ಹುಣ್ಣಿಮೆ

ನಿನ್ನ ಬರುವಿಕೆಗಾಗಿ ಕುಳಿತಿರುವೆ ಏಕಾಂಗಿಯಾಗಿ ನೀಲಬಾನತುಂಬ ಹಳದಿ ಹರಡಿ ದಕ್ಕಲಾಗದ ಭಾವಗಳ ಚಿಕ್ಕೆಗಳು ಮೂಡಿದವು. ಅಂತರಾಳ ತೆರೆದುಕೊಳ್ಳುವುದಿಲ್ಲ ಸುಲಭದಲಿ ಎರಡು ಮನೆಗಳ ಬಾಗಿಲುದಾಟಿ ಸಪ್ನಗಳು ದಿಕ್ಕೀ ಹೊಡೆಯುವ ಕ್ಷಣ ಚಂದ್ರ ತೇಲಿದ. ಹರಡಿ ಹಾಸಿದ...

ವಿಪರ್ಯಾಸ

ಮುಗ್ಧತೆಯಲ್ಲಿ ಕೆಲ ಎಚ್ಚರಿಕೆಗಳ ಇಟ್ಟುಕೊಳ್ಳಬೇಕಾಗುತ್ತದೆ ಇಲ್ಲದಿದ್ದರೆ ಅದು ಬೂದಿ ಮುಚ್ಚಿದ ಕೆಂಡ ಎದೆ ಸುಡುತ್ತದೆ. ಆತ್ಮೀಯತೆಯಲಿ ಕೆಲ ದೂರ ಹೊಂದಬೇಕು ಇಲ್ಲದಿದ್ದರೆ ಅದು ಅಸ್ಥಿತ್ವವನ್ನು ಮಂಜಿನಂತೆ ಕರಗಿ ನೀರಾಗಿ ಹರಿಸುವುದು. ಗೇಟಿನಾಚೆಯ ಗೆಳೆಯ ಕೂಡಾ...

ಸ್ವಗತ

ಹೆಜ್ಜೆಗಳು ಸೋತು ದಿನದ ಸೂರ್ಯ ಕಂತಿದ್ದಾನೆ ನಾಳೆಯ ಕಾಲವ ನಡೆಸುವ ರಾತ್ರಿಯಲಿ ಚೆಲ್ಲಿವೆ ನಕ್ಷತ್ರಗಳು ಬಾನತುಂಬ ಮನದ ಭಾವಕೆ ವಿದಾಯವಲ್ಲ ಇದು ಹೊಸಹುಟ್ಟು ತೆರೆದುಕೊಳ್ಳುವ ಬಸಿರು ಬಾಹು ಬಂಧನಗಳು ಹರಡಿವೆ ಇಳೆಯಲಿ. ಸಿದ್ಧಾರ್ಥನ ಹುಡುಕಾಟದ...

ರೂಪಾಂತರ

ಕಡಲೊಳಗಿನ ಹನಿ ಹನಿ ಸೂರ್ಯನೊಳಗಿನ ಬೆಳಕ ರೇಖೆಗಳು ಎಲ್ಲ ಜಂಜಡವ ಹೊತ್ತು ಸಾಗಿದ ಕಾಲ. ಮನದ ಭಾಷೆದ ಅರಳಿದ ಶಬ್ದ ಶಬ್ದದೊಳಗಿನ ನಿಶ್ಶಬ್ದ ಎಲ್ಲ ಮಥಿಸಿದ ಆತ್ಮ ಸಂಗಾತ. ಕನವರಿಸಿದ ಏಕಾಂತ ಮೊಳಕೆ ಒಡೆಯುವ...

ಸಹಿ

ಎಲ್ಲವೂ ವಿಸ್ಮಯ ಅದ್ಭುತಗಳೆಂದು ಭೂತ ಕನ್ನಡಿಯಲಿ ತೋರಿದರೆ ಮತ್ತೆ ಹುಟ್ಟು ಸಾವಿನ ಭಯವಿರುವುದಿಲ್ಲ. ಭೋದಿ ವೃಕ್ಷದ ಕೆಳಗೆ ಅಂತ ಹೇಳಿದರೆ ನಂಬದಿರಿ ನೀವು ಅವರನ್ನು. ಹಸಿರು ಹುಲ್ಲಿನ ಹಾಡು ದನಕಾಯುವ ಹುಡುಗನ ಕೊರಳಲಿ ಹಾಯ್ದು...

ನೀ ಬರುವ ದಾರಿ

ಎತ್ತರದ ಬೆಟ್ಟವನೇರಿ ಆಕಾಶದ ಮೋಡಗಳನ್ನು ಹಿಡಿಯಬೇಕೆಂದಿರುವೆ ದಾರಿ ಯಾವುದು ಏಣಿಯನ್ನಿಡಲು ಮಿನುಗುವ ನಕ್ಷತ್ರಗಳಿಂದ ಕಂದೀಲು ದೀಪ ಹಚ್ಚಬೇಕೆಂದಿರುವೆ ಬೆಳಕು ಯಾವುದು ಕಿಡಿಸೋಕಲು. ಹಿಮ ಪರ್ವತದ ತಂಪುಗಾಳಿಯು ನನ್ನ ಏಕಾಂತದ ಹಾಡು ಹಾಡಬೇಕೆಂದಿರುವೆ ಆಳ ಯಾವುದು...

ಅವಳಲ್ಲಿ ನಾನು

ಈ ಮಧ್ಯಾಹ್ನ ಅವಳು ದಾಟಿ ಹೋದಳು ಹಾಗೆಯೇ ಇದ್ದವು ಅರೆತೆರೆದ ಕಣ್ಣುಗಳು ಕನಸುಗಳು ಅದು ಅಪರೂಪದ ದೃಶ್ಯವೆಂದು ಅನಿಸಿಕೊಂಡಾಗಲೇ ಬೆರೆಯುತ್ತಿತ್ತು ಬೆವರ ಹನಿಗಳು ಗಾಳಿಯಲಿ, ಅವಳು ಮೆತ್ತಗೆ ನಡೆಯುತ್ತಿದ್ದಳು. ಗಾಳಿಯಲಿ ತೇಲಿದ ಪರಾಗ ಸೆರಗಿನಗುಂಟ...

ಪೋರನ ಪೆಪ್ಪರಮಿಂಟು

ಆ ಗೂಡಂಗಡಿಯ ಬಳಿ ನಿಂತಿದ್ದಾನೆ ಆ ಪುಟ್ಟ ಚೋರ ಕೈಯಲ್ಲಿ ಹಿಡಿದಿದ್ದಾನೆ ಸಣ್ಣ ಪೆಪ್ಪರಮಿಂಟಿನ ಜರಿ ಹಾಳೆ ಇಳಿದು ಇಳಿದು ಸರಿಯುವ ಚಡ್ಡಿ ಏರಿಸುತ್ತಿದ್ದಾನೆ ಒಂಟಿ ಕೈಯಲಿ ಅಂಗಡಿಯ ಬಾಟಿಲುಗಳು ಅವನ ನೋಟ ಇಳಿದಿದೆ....

ಹಳದಿ ಹೂ

ಎದುರು ಮನೆಯ ಕಂಪೌಂಡಿನಲಿ ಎದ್ದು ನಿಂತು ಪಸರಿಸಿದ ಹಳದಿ ಹೂಗಳು ಎವೆಗಳು ತೆರೆದು ನೋಡುತ್ತಿವೆ ಅಲ್ಲೊಂದು ಪುಟ್ಟ ದುಂಬಿ ಝೇಂಕಾರ ಗಾಳಿಗೆ ಮೆಲ್ಲಗೆ ಹರಿದಾಡಿದ ಬಾವುಟ ಕಣ್ಣ ತುಂಬ ತುಂಬಿದ ಬಣ್ಣದ ಮೋಡಗಳು. ಶಾಲೆಗೆ...

ಕುಂತಿ

ಸೂರ್ಯ ಕಂತಿದ್ದಾನೆ ಅವಳು ದಿನದ ದಗದ ಮುಗಿಸಿ ಹೊರಳುತ್ತಿದ್ದಾಳೆ ಧೂಳು ಕಾಲುದಾರಿಯಲ್ಲಿ ಉಸುಕಿನಲ್ಲಿ ಅವಳ ಹೆಜ್ಜೆಗಳು ಮೂಡುವದಿಲ್ಲ, ಬರೀ ನಿಟ್ಟುಸಿರು ಕೇಳುತ್ತದೆ. ಮಗಳು ಈ ದಿನ ಯಾಕೋ ಮಂಕಾಗಿದ್ದಳು ಹಾರಿ ಬರುವ ಹಗಲ ಬಿಸಿಲಿಗೆ...