ಎಲ್ಲವೂ ವಿಸ್ಮಯ ಅದ್ಭುತಗಳೆಂದು
ಭೂತ ಕನ್ನಡಿಯಲಿ ತೋರಿದರೆ ಮತ್ತೆ
ಹುಟ್ಟು ಸಾವಿನ ಭಯವಿರುವುದಿಲ್ಲ.
ಭೋದಿ ವೃಕ್ಷದ ಕೆಳಗೆ ಅಂತ ಹೇಳಿದರೆ
ನಂಬದಿರಿ ನೀವು ಅವರನ್ನು.
ಹಸಿರು ಹುಲ್ಲಿನ ಹಾಡು ದನಕಾಯುವ
ಹುಡುಗನ ಕೊರಳಲಿ ಹಾಯ್ದು ಬಂದರೆ
ಮಳೆಯ ನೀರಲಿ ನಟ್ಟಿ ನೆಡುವ ಹೆಂಗಸರು
ಹಕ್ಕಿಯಂತೆ ಎದೆ ತೆರೆದು ಪದ ಹಾಡಿದರೆ
ಪ್ರವಹಿಸಿ ನಂಬಿ ನೀವು ಅವರನ್ನು.
ಬೆಳದಿಂಗಳ ರಾತ್ರಿ ಗವಾಕ್ಷಿಯಲಿ
ಕವಿ ಹಾಡಿದರೆ ಚಿಕ್ಕಿಗಳು ಮಿನುಗಿದರೆ
ಬೆಚ್ಚಿ ಬೀಳುವ ಗುಡುಗು ಸಿಡಿಲ ರಾತ್ರಿ
ಆಕಾಶದಲಿ ವಿಸ್ಮಯ ಉಂಟು ಅಂತ ಹೇಳಿದರೆ
ನಂಬದಿರಿ ನೀವು ಅವರನ್ನು.
ಬರಗಾಲದಲಿ ಪ್ರವಾಹದಲಿ
ಎಂತಹ ಅಡೆತಡೆಗಳು ಬಂದರೂ ಪ್ರಜೆ
ಆಳಕೆ ಇಳಿದು ರಮಿಸಿ ಉಣಬಡಿಸಿ
ಎಲ್ಲಿಂದಲೋ ಕರಿಕಂಬಳಿ ಕುಪ್ಪಸ ತಂದರೆ
ನಂಬಿರಿ ನೀವು ಎಂದಿಗೂ ಅವರನ್ನು.
*****