ಹೊಸ ಆಸೆಗೆ ಕಾರಣವೇ

ಹೊಸ ಆಸೆಗೆ ಕಾರಣವೇ
ಹೊಸ ಕಾಲದ ತೋರಣವೇ
ಶುಭನಾಂದಿಗೆ ಪ್ರೇರಣವೇ
ಹೊಸ ವರ್ಷವೆ ಬಾ,
ಬಣಗುಡುವಾ ಒಣಬಾಳಿಗೆ ತೆನೆ ಪಯಿರನು ತಾ.

ಮಣ್ಣ ಸೀಳಿ ಏಳುವಂತೆ
ಥಣ್ಣಗಿರುವ ಚಿಲುಮೆ,
ಹಣ್ಣ ತುಂಬಿ ನಿಲ್ಲುವಂತೆ
ರಸರೂಪದ ಒಲುಮೆ,
ಹುಣ್ಣಿಮೆಯ ಶಾಂತಿಯನ್ನೆ
ಹೃದಯದಲ್ಲಿ ಹರಿಸು,
ಬಣ್ಣಗಳನು ದಾಟಿ ನಿಜವ ತಲುಪುವಂತೆ ಹರಸು.

ಮರಮರವೂ ಮುಡಿದು ನಿಲಲಿ
ಬಂಗಾರದ ಚಿಗುರ,
ನರನರನೂ ನೋವ ನುಂಗಿ
ಮೇಲೇಳಲಿ ಹಗುರ,
ಹರೆಹರೆಗೂ ಹಾರಿಬರಲಿ
ಹಕ್ಕಿ ಮಾಲೆ ಮಾಲೆ,
ಕರೆ ನೀಡಲಿ ಎಲ್ಲರಿಗೂ ಶುಭ ಉಣಿಸುವ ನಾಳೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನಶ್ಯಾಂತಿ
Next post ಉದ್ದನ್ನ ವ್ಯಕ್ತಿಯ ಆಡೆತಡೆಗಳು

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…