ಮನೆಯು ಪಾಲಾಯ್ತು

"ಮನೆಯು ಪಾಲಾಯ್ತು ಒರ್‌ಬಾಳ್ವೆ ಹೋಳಾಯ್ತು ಕರುಳೆರಡು ಸೀಳಾಯ್ತು ಅಯ್ಯೊ! ಅಕಟಕಟಾ! ಎರಡಾಯ್ತು ಬಾವುಟ" ಎಂದು ಗೋಳಾಡದಿರು ಓ, ಗೆಳೆಯನೇ! ಕಲಹ ಪಾಲಿಗೆ ಮೊದಲು: ಹೊಗೆಯಿತಸಮಾಧಾನ, ಉರಿಯಿತು ದುರಭಿಮಾನ. ತಮ್ಮ, ಪಸುಗೆಯ ಬಯಸಿ ಕೈಮಾಡಿದನು, ಮುನಿದು;...