ಗಳಿಗೆಬಟ್ಟಲ ತಿರುವುಗಳಲ್ಲಿ – ೧೪

ರೊಟ್ಟಿ ಹೊರಗಿನ ಬಯಲು ಒಳಗಿನ ಆಲಯ ಅಂಚಲ್ಲಿ ಆವಿರ್ಭವಿಸುವ ಮಿಥ್ಯಾಗರ್ಭ. ಬಯಲು ಆಲಯಗಳ ಪರಿಧಿ ದಾಟುತ್ತಾ ಅಖಂಡ ಭೂಮಂಡಲ ವ್ಯಾಪಿಸುವ ರೊಟ್ಟಿಯೂ ಕಾಯುವುದು ನಿರ್ವಾಣಕ್ಕಾಗಿ, ಹಸಿವೆಗಾಗಿ ಅಲ್ಲ.

ಗಳಿಗೆಬಟ್ಟಲ ತಿರುವುಗಳಲ್ಲಿ – ೧೩

ಹಸಿಹಿಟ್ಟು ತಟ್ಟಿತಟ್ಟಿ ಒಂದೇ ಪದರದ ರೊಟ್ಟಿ ಹಾಳೆ. ಕಾವಲಿಯ ಮೇಲೆ ಬೇಯಲಿಕ್ಕಿದ್ದೇ ಉಬ್ಬಿದೆರಡು ಪದರ. ರೊಟ್ಟಿ ಒಂದೇ ಪದರವೆರಡು. ಆಂತರ್ಯ ನಿರ್ವಾತ ಬಹಿರ್ಮುಖ ಸಾಂಗತ್ಯ ಹಸಿವೆಗೆ ಅನೂಹ್ಯ.

ಗಳಿಗೆಬಟ್ಟಲ ತಿರುವುಗಳಲ್ಲಿ – ೧೨

ಸುಡುಸುಡುವ ಕಾವಲಿಗೆ ಬಿದ್ದ ಕ್ಷಣದಲ್ಲಿ ಹಸಿಹಿಟ್ಟಿನ ರೊಟ್ಟಿ ಮೈಯೆಲ್ಲಾ ಪ್ರತಿರೋಧದ ಕಡು ಕೆಂಪನೆ ಕಲೆಗಳು. ನಿಧಾನಕ್ಕೆ……… ಎಲ್ಲಾ ರೂಢಿಯಾಗಿ ತನ್ನ ಸುಟ್ಟುಕೊಳ್ಳುತ್ತಲೇ ಹಸಿವಿಗೆ ಬೇಕೆಂದಂತೆ ಬೇಯುವ ಹಾಳತ. ಮತ್ತೆಲ್ಲಾ ಮಾಮೂಲೇ.

ಗಳಿಗೆಬಟ್ಟಲ ತಿರುವುಗಳಲ್ಲಿ – ೧೧

ನೆಲದ ನೆರಳಿನ ರೊಟ್ಟಿ ಆಕಾಶದಗಲದ ದೈತ್ಯ ಹಸಿವಿನ ಅವಶ್ಯಕತೆಯಂತೆಲ್ಲಾ ಬದಲಾಗುವುದಿಲ್ಲ ಬದಲಾಗಬೇಕಿಲ್ಲ. ರೊಟ್ಟಿ ರೊಟ್ಟಿಯೇ ಹಸಿವು ಹಸಿವೇ. ನೆಲಕ್ಕದರದೇ ಶಕ್ತಿ ಆಕಾಶಕ್ಕದರದೇ ಮಿತಿ.

ಗಳಿಗೆಬಟ್ಟಲ ತಿರುವುಗಳಲ್ಲಿ – ೭

ಬೀದಿ ರಾಡಿಯಲಿ ಉರುಳುರುಳಿ ಆಡಿ ಮೈ ಮನವೆಲ್ಲಾ ಹಗುರಾಗಿ ಗಾಳಿಯಲಿ ತೇಲಾಡಿ ತನ್ನನೇ ಮರೆವ ಕನಸು ರೊಟ್ಟಿಗೆ. ಜಾಣ ಕುರುಡು ಜಾಣ ಕಿವುಡು ಜಾಣ ಮರೆವು. ಎಚ್ಚರದ ನಿಲುವು ಹಸಿವೆಗೆ.