ಇಲ್ಲ

ಅಂಗಿಯೊಳ ಅಂಗಿಯಲ್ಲಡಗಿರುವ ಇವನು ಒಂದೊಂದೇ ಪದರ ಕಳಚಿ ತನ್ನ ಬೆಳ್ಳುಳ್ಳಿ ಮುಖವನ್ನು ತೋರಿಸಲಿಲ್ಲ ಅಥವಾ ಬಿಚ್ಚೀ ಬಿಚ್ಚೀ ಉಳ್ಳಾಗಡ್ಡೆಯಂತೆ ಬಟ್ಟ ಬಯಲಾಗಲಿಲ್ಲ ಬರೀ ಕಲ್ಲು ಕೆಸರುಗಳೇ ತುಂಬಿದ ಸರೋವರದ ತಳದಲ್ಲಿ ರತ್ನ ಮುತ್ತುಗಳು ಹೊಳೆಯಲೆ...

ಹೊಟ್ಟೆಪಾಡು

ಇನ್ನೂ ಅರ್ಥಾಗಲಿಲ್ಲೇನ್ನಿನ್ಗೆ? ನಾಕಕ್ಸರಾ ಬಾಯಾಗಿಟಗಂಡು ನಾಕ ಸಾಲು ತಲಿಯಾಗಿಟಗಂಡು ನಾಕ ಕಾಸು ಕೈಯಾಗಿಟಗಂಡು ಯಾಕ ಮೆರೀತಿಯಲೇ! ಬಾಯಾಗೇ ಅಂತ್ರಕ್ಕೇಣೀ ಹಾಕಿ ಸಮತಾ ಸೋದರತಾ ಗಾಂಧೀತಾತಾ ಅಂತಾ ಒಳ್ಳೇ ನಾಣ್ಣೆಗಳನ್ನ ಒದರಿ ಒದರಿ ಒಡಕು ಬೋಕೀ...

ಪಾಪ

ಹಡೆದ ತಾಯಿ ಒಡಲುಂಡ ನೋವೆಷ್ಟೊ? ಈ ಪುಣ್ಯಫಲವನ್ನಿಲ್ಲಿ ಬಿಟ್ಟು ಎಲ್ಲಿ ಹೋದಳೊ? ಚೆಂದದ ಕಂದನ ನೋಡಿ ಅಬ್ಬ ಆಹಾ ಎಂದು ಕೆಲ ಮಂದಿ ಸುತ್ತಮುತ್ತಿ ಅದನ್ನು ಪೋಷಿಸುವ ಪಣತೊಟ್ಟರು ಒಡವೆ ವಸ್ತ್ರಗಳಿಂದಲಂಕರಿಸಿದರು ಕುತ್ತಿಗೆ ಮಟ...

ಕಲ್ಲು ಮಣ್ಣು

ಯಾವುದಕ್ಕೂ ಬಗ್ಗದ ಕುಗ್ಗದ ಕಲ್ಲಾದರೆ ನೀನು ಮಳೆಗೆ ಬಳಿದು ಹೋಗುವ ಬಿಸಿಲಿಗೆ ಬೂದಿಯಾಗುವ ಮಣ್ಣು ನಾನು ನೀನು ನಿರ್ವಿಕಾರ ಅಚಲ ನಾನು ನೀರಿನೊಡನೆ ವಿಕಾರವಾಗುವ ಕೆಸರು ಹುಡಿಯಾಗಿ ಗಾಳಿಯಲ್ಲಿ ಸಂಚಲ ನೀನು ನೆನೆದುಕೊಂಡು ಗಟ್ಟಿಯಾದೆ...

ಕೃತಕ ವನ

ಕೈಯಾರೆ ಬೆಳೆಸಿಕೊಂಡು ತಿದ್ದಿತೀಡಿ ಗಳಿಸಿಕೊಂಡ ಈ ತೋಟದಲ್ಲಿ ಸಹಜ ಸಮೃದ್ಧಿ ಇಲ್ಲ, ನೈಜ ಸಂಸಿದ್ಧಿ ಇಲ್ಲ, ಬೇರಿಳಿಸಿಕೊಂಡ ಪುಣ್ಯವಿಲ್ಲ, ಪವಿತ್ರವಾದ ಪಾಪವಿಲ್ಲ ಗಾಳಿಗೊಡ್ಡಿ ಬಾಹುಗಳು ಬಯಲ ತಬ್ಬಿ ಸುಖಿಸಲಿಲ್ಲ ಎಲರಿನಲ್ಲೆಲೆಗಳು ಎಲ್ಲೆ ಮೀರಿದ ಮಾತನುಲಿಯಲಿಲ್ಲ...

ಭೋಳ್ಯಾ

ಲೇ ಮೈತೊಳದ ಬಸವಣ್ಣ ನಿಮ್ಮಪ್ಪ ಶಿವಪ್ಪನ ಕೂಡ ನೀನು ಬೋಳಿಸಿಗೊಂಡ್ಯಾ, ಅವನಂತೂ ಹೇಳೀಕೇಳಿ ಸುಡುಗಾಡಿಗೊಡೆಯ ಅವಂಗೆ ಬೂದಿ ಬಡಿಯ ಮಾತೆತ್ತಿದ್ರೆ ತೋರಸ್ತಾನೆ ಮಸಣಾ, ಉರೀಬೇಡ ನೀ ಆಗ್ತೀ ಹೆಣಾ! ಅಂತಾ ಹೆದರಸ್ತಾನೆ ಉಣ್ಣೋರುಣ್ಲಿ ತಿನ್ನೋರ್ತಿನ್ಲಿ...

ಅನುಮಾನ

ಕಣ್ಣು ಕುಕ್ಕಿಸಿ ಮಣ್ಣಾಗುವ ಬೆಳಕೋ ಬೆಳಕನಾಯೆಂದು ನುಂಗಿ ನೊಣೆವ ಕತ್ತಲೋ ಯಾವುದು ಪ್ರಬಲ ಯಾವುದು ನಿತ್ಯಸತ್ಯ ಎಂಬುದು ನನಗಿನ್ನೂ ಅನುಮಾನ ತೊಳೆಯ ಬಂದ ತೊರೆಗಳೆಲ್ಲ ಸಂದುಗೊಂದುಗಳಲ್ಲಿ ಬತ್ತಿಹೋಗುತ್ತವೆ ನಿಂತ ಕೆಲವು ಕಡೆ ಹಳಸಿ ನಾತವಾಗಿ...

ಪ್ರಜಾರಾಜ

ದಿನ ತುಂಬುವ ಮೊದಲೇ ತಾಯ ಕುತೂಹಲ ಕೆರಳಿಸಿ ತತ್ತಿಯೊಡೆದು ರಕ್ತಹರಿಸಿ ಮಾಂಸ ಮುದ್ದೆಯುರುಣ ಒಡಮೂಡಿದಂತೆ ಇವನು ಹುಟ್ಟಿದ್ದೇ ಹಸಿಬಿಸಿಯಾಗಿ ಯಾರಿಗೆ ತನ್ನ ಮೊದ್ದು ಮುಖವ ತೋರಿಸುವವಸರವೋ ಕೈಕಾಲು ಪೂರಾ ಅರಳದ ಮೊದಲೇ ಗರ್ಭದೊಳು ಹಳಹಳಿಸಿ...

ಕರಿ ಮಾಯಿ

ಆಕಿ ನನ ಕಣ್ಮುಂದೆ ಬಿಳಿಪರೆ ಎಳೀತಾಳೆ ನೀಸೋ ಸೆರಗಿನ್ಯಾಗ ಮುಚಿಗೆಂಡು ಜೋಗಳಾ ಹಾಡತಿ ಆಕಿ ಕಲಕಿ ರಾಡಿಯೆಬ್ಬಸ್ತಾಳೆ ನೀನು ತಿಳಿಗಲಸ್ತೀ ಆಕಿ ಉಬ್ಬಿಸಿ ಒಡಸ್ತಾಳೆ ನೀನು ಕುಗ್ಗಿಸಿ ಕುದುರುಸ್ತಿ ಆಕಿ ಮಕಾಡಾಹಾಕಿ ಬಣ್ಣ ಹಚಿಗೆಂಡು...

ಕಲಿಸಿದರು

ರೆಕ್ಕೆ ಬಲಿಯುವ ಮೊದಲೇ ಕತ್ತರಿಸಿ ಉಗುರು ಕೊಯ್ದು ಕೊಕ್ಕ ಬಂಡೆಗೆ ಕುಕ್ಕಿಸಿ ಮೊಂಡಾಗಿಸಿ ಹೀಗೆ ಬೆಳೆಸಿ ಬಿಟ್ಟರು-ಬೆಳೆಯ ಬಿಟ್ಟರು ಕಣ್ಣು ಕಟ್ಟಿ ಕಾರಡವಿಯಲ್ಲಟ್ಟಿ ಬಿಟ್ಟರು ಹೂಮಾಂಸವನರಳಿಸಿಕೋ ಎಂದು ಹದ್ದುಗಳಿಗಿಟ್ಟರು ಹುಲ್ಲಂತೆ ಬಾಗೆಂದು ಬೆನ್ನ ಬಿಲ್ಲಾಗಿಸಿದರು...