ಮುಗ್ಧತೆಯಲ್ಲಿ ಕೆಲ ಎಚ್ಚರಿಕೆಗಳ
ಇಟ್ಟುಕೊಳ್ಳಬೇಕಾಗುತ್ತದೆ ಇಲ್ಲದಿದ್ದರೆ
ಅದು ಬೂದಿ ಮುಚ್ಚಿದ ಕೆಂಡ
ಎದೆ ಸುಡುತ್ತದೆ.
ಆತ್ಮೀಯತೆಯಲಿ ಕೆಲ ದೂರ
ಹೊಂದಬೇಕು ಇಲ್ಲದಿದ್ದರೆ ಅದು
ಅಸ್ಥಿತ್ವವನ್ನು ಮಂಜಿನಂತೆ ಕರಗಿ
ನೀರಾಗಿ ಹರಿಸುವುದು.
ಗೇಟಿನಾಚೆಯ ಗೆಳೆಯ ಕೂಡಾ
ಒಮ್ಮೊಮ್ಮೆ ಈಷ್ಯೆಯಲಿ ಕುದಿದು
ಬಿಸಿ ಎಣ್ಣೆಯ ಶಾಖ ತಗುಲಿಸಿ
ಮನೆಯ ಬಾಗಿಲ ಬೀಗ ಮುರಿಯುವುದು.
ಕೋಪದಲಿ ಅಂದ ಮಾತುಗಳು
ಲೆಕ್ಕವಿಟ್ಟವರು ಹಲವರು ಅವರು
ಬೇಟೆಯಾಡಬಹುದು ಬರುವ ದಿನ
ಎಚ್ಚರಿಕೆಯ ಗಂಟೆಯಾಗಬಲ್ಲದು.
ವ್ಯಕ್ತ ಅವ್ಯಕ್ತ ರಿಕ್ತ ಅತಿರಿಕ್ತಗಳೆಲ್ಲವೂ
ಗುಮಾನಿಗಳಾಗಿಯೇ ಇದ್ದು ಒಮ್ಮೊಮ್ಮೆ
ಪ್ರಶ್ನೆಗಳಿಗೆ ಉತ್ತರವಾಗಬಲ್ಲದು
ಸಂಶಯದಲಿ ಒಂದು ಹಾಯಿ ನಿನ್ನ ಕಾಡಬಲ್ಲದು.
*****