Home / ಹೊಳೆ ಮಗಳು

Browsing Tag: ಹೊಳೆ ಮಗಳು

ತುತ್ತು ಉಣ್ಣುವ ಬಾಯೆ ತುತ್ತು ಉಣಿಸುವ ತಾಯೆ ಏನೀ ಜಗದ ಮಾಯೆ? ಒಲೆಯ ಉರಿಸುವ ತಾಯೆ ಎಲ್ಲವ್ವ ಹಾಲಕ್ಕಿ ಬೇಯಿಸಿದ ಮಡಕೆ? ಯಾಕವ್ವ ಇಷ್ಟೊಂದು ಹಸಿವು ಬಾಯಾರಿಕೆ? ಯಾಕವ್ವ ಬೆಂದ ಕಾಳಿಗೂ ಮೊಳಕೆ? ತುತ್ತೂರಿ ಊದುವ ಬಾಯೆ ತುತ್ತೂರಿ ಕೈಗಿತ್ತ ತಾಯೆ ಏನ...

ಮೊಗ್ಗಿನ ಹಾಗೆ ಬಾಲ್ಯದ ಬೆರಳು ಮದಗಜದಂತೆ ಮಧ್ಯದ ಬೆರಳು ಮಾಗಿತು ಬಾಗಿತು ಮುಪ್ಪಿನ ಬೆರಳು ಯಾವುದು ಹಿರಿದು? ಯಾವುದು ಕಿರಿದು? ಹುಟ್ಟಿನ ಬೆರಳು? ಸಾವಿನ ಬೆರಳು? ಕಣ್ಣನು ಉರಿಸಿತು ಬೆಂಕಿಯ ಬೆರಳು ಮೂಗನು ಇರಿಸಿತು ಗಾಳಿಯ ಬೆರಳು ತುಟಿಯನು ತಿದ್ದ...

ಪಂಚೇಂದ್ರಿಯಗಳಿಗೆ ಒಲಿದು ಅವು ಹೇಳಿದ ಹಾಗೆ ನಲಿದು ಕುಣಿ ಅಂದರೆ ಕುಣಿದು ಕಾಡಿ ಬೇಡಿ ಪಡೆದೆ ಮಿರಿಮಿರಿ ಮಿಂಚೊ ಮೊಟ್ಟೆ, ಕಿಚ್ಚಾ ಹಚ್ಚೊ ಮೊಟ್ಟೆ ಕಳ್ಳುಬಳ್ಳಿಯಾ ಹಂಗಿಲ್ಲದಾ ಮೊಟ್ಟೆ, ನಿಲುವು ನಡೆಯಿಲ್ಲದಾ ಮೊಟ್ಟೆ ಒತ್ತಿದರೂ ಒಡೆಯದೆ ಕುಟ್ಟಿದರ...

ಧೂಪ-ದೀಪದಲ್ಲಿದ್ದ ಹೂವು-ಗಂಧದಲ್ಲಿದ್ದ ಚೆಲುವ ನಾರಾಯಣ ಕರ್‍ಪೂರದಾರತಿಯಲ್ಲಿದ್ದ ಕುಂಕುಮದಕ್ಷತೆಯಲ್ಲಿದ್ದ ಚೆಲುವ ನಾರಾಯಣ ಗಂಟೆ ಜಾಗಟೆಯಲ್ಲಿದ್ದ ಮಂತ್ರ ಘೋಷದಲ್ಲಿದ್ದ ಚೆಲುವ ನಾರಾಯಣ ನಿತ್ಯ ಪೂಜೆಯಲ್ಲಿದ್ದ ಹೊತ್ತ ಹರಕೆಯಲ್ಲಿದ್ದ ಚೆಲುವ ನಾರಾಯ...

ಹಾಡೆ ಹನುಮವ್ವಾ…. ಕತ್ತಲ ಒಳಗೆ ಕರಗಿದೆ ಕೋಗಿಲೆ ಬೆಳಕಿಗೆ ತಾರವ್ವ ಹಳ್ಳಾಕೊಳ್ಳಾ ಹರಿಯೊ ಹಾಗೆ ಮಾವು ಬೇವೂ ಚಿಗಿಯೊ ಹಾಗೆ ರಂಜ ಸುರಗಿ ಉದುರೊ ಹಾಗೆ ಜಾಜಿ ಮಲ್ಲಿಗೆ ಬಿರಿಯೊ ಹಾಗೆ ಹಾಡೆ ಹನುಮವ್ವಾ… ಕಾಳಿಯ ಕೆಚ್ಚಲು ತುಂಬೊ ಹಾಗೆ ಪ...

ಹೊತ್ತಾರೆ ಸೂರ್‍ಯನ ಕಿರಣಗಳು ಮುತ್ತಿಡಲು ಹಾಳು ಹಕ್ಕಿಯ ಹಾಡು ಕಿವಿ ತುಂಬಲು ಕಿಸುರುಗಣ್ಣನು ತೆರೆದು ಸೆಟೆದ ಹೂ-ಮೈಯ ಮುರಿದು ಆಕಳಿಸುವಳು ನಮ್ಮ ಪುಟ್ಟ ಕೆಂಚವ್ವ….. ಚೂರು ಅಂಗಳವನೆ ಪರಪರ ಕೆರೆದು ಒಡೆದ ಗಡಿಗೆಯ ಸೊಂಟಕ್ಕೆ ಕರೆದು ಊರ ಗಟ್...

ಉಕ್ಕರಿಸಿದೆ ಹಿಟ್ಟು ಮಿದುವಾಯಿತು ಚೆನ್ನಾಗಿ ನಾದು ಲಟ್ಟಿಸಿದೆ ಹಪ್ಪಳವಾಯಿತು ಲಟ್ಟಿಸಿದಂತೆ ದಿಟ್ಟಿಸುತ ತನಗೆ ತಾನೆ ಎಂಬಂತೆ ಎಲ್ಲಿಂದ ಬಂದೆ? ಎಂದು ಹಪ್ಪಳವೆ ಕೇಳಿತು ಬೀಜ, ಸಸಿ, ತೆನೆ ಕಾಳು, ಬೇಳೆ ಬೆವರು ಹಸಿವು ನೀರು ನೆಲ ಭೂಮಂಡಲ ಉಂಡೆ ಉಂಡ...

ಅರವತ್ತರ ಮುದುಕ ಹತ್ತರ ಹುಡುಗಿ ಇಬ್ಬರೂ ಸೇರಿ ಸವೆಸಿದರು ದಾರಿ ಮುಂದೆ ಮುಂದೆ ಸಾಗಿದ ಮುದುಕ ಹಿಂದೆ ಹಿಂದೆಯೆ ಉಳಿದಳು ಹುಡುಗಿ ಮುದುಕನಿಗದು ನಿತ್ಯದ ದಾರಿ ನೋಡಲೇನಿದೆ? ಹುಡುಗಿಗೆ ಪ್ರತಿಯೊಂದು ಹೊಸದು ಬಿಟ್ಟರೆ ಸಿಗುವದೆ? ಹುಡುಗಿ ಹಳ್ಳದಲಿ ಕಾಲ...

ಇಲ್ಲಿ ಬಯಸಿದಂತೆ ಬದುಕಬಹುದು ಇಚ್ಛೆಯಂತೆ ಸಾಯಬಹುದು ಸುತ್ತಲೂ ಮರಗಳು ಮರದೊಳಗೆ ಕಿಕ್ಕಿರಿದು ಪರಿಮಳಿಸಿವೆ ಹೂವುಗಳು ಜಿಂಕೆ ಆನೆ ಹುಲಿಗಳು ನೋಡಿಯೂ ನೋಡದಂತೆ ತಮ್ಮ ಪಾಡಿಗೆ ತಾವು ಹೆಜ್ಜೆಗಳನೂರಿ ಸಾಗಿಹವು ಹಕ್ಕಿಗಳು ಆಗಾಗ್ಗೆ ಹಾಡಿ ಗಮನ ಸೆಳೆಯುವ...

ಅವಳು ಹಳ್ಳ ಇವಳು ಹೊಳೆ ಹಳ್ಳದ ಬಳ್ಳಯಲಿ ಹರಿದು ಬಂದವಳು ಹೊಳೆ ಮಗಳು ತಾಯಿ- ಹೊಳೆ ಮಗಳ ಹುಬ್ಬನು ತೀಡುವಳು ಸುಳಿ ಮುಂಗುರುಳ ಬಾಚುವಳು ದಿಟ್ಟಿಯ ಬೊಟ್ಟಿಟ್ಟು ಅಕ್ಕರೆಯ ಮುತ್ತಿಟ್ಟು ಮುನ್ನಡೆಸುವಳು ಇದು ಬೆಟ್ಟ ಇದು ಗಾಳಿ ಇದು ಹೂವು ಇದು ಎಲೆ ಎಂದ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...