ಇಜ್ಜೋಡು

ಒಂದಿದ್ದರೊಂದಿಲ್ಲ; ಇಂದಿಗೂ ಎರಡು ಹೊಂ- ದಿಲ್ಲ; ನಡೆದಿದೆ ಸೃಷ್ಟಿ; ಫಲವೀವ ಅಮೃತ ವೃ- ಷ್ಟಿಯ ಬಯಸಿ, ಕೊನರುತಿದೆ ಕಮರುತಿದೆ. ಎಲೆಯ ಪಸ- ರದಲಿ ಕಾಣದಿದೆ ಹೂ-ಹಣ್ಣು, ಪ್ರಥಮ ಪ್ರಾಯ- ದಲ್ಲಿ ನಾಚಿಗೆ ಮುಸುಗಿ ಸುಕುಮಾರ...

ಸುಖಸ್ಪರ್‍ಶ

ನೊಸಲು ನೊಸಲಿನಲಿರಿಸಿ ಸುಸಿಲಾಡುವವು ಹೂವು ಹೊಳೆ ನೀರ ಬಳಿಗೆ; ಪಡಿನೆಳಲನೆದೆಯೊಳಗಿರಿಸಿ ಮಧುರ ಸಲಿಲ ಸಲೀಲ ನಲಿದಾಡುವದು; ಚಿತ್ರ ರತಿಯ ನೋಡುತ ಚಿಕ್ಕೆ ಕಣ್ಚಿವುಟುವವು; ಮಂದ ಮಾರುತನು ಪಿಸುಗುಡುತಲಿಹನದರ ಸೌಸವದ ಸವಿಮಾತ; ಸಂಜೆ ಬಾಸಣಿಸಲಿದೆ ತಿಮಿರ...

ಸಂತತಿ

"ವರನೆ ಬಾ ಇಲ್ಲ; ಮುಗಿಲಿಗೆ ನೆಲವನಿತ್ತಂತೆ ನಿನಗೊಪ್ಪಿಸುವೆನಿವಳ. ಇವಳು ಸುಕ್ಷೇತ್ರ, ಕಾ- ದುದಲಿ ಅರ್‍ಥದಲಿ ಸಹಧರ್‍ಮಿಣಿಯು ಮುಕ್ತರೊಲು, ಚೆಲುವರನು, ಕಟ್ಟಾಳುಗಳನು, ಗಂಭೀರರನು ಪಡೆದು ಇವಳಲಿ ಬುನಾದಿಯ ಮನೆಯ ಕಟ್ಟುಮುಂ- ದಕೆ. ದೇವ ದೇವತಾ ಗಣಕೆ...

ಸಮಸ್ಯೆ

ತಾಯಿ ಹೇಳುತಲಿದ್ದಳೆನ್ನ ಬಾಲ್ಯದ ಕತೆಯ :- ಮಂಜಾವದಿಂದ ಮುಂಗಾಳು ಕವಿಯುವ ವರೆಗೆ ಓರಿಗೆಯ ಹಸುಳರೊಡನಾಡಿ, ಬಿಸಿಲಿನ ಬೇಗೆ ಬೆಳದಿಂಗಳೆನೆ ಕಳೆಯುತಿದ್ದೆ. ಹಸಿವೆಯ ವ್ಯಥೆಯ ನಾನು ಅರಿತಿರಲಿಲ್ಲ. ಆಟನೋಟಕೆ ಹೀಗೆ ಮೆಚ್ಚಿಯೂಟವ ಮರೆಯೆ, ಕಿರುಮನೆಯ ಕತ್ತಲೆಯ-...

ಕರುಳು

ತಾಮ್ರಪರ್‍ಣಿಯ ಒಡಲ ರಾಜಮೌಕ್ತಿಕದ ಭಂ- ಡಾರ ಮುದ್ರೆಯನೊಡೆಯೆ, ದಿನವು ನೀರನು ಧುಮುಕು- ವಂಥ ಕುಂಗನು ಪಡೆವುದೇನು? ಮೈಮುರಿ ದುಡಿಯೆ ಮರುದಿನವು ಅಣಿಗೊಳುವದಕೆ ಕೂಳತುತ್ತು; ಮನ ಮರೆಯೆ ಕುಡಿಯಲು ಗುಟುಕು. ಹೆತ್ತ ಹೊಟ್ಟೆಯನ್ನು, ಕೈ ಹಿಡಿದ...

ಭಾಟಘರಸಾಗರ

ಪರಶುರಾಮನ ಮಹೋತ್ತುಂಗ ದೋರ್‍ದಂಡ ಉ- ದ್ದಂಡ ಸಹ್ಯದಸಹ್ಯ ಸಾಮರ್‍ಥ್ಯದಲಿ ನೀಡಿ- ಕೊಂಡಿದೆ. ಇದೊ ಅಪರಜಲಧಿಯು ಪರಾಜಿತರ ನಯದೊಳಂಭೋದಕಂಭಗಳಿಂದ ರಾಜ್ಯಾಭಿ- ಷೇಕ ಮಾಡುವದು ವರ್‍ಷಕ್ಕೆ. ಸ್ವಚ್ಛಂದನಿ ರ್‍ಬಂಧ ಸ್ವಾತಂತ್ರ್ಯದೊಳು ನೀರೆ ತೀಡುವಳು ಸೀ- ಮಾರೇಖೆ. ಕಾಡಬೇಡರ...

ಪ್ರಳಯ ಸೃಷ್ಟಿ

ಹೊಗೆ ಮೋಡ ಹಿಂಜಿ, ಕಣ್ಮರೆಯಾಗುವಂತೆ, ನೆನೆ- ಸಿದ ರೂಪ ಹುಡಿಯಾಗತಿದೆ; ಮಬ್ಬು ಕವಿದು ಬರು- ತಿದೆ; ಸ್ವಪ್ನಲೋಕದೊಳು ಆಕಾರ ಪ್ರಳಯವಿರು- ವಂತೆ, ತುಂಬಿದೆ ನಿರಾಕಾರ ತಮ. ಚಿತ್ತಘನ ನಿಬಿಡ ವನ; ಹೊತ್ತು ಗೊತ್ತಿಲ್ಲ; ಮಿಸುಗುಡದೆ...

ಅಷ್ಟಷಟ್ಪದಿ

ಅಷ್ಟಷಟ್ಟದಿಯಲ್ಲಿ ಉಯ್ಯಾಲೆಯಾಡುತಿದೆ ಕೌತುಕದ ಬಗೆ; ಹಾಗೆ ಇದು, ಹೀಗೆ ಇದು, ಎನುತ ಜೀಕುಜೀಕಿನ ವಿಲಾಸದಲಿ ತನ್ಮಯವಾಗಿ, ಸಂಶಯವೆ ಸಿಂಗಾರವಡೆದು ಸ್ವಚ್ಛಂದದಲಿ ಬೀರಿದುದೆ ನೋಟ, ಹಾರಿದುದೆ ಹುಬ್ಬೆನುವಂತೆ ಕುಣಿಸುತಿದೆ ಅಂಗಾಂಗ; ಹೃದ್ಯ ಚಿತ್ತತರಂಗ ಮಿಂಚಿನಂತುಲ್ಲಟಿಸಿ ಅಟಮಟಿಸಿ...