ಎತ್ತರದ ಬೆಟ್ಟವನೇರಿ ಆಕಾಶದ
ಮೋಡಗಳನ್ನು ಹಿಡಿಯಬೇಕೆಂದಿರುವೆ
ದಾರಿ ಯಾವುದು ಏಣಿಯನ್ನಿಡಲು
ಮಿನುಗುವ ನಕ್ಷತ್ರಗಳಿಂದ
ಕಂದೀಲು ದೀಪ ಹಚ್ಚಬೇಕೆಂದಿರುವೆ
ಬೆಳಕು ಯಾವುದು ಕಿಡಿಸೋಕಲು.
ಹಿಮ ಪರ್ವತದ ತಂಪುಗಾಳಿಯು
ನನ್ನ ಏಕಾಂತದ ಹಾಡು ಹಾಡಬೇಕೆಂದಿರುವೆ
ಆಳ ಯಾವುದು ರಾಗಗಳ ಪಲಕುಗಳಿಗೆ.
ಜೋರಾಗಿ ಬೀಸುವ ಗಾಳಿಯಲಿ
ಜೊತೆಗಾರ ಬರುವನೆಂದು ಕಾದಿರುವೆ
ಸ್ಪರ್ಶ ಯಾವುದು ನಮ್ಮಿಬ್ಬರ ಬೆಸೆಯಲು.
ಮಿಣುಕು ಹುಳುಗಳ ಬೆಳಕಿನಡಿ
ನಿನ್ನ ಪ್ರೇಮಗೀತೆ ಬರೆಯಬೇಕೆಂದಿರುವೆ
ಮೃದುವಾಗಿ ಪುಟಿದೇಳುವ ಶಬ್ದಗಳಾವವು.
ಬೇಸಿಗೆ ಮಳೆಯ ದಗೆಯಲಿ
ತೊಯ್ದು ನಿನ್ನ ನೆನಪಿನ ಬೆವರಿನಲಿ
ಒಂದು ನರ್ತನ ಹೂವಿನ ಜೊತೆ ಹೇಗೆ ಮಾಡಲಿ
ಎಲ್ಲವನ್ನು ಬಿಟ್ಟು ಬರೀ ನಿನ್ನ ನೋಡಬೇಕೆಂದಿರುವೆ
ಈ ತಿಳೀ ಮುಂಜಾನೆಯ ಸೂರ್ಯ ಕಿರಣಗಳು
ನೀ ಬರುವ ದಾರಿ ಈ ಓಣಿಯೊಳಗೆ ಯಾವುದು?
*****