ಏನೆನ್ನಲಿ ಏನೆನ್ನಲಿ ಎನ್ನ
ಮನದಮನ್ವಂತರದ ಧಾರೆಗಿನ್ನು ನಾನು,
ಬರಿದೆ ಬರೆವರ ಪದದಿ
ಕಟ್ಟುವುದೆಂತೀ ಬದುಕಿನಕ್ಕರವ ನಾನು-ನೀನು, |
ಬರೆದುದೆ ಬದುಕಲ್ಲ,
ಬದುಕಿದ್ದು ತಾ ನಿಲುಕಲ್ಲ,
ಕಾವ್ಯವೆಂದರೆ ಅದುವೆ,
ಜನನಮರಣದಾಚೆ ಈಚೆ ಬಾಳು,
ಹೇಳುವರು-ಹೇಳಿದ್ದು,
ಕೇಳುವರು-ಕೇಳಿದ್ದು,
ಉಂಡುಂಡು ಮರೆತು ಮಲೆಯುತಲಿರಲು,
ಸಂವಾದವೇತರದು ಶೂನ್ಯದಲ್ಲಿ,
ವೇಷಿಗರ ಬಿನ್ನಾಣ,
ಮುಗಿಲಗಲ ಕುಣಿತದಲಿ,
ಮಣ್ಣರಂಗದ ಪಾಡು,
ಪಾಡಾಗದ ಚರಮಗೀತೆ. |
*****