ದಾರಿ ಫಲಕ ಸಾಲದವರಿಂಗೆ ಮೇಳ ಸಹಕಾರಿಯಾದೀತೇ?
ಬರ ಬರದಂತಿಳೆಯ ಕಾಯುವ ಕಾನನಕೆ ಬರ ಬರಿಸಿದಬ್ಬರದ ಪೇಟೆಯೊಳೇನು ತೋರುವುದೋ ಹಲಸಿನಡುಗೆಯ ಮಾಡಿ ನೂರು ದಾರಿಗಳೂರಿಗಿರಲದು ಬೇಡೆನುವ ಕುರುಡು ಕಾಲದೊಳೆಲ್ಲ ದೀಪವು ವ್ಯರ್‍ಥ – ವಿಜ್ಞಾನೇಶ್ವರಾ *****
ಬರ ಬರದಂತಿಳೆಯ ಕಾಯುವ ಕಾನನಕೆ ಬರ ಬರಿಸಿದಬ್ಬರದ ಪೇಟೆಯೊಳೇನು ತೋರುವುದೋ ಹಲಸಿನಡುಗೆಯ ಮಾಡಿ ನೂರು ದಾರಿಗಳೂರಿಗಿರಲದು ಬೇಡೆನುವ ಕುರುಡು ಕಾಲದೊಳೆಲ್ಲ ದೀಪವು ವ್ಯರ್‍ಥ – ವಿಜ್ಞಾನೇಶ್ವರಾ *****
ಮೇಳದೊಳು ಮೈಕಿಟ್ಟು ಕಿವಿಕುಟ್ಟಿ ಪೇಳಲು ಬೇಕೇ? ಸಾಲದೊಳು ಕೊಂಡುಂಬುದನು ಮೇಳದುನ್ನತಿ ಎನಬೇಕೇ? ಮಲೆನಾಡ ಪೇಟೆಯೊಳ್ಯಾಕಿಂಥ ದೀನ ಮೇಳದಾರೈಕೆ? ಬಲು ಬಗೆಯೊಳಾತ್ಮ ಶಕುತಿಯೊಳುಣುವಲ್ಲಿ ಏನೆಂಥ ಕೊರತೆ? ಮೇಳದೊಳಷ್ಟಿಷ್ಟು ಕರಿದ […]
ಕಾಡನು ನಾಡು ಮಾಡಿದದಟಿನುತ್ಸಾಹದೊಳು ನಾಡನು ನಗರ ಮಾಡಿರಲಿಳಿದಂತರ್‍ಜಲದ ಪಾಡನರಿಯದೆ ಮೋಡ ಬಿತ್ತನೆ ಎಂದೊಡೇನಹುದು? ಬಡಬಡಿಸಿ ಮಲೆನಾಡ ನಗರದೊಳಿಂದು ನಡೆಸುವ ನಾಡ ಹಸು ಹಲಸು ಮೇಳಗಳಂತೆ ಮೋಡ ಬಿತ್ತನೆ […]
ಎಂಥ ದುಃಸ್ಥಿತಿ ಬಂದೊದಗಿತಲಾ ಪುತ್ತೂರು ಮಂಗ್ಲರಂತೂರಿನೊಳು ಹಲಸಿನ ಮೇಳವ ನಾಂತದರ ಆಹಾರದೈಸಿರಿಯನೊರೆವಂತಾಯ್ತಲಾ ಸಂರಕ್ಷಿತಾರಣ್ಯದೊಳು ಜಲಬತ್ತಿ ಬೋರುನೀರೆತ್ತಿ ಟ್ಯಾಂಕರಿನೊಳುಪಚರಿಪತಿರೇಕಕಿದು ಸಮವಾಯ್ತಲಾ – ವಿಜ್ಞಾನೇಶ್ವರಾ *****
ಉಂಡು ಕೈ ತೊಳೆವಂತೆ ಉರುಚಿ ಅಂಡೊರಸು ವಂತೆ ಎಮ್ಮಡುಗೆಯೆಮ್ಮ ಕೈಯೊಳಾದೊಡದು ಚಂದ. ಅಟ್ಟುಣುವ ಅನ್ನವದೆಮ್ಮ ಮೈ ದುಡಿದು ಬಂದೊಡದು ಮತ್ತಂದ, ಸಿದ್ಧ ವಸ್ತುಗಳಿಂದು ಕೊಂದಿಹುದೆಲ್ಲರಾ ಶುದ್ಧ ಮನದಂದ […]
ಗಂಡ ಹೆಂಡಿರ ಜಗಳದೊಳು ಕೂಸು ಬಡವಾ ದಂತಾಯ್ತಲಾ ಕೂಪ ಮಂಡೂಕ ನ್ಯಾಯದೊಳು ಗಂಡಿಂದೇನು ಕಮ್ಮಿ ತಾನೆನುತ ಲೋಕವನರಿಯುವ ವಾಂಛೆಯೊಳು ಅಂಬೆಯರಡುಗೆಮನೆವಾರ್‍ತೆ ತೊರೆಯುತಿರೆ ನಂಮ್ಮೊಳನ್ನದರಿವೇ ಕನ್ನದೊರೆಗಳಿಗಾಹುತಿಯಾಗುತಿದೆ – ವಿಜ್ಞಾನೇಶ್ವರಾ […]
ಕೃಷಿ ಬಿಟ್ಟನ್ನವನು ಕೊಂಡುಣುವ ಹಂಗ್ಯಾಕೋ ಖುಷಿಯೊಳುಂಡನ್ನದ ಶಕುತಿ ಎಮ್ಮೊಳಡಗಿರಲು ಕಹಿ ಮದ್ದು ವೈದ್ಯರಾಕೆಮಗೆ ರೋಗಿಯಾಗುವ ಮೊದಲು ಕಷ್ಟದೋದಿನ ಶಾಲೆಗಳಾಕೆಮ್ಮ ಮಕ್ಕಳಿಗೆ ಉಣಲರಿವ ಮೊದಲು ಕಷ್ಟ ಸುಖ ವ್ಯತ್ಯಾಸವರಿಯದೀ […]
ಅನುನಯದೊಳಾಲೋಚಿಸಲು ಅರಿತೀತೆಮ್ಮ ಆರೋಗ್ಯವಿಹುದೆಮ್ಮದೇ ದುಡಿವ ಕೈಯೊಳಗೆ ಅನುಕೂಲವೆಂದಿನ್ನಾರೋ ಎಮ್ಮೆ ಬಾಯ್ಗನ್ನವಿಡುವ ಅನಾರೋಗ್ಯವನಾರಾದೊಡಂ ಬೇಕೆನಲುಂಟೇ? ಆರೊ ದುಡಿದನ್ನವುಣ್ಣುತಿರಲೆಲ್ಲೆಡೆಗು ಕೊಳೆರೋಗವಲಾ – ವಿಜ್ಞಾನೇಶ್ವರಾ *****
ತರತರದಡುಗೆ ಮಾಡುವ ವರಶಕ್ತಿಯೆಮಗಿರಲು ಬರವೆಂದೇನು ಬಡ ಬಡಿಸುವುದೋ ಬೋರಿನಾಳದಿ ನೀರೆತ್ತಿ ಸೂರಪ್ಪ ಮರಗಿಡವನಳಿಸುವುದೋ? ಊರಿಗೂರೇ ಮಧುಮೇಹವಪ್ಪಂತಾ ಕಬ್ಬನಿಕ್ಕುವುದೋ? ಬರವೆನದೆಲ್ಲೆಡೆ ಬೆಳೆವ ಹಲಸಿನಡುಗೆಲ್ಲ ರೋಗಕೆ ಮದ್ದೋ- ವಿಜ್ಞಾನೇಶ್ವರಾ *****
ವನ್ಯದ ಹಿತಮಿತವನರಿತಲ್ಲಲ್ಲೇ ಶೂಲದ ಮೊನೆಯೊಳಾಡಿದ ಬೇಟೆ ಭೋಜನ ಬಿಟ್ಟೇನಿ ದೇನಿದೆಲ್ಲ ವನ ಕಾನನ ಕಡಿದಲ್ಲಿ ಮುಸುಕಿನ ಜೋಳ ವನು ಬೆಳೆದದನು ಹದಿನಾರಕೊಂದಂಶ ಮಾಂಸಕಿಳಿಸುವಾ ಧುನಿಕ ಪಶುಪಕ್ಷಿ ಸಂಗೋಪನೆಗೆ […]