ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.
ಕಲ್ಲಿನಂತಿದ್ದ ಹಲ್ಲನ್ನು ಕಾಣದ ಕ್ರಿಮಿಗಳು ತಿಂದು ಬೆಳಕಿನ ದಳದಂಥ ಹಲ್ಲು ಹುಳಿತು ಕಪ್ಪಾಗಿ ಹೋಯಿತು. ಕಬ್ಬು ಸಿಗಿದ ಯಂತ್ರ ಕಡಲೆಪುರಿಗೆ ಬೆದರಿ ನಿಂತರೆ ನೋವು, ಕೂತರೆ ನೋವು ಮುಖ ಬಾತು ಮೂತಿ ಕುಂಬಳಕಾಯಾಯಿತು. ಕಂಡ...
ಅರೆ ನಿದ್ದ ಅರೆ ಅರಿವು, ಮಂಪರು ದಾರಿ ಹಿಡಿದು ತೆವಳಿ ಹೋದರೆ ಕೆಳಗೆ ಬೆದರಿಸುವ ಪಾತಾಳ; ತರ್ಕದ ಸೊಕ್ಕು ಮುರಿದು ಗಣಿತವನೆ ಮಣಿಸಿರುವ ಜನ ತಿಕ್ಕಲು ಕುಣಿತ; ಏನೇನೊ ನೋಡಿ ಏನೇನೊ ಹಾಡುವ ಕನಸ...
ನೀ ಹುಟ್ಟಿದ್ದು ಇನ್ನೂ ಮೊನ್ನೆ ಎನ್ನುವಂತಿದೆ. ಪಿಳ ಪಿಳ ಕಣ್ಣು ಬಿಟ್ಟಿದ್ದು ಬುಳ ಬುಳ ಮೂತ್ರ ಬಿಟ್ಟಿದ್ದು ತಿಂಗಳು ಮುಂಚೆ ಹುಟ್ಟಿದ್ದೆಂದು ನಿನ್ನನ್ನ ನಾಲ್ಕು ದಿನ ದಪ್ಪ ಹತ್ತಿಯಲ್ಲಿ ಸುತ್ತಿಟ್ಟಿದ್ದು ಇನ್ನೂ ಕಣ್ಣಲ್ಲಿದೆ, ಪುಟ್ಟ...
‘ಬಿಡಿ ಬಿಡಿ, ಎಲ್ಲ ಬರಿ ಉಡಾಫೆ’ ಎಂದೆ, ನಕ್ಕರು. ‘ನೋಡು ಮರಿ, ಹತ್ತಾರು ಬಾರಿ ಹೋಗಿ ಬಂದಿರುವ ದಾರಿ, ಹೆಜ್ಜೆ ಗುರುತಿರುವ ಕಾಡು ಬೇಕಾದರೆ ಬಂಡವಾಳ ಹೂಡು. ಆದರೆ ಒಂದು ವಿಷಯ ಊರಿರುವದೇ ಆಚೆ...
ರಸ್ತೆ ನಡುವೆ ರಾಗಿ ಚೆಲ್ಲಿಕೊಂಡು ಬಾಚಿ ಎತ್ತಲೂ ಆಗದೆ ನಿಂತಿದ್ದಾನೆ ಹುಡುಗ. ಬಾಯೊಡೆದ ಚೀಲ ಬಿದ್ದಿದೆ ಬೀದಿನಡುವೆ; ಹಾಯುತಿದೆ ಅದರದೆಯ ಮೇಲೆಯೇ ಒಂದೆ ಸಮ ಕಾರು ಸ್ಕೂಟರ್ ಲಾರಿ, ಈಟಿದನಿಯಲಿ ಮೈಲಿ ಎಚ್ಚರಿಕೆ ಚೀರಿ....
ರಜೆಯಲ್ಲಿ ಹಳ್ಳಿಯ ಮನೆಗೆ ಹೊರಟಿದ್ದೆ. ಹಳೆಮನೆ, ಅಮ್ಮ ಮುದುಕಿ, ಇಲ್ಲೇ ಸಾಯುತ್ತೇನೆ ಎನ್ನುವ ಹಟ, ತಾನೇ ಬೇಯಿಸಿಕೊಂಡು ಮೈಕೈ ನೋಯಿಸಿಕೊಂಡು ಒಂದೆಮ್ಮೆಯನ್ನೂ ಮೇಯಿಸಿಕೊಂಡು ಅಲ್ಲೇ ಅವಳ ಬಿಡಾರ. ಹಳ್ಳಿಯಲ್ಲಿ ಕಾಲಿಡುತ್ತ ತೀರುವ ಸಂಜೆ. ಸುತ್ತಲ...
ಹುಲ್ಲುಗಾವಲ ಹುಡುಕಿ ಹೊರಟ ಪಶುಗಳ ಹಿಂಡು ಮುಂದೆ ಮುಂದೆ ಕಾಯುತ್ತ ಹೊರಟಿರುವ ಗಂಡು ಹೆಣ್ಣಿನ ದಂಡು ಅದರ ಹಿಂದೆ ಪಶುಗು ಪಶುಪತಿಗು ಇರುವೆಲ್ಲ ಅಂತರ ಪಾದಸಂಖ್ಯೆಯೊಂದೆ. ಕಾಲೆರಡು ಕೈಯಾಗಿ ಬಾಲ ಕ್ಷೀಣಿಸಿ ಅಡಗಿ ತಲೆ...