೆ ಬಾಯಿ ಬಾಗಿಲು ಮುಚ್ಚಬಹುದು. ಮೂಗನ್ನು ಕುಂಭಕದಲ್ಲಿ ಉಸಿರು ನಿಲ್ಲಿಸುವುದ ಮೂಲಕ ...

ಎಂಭತ್ತು ವರ್ಷದ ಗೌರಜ್ಜಿಗೆ ಅಂದು ಬಹಳ ಪಶ್ಚಾತಾಪ. ಹಣ್ಣು ಹಣ್ಣು ಮುದುಕಿಯ ಮುದಿ ಮನವನ್ನು ಕಾಡುತ್ತಿದ್ದುದು ಬಾಳಿನಲ್ಲಿ ಎಳ್ಳನ್ನು ತಿನ್ನಲಿಲ್ಲವೆಂದು! ಎಳ್ಳಿನ ಹೊಟ್ಟೆಯೊಳಗಣ ಎಣ್ಣೆಯ ರುಚಿ ಸವಿಯಲಿಲ್ಲೆಂದು. “ಅಜ್ಜಿ! ಎಳ್ಳು ಎಣ್ಣೆಯ ...

ಒಮ್ಮೆ ಶ್ರೀರಾಮಚಂದ್ರನು ಸಿಂಹಾಸನಾರೂಢನಾಗಿರಲು ಅವನ ಸೇವಕರು ಒಬ್ಬನನ್ನು ಹಿಡಿದು ತಂದೊಪ್ಪಿಸಿ ಬಿನ್ನವಿಸಿದರು. “ಪ್ರಭೂ, ಈ ಪ್ರಾಣಿಯು ಒಂದು ಮರಕ್ಕೆ ಹಗ್ಗ ಕಟ್ಟಿ ಉರುಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿದ್ದನು. ನಾವು ಕಂಡು...

ಒಮ್ಮೆ ಒಂದು ನಾಯಿಗೆ ತನ್ನ ಬಾಲದ ಮೇಲೆ ಅತ್ಯಂತ ಮೋಹ ಹುಟ್ಟಿತು. ಪ್ರೀತಿ ಚಿಗುರಿತು. ಅದನ್ನು ಅದು ತನ್ನಿಂದ ದೂರವಿದೆ, ಅದನ್ನು ತನ್ನದಾಗಿಸಿಕೊಳ್ಳಬೇಕೆಂದು ಪರಿಪರಿಯಲ್ಲಿ ಬಾಲವನ್ನು ಹಿಂಬಾಲಿಸಿತು. ತಪ್ಪಿಸಿ ತಪ್ಪಿಸಿ ಹೋಗುತ್ತಿದ್ದ ಬಾಲವನ್ನು ...

ಸೀತಾದೇವಿಗೆ ಲವಕುಶರನಂತರ ಮಕ್ಕಳಾಗಲೇ ಇಲ್ಲವೆ? ಪುರಾಣದಲ್ಲಿ ಅವಳಿಗೆ ತದನಂತರ ಪತಿಯ ಸಮಾಗಮ ಲಭಿಸಲಿಲ್ಲವೆಂದೇನೋ ಹೇಳಿದೆ. ನನ್ನ ಕತೆ ಮಾತ್ರ ಹೀಗಿದೆ. “ಹಿಂದಕ್ಕೆ ನಾವು ವನವಾಸದಲ್ಲಿದ್ದಾಗ ನಮ್ಮ ಕುಟೀರದ ಎದುರಿಗೆ ಒಂದು ಮಲ್ಲಿಗೆ ಬಳ್ಳಿಯ...

ಒಬ್ಬ ಭಿಕ್ಷು, ಗುರುಗಳನ್ನು ಕೇಳಿದ- “ನನ್ನ ತಂದೆ ತಾಯಿ ನನಗೆ ಜನ್ಮ ಕೊಡುವ ಮೊದಲು ನನ್ನ ಕಣ್ಣು, ಕಿವಿ, ಮೂಗು ಎಲ್ಲಿ ಇತ್ತು?” ಎಂದು “ಅವು ಸ್ವಸ್ಥಾನದಲ್ಲಿದ್ದವು” ಎಂದರು ಗುರುಗಳು. “ಹಾಗೆಂದರೇನು? ಗುರುಗಳ...

ರಾಮಚಂದ್ರದೇವರ ಆಳಿಕೆಯಲ್ಲಿ ಗುಪ್ತಚಾರ ದಲವು ಭದ್ರವಾಗಿತ್ತೆಂದು ಸೀತಾ ಪರಿತ್ಯಾಗದ ಕಾರಣದಿಂದ ಗೊತ್ತಾಗುತ್ತದೆ. ಒಂದಿರುಳು ಒಬ್ಬ ಗುಪ್ತಚಾರನು ಒಂದು ಬೀದಿಯಲ್ಲಿ ನಡೆದಿದ್ದನು. ನಿಸರ್ಗದ ಕರೆಗೆ ಓಗೊಡಲು ಹೊರಗೆ ಬಂದಿದ್ದ ಒಬ್ಬ ನನ್ನಂಥ ಸಭ್ಯಗೃಹಸ...

ಒಮ್ಮೆ ಹಲ್ಲುಗಳಿಗೂ ನಾಲಿಗೆಗೂ ಸಂವಾದ ನಡೆಯಿತು. “ನಾಲಿಗೆ! ನಿನಗೆ ಎಚ್ಚರಿಕೆ ಇರಲಿ. ನೀನು ಹಲ್ಲುಗಳ ಕೋಟೆಯಲ್ಲಿದ್ದೀಯ.” ಎಂದು ಹಲ್ಲುಗಳು ಹಲ್ಲು ಕಡೆದು ಹೇಳಿದವು. “ಏ! ಹಲ್ಲುಗಳೇ! ಹಲ್ಲು ಕಡೆದು ಪುಡಿಯಾಗದಿರಿ. ನಿಮ್ಮ ಕ...

ಹೆಂಗಸರು ಎಷ್ಟೇ ಒಳ್ಳೆಯವರಿದ್ದರೂ ಕೆಲವು ವಿಷಯಗಳು ನಾಲಿಗೆಯ ಮೇಲೆ ನಲಿಯತೊಡಗಿದವೆಂದರೆ ಕೊಂಚ ಮಟ್ಟಿಗಾದರೂ ಅವರು ಚಂಡಿ-ಚಾಮುಂಡಿಯರಾಗುತ್ತಾರೆ. ಪಂಚಕನ್ಯೆಯರಲ್ಲಿ ಒಬ್ಬಳೆಂದು ಖ್ಯಾತಿಪಡೆದ ಸೀತಾದೇವಿಗೂ ಯಾವ ಕವಿಯಿಂದಲೂ ಹೊಗಳಿಸಿಕೊಳ್ಳದ (ಲಕ್ಷ್...

1234...19

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...