
ಸುಂದರತೆಯಾನಂದ ಅಮರವೆಂದನು ಅಂದು ಕವಿ ಕೀಟ್ಸು ಕಲ್ಪನೆಯ ಕನಸಿನಲಿ ಮೈಮರೆತು; ನನಸಿನಲಿ ತಾನೊಲಿದ ಸೌಂದರ್ಯದಲಿ ಬೆಂದು, ಅದು ತನಗೆ ದೊರಕದೆಯೆ ಸಾಗಿಹೋಗುವುದರಿತು ಸಾವ ಸುಖ ಬಯಸಿದನು ! ತಂಗಾಳಿ ಬೀಸುತಲಿ ಹೊತ್ತು ತರುವಂದದಲಿ ಹೊಸ ಹೂವ ಪರಿಮಳವ, ಸೌ...
ದುಃಖ ತುಂಬಿದ ಜೀವನ ನನ್ನದು ಸುಖಿ ಜೀವನ ದೊರೆಯುವದು ಎಂದು? ಆಹಾ ಎಲ್ಲಿಯೂ ಕಾಣೆ ನಾ ಇಂಥ ದುಃಖಿ ಜೀವನ ಅಳಿಸಲಾರೆಯೋ ಓ ದೇವ ಅಳಿಸಿ ನೀಡಲಾರೇಯೇ ಸುಖಿ ಜೀವನ? ಎಲ್ಲಿಲ್ಲದ ಮರುಳು ಮನ ನನ್ನನ್ನು ಕೊರೆದು ಸಣ್ಣಾಗಿಸಿದೆ ನನ್ನನ್ನು ಯಾರು ಉಪಚರಿಸುವರು...
ಅಮ್ಮ ನಿನ್ನ ಕೈ ತುತ್ತು ತಿನ್ನೋ ಹೊತ್ತು ಸ್ವರ್ಗದ ಬಾಗಿಲು ತೆರೆದಾಯ್ತು || ಹಕ್ಕಿ ಗೂಡು ಸೇರಿ ಮುದ್ದು ಮರಿಗೆ ಗುಟುಕು ಹಾಕುವ ಹೊತ್ತು ಸ್ವರ್ಗದ ಬಾಗಿಲು ತೆರೆದಾಯ್ತು || ಅಂಬೆಗಾಲ ಇಟ್ಟ ಕಂದ ಅಮ್ಮನ ಮಡಿಲ ಸೇರಿ ನಲಿವ ಹೊತ್ತು ಸ್ವರ್ಗದ ಬಾಗಿಲ...
ಬೇಗನೆ ಬಾ ಚೈತ್ರನೇ ಕಾದಿರುವೆವು ನಿನಗೆ ತೋರೋ ಶ್ರೀಮುಖವ ಮಾಗಿ ಕೊರೆದ ಇಳೆಗೆ ಮರಮರವೂ ಬರೆಸಿದೆ ಸನ್ಮಾನದ ಪತ್ರ, ಹೂ ತುಂಬಿದ ಕೊಂಬೆಗಳೋ ಹಕ್ಕಿಗಳಿಗೆ ಛತ್ರ; ಕೂಗುತ್ತಿವೆ ಕೋಗಿಲೆ ಓಲಗದನಿಯಾಗಿ, ಕಾಯುತ್ತಿದೆ ಬರವನು ಜಗವೇ ತಲೆಬಾಗಿ. ನಿನ್ನ ಹಜ್...
ನಿಶಿಯ ನೀರವ ಮೌನದೆದೆಯ ಏಕಾಂತವನು ಭೇದಿಸುತ ಗಾಳಿಯಲಿ ತೂರಿಬಂತು ಯಾವುದೋ ನೋವಿನಲಿ ತನ್ನ ಬಾಳಿನ ಹಣತೆ ತೇಲಿಬಿಟ್ಟೊಂದು ಕಿರು ಕೋಗಿಲೆಯ ಕೊರಗು. “ಕೋಗಿಲೆಯೆ ಇಂದೇಕೆ -ಈ ಋತು ವಸಂತದಲಿ ನಿನ್ನಿನಿಯನೊಲವಿನೆದೆ ಮಡಿಲೊಳಿರದೆ ಇಲ್ಲಿ ಏಕಾಂತದಲ...
ಅಕ್ಕಿ ಆರಿಸುವಾಗ ಚಿಕ್ಕದೊಂದು ಕನಸು ಬೆಳ್ಳಿ ಚುಕ್ಕಿ ಹಕ್ಕಿ ಹಾಗೆ ಬಾನು ತಾನು ತೂಗಿ ಹಾಡೋ ಮನಸು || ಬೆಳ್ಳಿ ಮೋಡ ಚಿತ್ತಾರ ಮಿಂಚಲ್ಲಿ ಕಪ್ಪು ಹರಳು ಕರಗಿ ಆಡುವ ಸಂಚು ಅಕ್ಕಿ ಚುಕ್ಕಿ ಹಕ್ಕಿ ಮನಸಿನಾಗೆ ಅಂದ ಚೆಂದ ತುಂಬಿದ ಸೊಗಸು || ಚಿನ್ನದ ರನ...
ಹೊಸ ಆಸೆಗೆ ಕಾರಣವೇ ಹೊಸ ಕಾಲದ ತೋರಣವೇ ಶುಭನಾಂದಿಗೆ ಪ್ರೇರಣವೇ ಹೊಸ ವರ್ಷವೆ ಬಾ, ಬಣಗುಡುವಾ ಒಣಬಾಳಿಗೆ ತೆನೆ ಪಯಿರನು ತಾ. ಮಣ್ಣ ಸೀಳಿ ಏಳುವಂತೆ ಥಣ್ಣಗಿರುವ ಚಿಲುಮೆ, ಹಣ್ಣ ತುಂಬಿ ನಿಲ್ಲುವಂತೆ ರಸರೂಪದ ಒಲುಮೆ, ಹುಣ್ಣಿಮೆಯ ಶಾಂತಿಯನ್ನೆ ಹೃದಯದ...













