ಮೇಳದೊಳು ಮೈಕಿಟ್ಟು ಕಿವಿಕುಟ್ಟಿ ಪೇಳಲು ಬೇಕೇ?
ಸಾಲದೊಳು ಕೊಂಡುಂಬುದನು ಮೇಳದುನ್ನತಿ ಎನಬೇಕೇ?
ಮಲೆನಾಡ ಪೇಟೆಯೊಳ್ಯಾಕಿಂಥ ದೀನ ಮೇಳದಾರೈಕೆ?
ಬಲು ಬಗೆಯೊಳಾತ್ಮ ಶಕುತಿಯೊಳುಣುವಲ್ಲಿ ಏನೆಂಥ ಕೊರತೆ?
ಮೇಳದೊಳಷ್ಟಿಷ್ಟು ಕರಿದ ಹಲಸಿನ ಘಮಲೆದ್ದರದು ಸಾಕೇ ? -ವಿಜ್ಞಾನೇಶ್ವರಾ
*****