ಬೆಂಕಿ

ಗೋಡೆ ಗೋಡೆಗಳಲಿ ಅಲಂಕಾರಕ್ಕಿದ್ದ ಕತ್ತಿ ಚೂರಿಗಳಿಗೆಲ್ಲ ಹೊಳಪೋ, ಹೊಳಪು ಹರಿತವಹೆಚ್ಚಿಸುವ ಭಾರಿ ಹುರುಪು ಮಸೆವ ಕಲ್ಲಿಗೂ ಬಿಡುವಿಲ್ಲದ ಕೆಲಸ ಮನಮನದಲೂ ಕತ್ತಿ ಮಸೆವ ಬಿರುಸು ಸೈತಾನದ ಶಕ್ತಿಗೂ ಮತಾಂಧತೆಗೂ ಗಳಸ್ಯ ಕಂಠಸ್ಯ ಮಾನವತೆಗೂ ಬಿರುಕು...

ತಾಯಿಯ ಹಾಡು

ಅತ್ತೇ ಮಾವರಿಗಂಜಿ ಸುತ್ತೇಳು ನೆರೆಗಂಜಿ ಮತ್ತೇ ಪತಿ, ಭಾವ ಮೈದುನರಿಗಂಜಿ ಅವರಿಗಂಜಿ, ಇವರಿಗಂಜಿ ಅಂಜಿ, ಅಂಜಿ ಅಳುಕುತ್ತಲೇ ಬಾಳುವ ಕರ್ಮ ಬೇಡ ಮಗಳೇ ಎಲ್ಲರಿಗಂಜಿ ಬಾಳಿದವರೆಲ್ಲ ಕಾಲನ ಛಾಯೆಯ ತಿಮಿರವಾದರು ಹೊಸಲಿನಾಚೆಯ ಬೆಳಕ ಕಾಣದಾದರು...

ಬಿರುಕು

ಹೀಗೆ, ಹೀಗೆಯೇ ಇದ್ದೆ ಒಂದಂಗುಲವೂ ಆಚೀಚೆ ಹಾರದೆ ದಾಟದೆ ಯಾರಿಟ್ಟರೋ ಶಾಪ ಬರಿ ಪರಿತಾಪ ಒಳಗಿಹುದೆಲ್ಲವೂ ಮಿಥ್ಯೆ ಸೀತೆಗೂ ಒಮ್ಮೆ ಅಗ್ನಿ ಪರೀಕ್ಷೆ ಗೆದ್ದರೂ ಗೆಲುವಲ್ಲ ರಾಘವನದೇ ಪ್ರತೀಕ್ಷೆ ಯಾವುದೋ ನಿರೀಕ್ಷೆ ಗತಿತಪ್ಪಿದ ವಿವೇಚನೆ...

ಬಿಂದಿಗಿಷ್ಟು ವ್ಯಾಖ್ಯೆ

ಪ್ರತಿದಿನ ಬೆಳಗ್ಗೆ ಕನ್ನಡಿಯೊಳಗೆ ನನ್ನದೆ ದರ್ಶನ ಹೊರಡುವ ಅವಸರ ಒಂದಿಷ್ಟು ಕ್ರೀಮುಬಳಿದು ಲ್ಯಾಕ್ಮೆ ಹಚ್ಚುವಷ್ಟರಲ್ಲಿ ಸಮಯ ಒಂಬತ್ತು ಬಿಂದಿ ಇಡುವ ಹೊತ್ತು ಗಳಿಗೆ ತಟಸ್ಥ ಕೈ ಬಿಂದಿ ಇಡದೆ ಮುಗಿಯದು ಸಿಂಗಾರ ದೊಡ್ಡ ಬಿಂದಿ,...

ಇವ ಅವನಲ್ಲ

ನನ್ನ ಕಣ್ಣ ದರ್ಪಣದೊಳಗೆ ಕಾಣುತಿರುವ ಇವನಾರೇ? ಇವ ಅವನಲ್ಲ ಕಣೆ ಮತ್ಯಾರ ಬಿಂಬವೇ ಇದು ಬೊಗಸೆ ತುಂಬಾ ಮೊಗೆ ಮೊಗೆದು ಒಲವನುಣಿಸಿ ಬಾಳ ದಿನಗಳ ಹಿಗ್ಗಿಸಿದ ಹರ್ಷದ ವರ್ಷ ಧಾರೆ ಹರಿಸಿದ ಅವ ಇವನಲ್ಲ...

ವಿದಾಯ

ತೇಲಿ ತೇಲಿ ಹೋಗುತಿಹ ಬೆಳ್ಮುಗಿಲುಗಳೇ ನೀವು ಹೋಗುವಲ್ಲಿಗೆ ಹೊತ್ತು ನಡೆಯಿರಿ ನನ್ನ ಒಂದಿಷ್ಟು ಕನಸುಗಳ ಗಂಟ ನಿಮ್ಮ ಬೆನ್ನಲ್ಲಾದರೂ ಸಾಕಾರವಾಗಲಿ ಭಗ್ನವಾಗುಳಿದ ಕನಸುಗಳ ಅವಶೇಷ ಅಲ್ಲೆಲ್ಲೊ ಒಂದಿಷ್ಟು ಕಾವಿದ್ದರೂ ಇಳಿಸಿಬಿಡಿ, ನನ್ನ ಕನಸುಗಳ ಮೊಟ್ಟೆಯೊಡೆದು...

ಅಂದು-ಇಂದು

ಎಲ್ಲಿ? ಹೋದಳೆಲ್ಲಿ? ಉದ್ದ ಜಡೆ, ಜರಿಲಂಗ ಮೊಲ್ಲೆ ಮೊಗ್ಗಿನ ಜಡೆಯಾಕೆ ಮಡಿಕೆ ಕುಡಿಕೆ ಇರಿಸಿ ಅಡುಗೆಯಾಟ ಆಡಿ ಗೊಂಬೆ ಮಗುವ ತಟ್ಟಿ ಮಲಗಿಸಿ ಅಮ್ಮನಾಟ ಆಡಿದಾಕೆ ಎಲ್ಲಿ? ಹೋದಳೆಲ್ಲಿ? ಹೊಸಿಲು ದಾಟದ ಬೆಳಕು ಕಾಣದ...

ಪಂದ್ಯ

ಮೈದಾನದೊಳಗೆಲ್ಲ ಕುದುರೆ, ಆಮೆ, ಒಂಟೆ ಎತ್ತು, ಆನೆ, ಮೊಲ ಇವುಗಳಿಗೆಲ್ಲಾ ರೇಸಂತೆ ಯಾರು ಯಾರನು ಸೋಲಿಸಿ ಮುಂದೆ ಹೋಗುವರೋ ಮುಂದ್ಹೋದವರ ತಳ್ಳಿ ಕಾಲೆಳೆದು ಬೀಳಿಸಿ ಮುಂದ್ಹೋಗುವರೋ ಅವರೆ ಅಂತೆ, ಗೆದ್ದವರು ಇಲ್ಲಿ ಗೆಲ್ಲುವವರಾರು ಕಾಲಿಡಿದು...

ಸಾವಿಲ್ಲದ ಮಂತ್ರವಾದಿ

ಉದ್ದದಾಡಿಯ ಕೆಂಗಣ್ಣಿನ ಮಂತ್ರವಾದಿ ಇದ್ದಾನೆ ಹಾಗೆಯೇ, ಅದೆಷ್ಟೊ ವರ್ಷಗಳಿಂದ ಮುಪ್ಪಿಲ್ಲ ಸಾವಿಲ್ಲ ಕುಡಿದು ಬಿಟ್ಟಿದ್ದಾನೆ ದೇವಲೋಕದ ಅಮೃತ ಏಳು ಸಾಗರದಾಚೆ ಅದೆಲ್ಲಿಯೋ ಉಸಿರಾಡುತ್ತಿದೆಯಂತೆ ಪ್ರಾಣಪದಕ ಹುಡುಕಿ ಕೊಲ್ಲಲಾರದೆ, ನರಳಿವೆ ನರಳುತ್ತಲೇ ಇವೆ ಮೈ ಮನಸ್ಸು...

ನೀ ಹೀಗೆ ಇರಬಾರದೆ

ಅದೇಕೆ ಶರಧಿ ನೀ ಹೀಗೆ ಉಕ್ಕಿ ಆರ್ಭಟಿಸುವೆ ಎದೆಯಾಳದ ಭಾವಗಳ ಹರಿಬಿಡುವೆಯಾ ಹೀಗೆ ನೀ ಎಷ್ಟೆ ಉಕ್ಕಿದರೂ ವೇಗೋತ್ಕರ್ಷದಿ ಬೋರ್ಗರೆದರೂ ನಿಲ್ಲಲಾರೆ ನೀ ಕೊನೆಗೂ ದಡದಿ ಉಕ್ಕಿದಷ್ಟೆ ವೇಗದಿ ಹಿಂದಕ್ಕೋಡುವೆ ಪುಟಿದೆದ್ದ ಚಂಡಿನಂತೆ ಗುರುತ್ವಾಕರ್ಷಣೆಯ...