Home / ಹೊಳೆ ಮಗಳು

Browsing Tag: ಹೊಳೆ ಮಗಳು

ಮರವನೇರಿ ತುದಿಯಲ್ಲಿ ಕುಳಿತಿದೆ ಹೂವು ಪುಟ್ಟ ಹುಡುಗಿಯರೆ… ಕಣ್ಣರಳಿಸಿ ನೋಡಿ ಹೂವಾಡಗಿತ್ತಿಯರೆ… ಹೂವಿನಂದವ ನೋಡಿ ಹಿಗ್ಗಿ ಹಾಡಿ ಏ… ಹೂವೆ ಹೇಗೆ ಕಾಣುವುದೊ ಅಲ್ಲಿಂದ ಈ ಜಗತ್ತು? ನೆಲದಲ್ಲಿರುವೆ ನಾನು ನನಗೆ ಗೊತ್ತಾಗದು ಹಾಂ...

ಇಬ್ಬನಿಯಲಿ ತೊಯ್ದಂತಿರುವ ಆ ಕಣ್ಣುಗಳನ್ನೂ ಉಕ್ಕಿನಂತ ಗಡುಸಾಗಿರುವ ಆ ತೋಳುಗಳನ್ನೂ ಹೂವಿನಷ್ಟೇ ಮೃದುವಾದ ಅವನಾತ್ಮವನ್ನೂ ಮುಟ್ಟಿದೆ ದೇವರೇ… ಅದು ಅಹಂಕಾರದ ಮೊಟ್ಟೆ! ಅಂತೆಯೆ ಉರಿಗಣ್ಣಲಿ ನಿಲಿಸಿ ಹದವಾಗಿ ಬೇಯಿಸಿದೆ ಚಿಪ್ಪೊಡೆದು ಹೊಳೆಯಿತ...

ಕಗ್ಗತ್ತಲ ಭೇದಿಸಲೊಂದು ಬಿಸಿಲ ಕೋಲು ಉಸಿರಾಡಲು ಒಂದಿಷ್ಟು ಗಾಳಿ ಇನ್ನೇನು ಬೇಕು? ಕಚ್ಚಲೊಂದು ಬಣ್ಣದ ಚೆಂಡು ಚಚ್ಚಲೊಂದು ಮರದ ಕುದುರೆ ಇನ್ನೇನು ಬೇಕು? ಬರೆಯಲೊಂದು ಮಣಿಕಟ್ಟಿನ ಸ್ಲೇಟು ಬತ್ತಾಸು ಕೊಳ್ಳಲು ಆರು ಕಾಸು ಇನ್ನೇನು ಬೇಕು? ಕಣ್ಣಿಗೆ ಹ...

ಮರುಳ… ‘ಕುಡಿ’ಹಣ್ಣೆಂದು ಮೆಟ್ಟಿದೆಯಾ? ಹೆಂಗೂಸೆಂದು ಅಟ್ಟಿದೆಯಾ? ನಾನು ತಾಯಿಯಲ್ಲ ನಾನು ಹೆಂಡತಿಯಲ್ಲ ನಾನು ಮಗಳಲ್ಲ ತೊಲಗಾಚೆ ಇನ್ನು ನಾ ನಿನ್ನ ಪೊರೆವವಳಲ್ಲ… ನಾನು ಮಮತಯಲ್ಲ ನಾನು ಸಹನೆಯಲ್ಲ ನಾನು ಶಾಂತಿಯಲ್ಲ ತೊಲಗಾಚೆ ಇನ್ನು ...

ಕರೇ ಮನುಷ್ಯಾ ದಿಗಿಲು ಯಾಕ? ಮಲ್ಲಿಗೆ ಹುಡುಗಿ ಒಲಿದಾಳ ನಿನಗ ಕಣ್ಣನಾಗ ಚಿಕ್ಕಿ ಬಳಗ ಸುರಗಿ ಕ್ಯಾದಗಿ ಎದೆಯಾ ಒಳಗ ಹಾಡೊ ಕೋಗಿಲ ಕೂಳ್ಳಿನ ಕೆಳಗ ಆಡೊ ನವಿಲು ಹೆಜ್ಜೆಯ ತಳಗ ಬೆಂಕಿಯ ದೇಹಾ ಮಣ್ಣಿನ ಜೀವ ನದಿಯ ಭಾವ ಕಲ ಕಲ ಕಲ ಕಲ… ಕತ್ತಿ ನಾಲ...

ಕೋವಿಯಲಿ ಜೀವ ಅಂಕುರಿಸುವ ಮೊದಲು… ಮನುಷ್ಯನ ಮಮಕಾರದ ಹಲ್ಲು ಉದುರುವುದು ಎದೆಯು ಕಲ್ಲಾಗುವುದು ಮೈಯೊಳಗೆ ರಕ್ತ ಪ್ರವಾಹವು ಹಿಮ್ಮುಖವಾಗಿ ಏರುವುದು ತೋಳುಗಳ ಮಾಂಸ ಖಂಡಗಳು ಸೊಕ್ಕಿ ಕುಣಿಯುವವು ಮೂಗಿನ ಹೊಳ್ಳೆಗಳು ಬಿರಿದು ಕಣ್ಣುಗಳು ನಿಚ್ಚಳ...

ಅವನು ಹಾಗೆಯೆ ಮಾತಿನಿಂದ ಮೈಥುನದವರೆಗೆ ಎಲ್ಲವೂ ಹಿತಮಿತ ತೂಕದ ವ್ಯವಹಾರ ಅರವತ್ತರ ಇಳಿವಯಸ್ಸಿನಲ್ಲೂ ಕಪ್ಪನೆಯ ಒತ್ತಾದ ಕೂದಲು ಉಬ್ಬರಿಸದ ಹೊಟ್ಟೆ ಸಂಯಮ ಫಲ ಇವನದು ಆತಿಯೆ ಆಡಂಬರ ಮೋಸ ದಗಾ ವಂಚನೆಯಲಿ ಹೆಚ್ಚು ಗೊಂದಲವಿಲ್ಲ ತುಂಬಿದ ಸಂಸಾರ ಹೆಣ್ಣು...

ನಾಳೆ ಕೊಯ್ಲಾಗುವುದು ಹಕ್ಕಿಗಳಿಗೆ ಹುತ್ತರಿ ಹಾಡು ವಿದಾಯ ಹೇಳುವುದು ತೆನೆಗಳೊಡನೆ ಆಟವಾಡಲು ಬರುವ ಸುಳಿಗಾಳಿ ನಿರಾಶೆಯಿಂದ ಮರಳಬೇಕಾಗುವುದು ಇನ್ನಿಲ್ಲಿ ನರಿ ಊಳಿಡದು ಇಲಿ ಬಿಲ ತೋಡದು ಕವಣೆ ಬೀಸುವ ಹುಡುಗರಿಗಿನ್ನು ಕೆಲಸವಿರದು ಬೆದರು ಬೊಂಬೆಯೂ ನ...

ಆ ಕಣ್ಣು ನೀರು ನೆಲ ಆಕಾಶ ತನ್ನಲ್ಲೆ ಅಂದಿತು ಆ ಕಣ್ಣು ಮೋಹ ಮದ ಮತ್ಸರ ತನ್ನಲ್ಲೆ ಅಂದಿತು ಆ ಕಣ್ಣು ಕ್ರಿಮಿ ಕೀಟ ಪಶು ಪಕ್ಷಿಗೆ ಕನ್ನಡಿ ತಾನೆಂದಿತು ಆ ಕಣ್ಣು ಹುಟ್ಟು-ಸಾವು ತನ್ನಲ್ಲೆ ಎಂದಿತು ಆ ಕಣ್ಣು ಜಗತ್ತು ತಾನೆಂದಿತು ೨ ಧಗ ಧಗ ಧಗ ಧಗ ಉರ...

ಭಯ ಹುಟ್ಟಿಸಬೇಡ… ಬೆಂಕಿಯ ಮುಟ್ಟಿ ನೋಡುತ್ತೇನೆ ತಡೆಯಬೇಡ… ಕಡಲೊಳಗೆ ಧುಮುಕಿ ಈಜುತ್ತೇನೆ ನಗಬೇಡ… ಬಿಸಿಲುಗುದುರೆಯನೇರಿ ಹೋಗುತ್ತೇನೆ ಅಣಕಿಸಬೇಡ… ಮರಳೊಳಗೆ ಗೂಡು ಕಟ್ಟುತ್ತೇನೆ ಎಚ್ಚರಿಸಬೇಡ… ಮೊಟ್ಟೆಗೆ ಕಾವಿ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...