Home / ಉಯ್ಯಾಲೆ

Browsing Tag: ಉಯ್ಯಾಲೆ

ಉದಯಾಸ್ತಗಳ ಜನ್ಮ ಮರಣ ಚಕ್ರದ ಬಾಧೆ ಇದಕಿಲ್ಲ; ಕುಂದಮೀರಿದೆ; ಗ್ರಹಣ ಹತ್ತದಿದ- ಕೆಂದಿಗೂ; ಬೇರೆ ಫಲದಾಸೆಯಿದನೊಣಗಿಸದು; ಅಜ್ಞಾನ ಮುಗ್ಧ ಮಾಧುರ್‍ಯ ಮಧುವಲ್ಲ; ಹೊಸ ಹರೆಯ ಹುಮ್ಮಸದ ಹುಸಿಬಿಸಿಲುಗುದುರೆಯ ಬಾಯ ಬುರುಗು ಬೆಳಕಲ್ಲ; ಇದು ಹೊಳೆಯ ದಾಟಿದ...

ವಿಜಯ ವಿದ್ಯಾರಣ್ಯ ನೀನೆ ಧನ್ಯ || ಮೈಯೆಲ್ಲ ಕಣ್ಣುಳ್ಳ ಮುಂದಾಳು ಬೇಕು| ಕುರುಡುಬಳ್ಳಿಯ ಮೆಳ್ಳ ನಾಯಕರು ಸಾಕು || ಈಸಗುಂಬಳ ಜೊತೆಯು ಬೇಕು, ಈಸುವರೆ, ! ಪಾತಾಳಕೊಯ್ಯುವಾ ಕಲ್ಲನರಸುವರೇ ? || ಯೋಗಿ, ನಿನ್ನೊಲು ನೀನು ! ದೊರೆಯನನ್ಯ | ವಿಜಯ ವಿದ್ಯ...

೧ ಜೀವಕ್ಕೆ ಕಳೆ ಕಡಮೆ ಇರುವದುಂಟು ಭಾವಕ್ಕು ಹುಸಿಬಣ್ಣ ಬರುವದುಂಟು. ಜೀವಭಾವಕ್ಕೊಂದು ಸಾಂಗತ್ಯವಿಲ್ಲದಿರೆ ಅಪಸರದ ಮಾಲೆಯನು ತರುವದುಂಟು. ಹೀಗಿಹುದ ನೋಡಿಹೆನು-ಎಂದಮೇಲೆ, “ಹಾಳಿಗೂ ಬಾಳುಂಟೇ?” ಉಂಟು, ಉಂಟು! ೨ ನಾಲಗೆಗೆ ನಿಲುಕದಾ ನ...

ಗೀತದೊಳಗಿಹ ಬಲವು ಯಾತರೊಳಗೂ ಇಲ್ಲ! ಭೂತಜಾತಂಗಳಿಗೆ ಈ ಜಗದ ದುಃಖಗಳ ಆತಂಕಗಳ ಮರೆವುಮಾಡಿ, ಮನದೊಳಗಾವ ಪಾತಕಿಯು ಪಾಪಗಳ ಹಗಲಿರುಳು ನೆನೆನೆನೆದು “ತ್ರಾತನಿಲ್ಲವೆ ? ಸತ್ತೆ! ಅಯ್ಯೊ !” ಎಂದೋರಲುತಿರೆ, ಮಾತೆಯಂತವನನ್ನು ಹಾಡಿ ಮಲಗಿಸಿ;...

ಪೂರ್‍ವಸಾಗರವನ್ನು ಮುಕ್ಕುಳಿಸಿ ಮೇಲ್ಮೆಯಲಿ ಮೂಡಣದ ಬೆಟ್ಟಗಳ ಮೆಟ್ಟಿ ಎದ್ದೆ. ಕೈಗೆ ಕೈ ಚಿಗುರಿ, ನೂರ್‍ನೂರು ಸಾಸಿರವಾಗಿ ದಿಗ್ದೇಶಗಳನು ಸೆರೆಗೊಳುತಲಿದ್ದೆ, ಮಧ್ಯಾನ್ಹ ಬಿಸಿಲಿನೊಲು ಭಾಗ್ಯವಿಳಿಯುತಲಿರಲು ಪಡುವಲದ ಘಟ್ಟಗಳನೇರಿ ಬರುವೆ. ಕಡಿದುಡಿ...

ನಾಯಿಮಕ್ಕಳು ನಾವು-ಅರಸು ಮಕ್ಕಳು ತಾವು !…. ನಾವು ನಿಷ್ಪಾಪರೆಂದೊಂದುಕೊಂಡವರಾರು….? ಜನ್ಮದಿಂ ಜನ್ಮಕ್ಕೆ ಉಡುಗಿ ಗೂಡಿಸಿ ತಂದ ತೊಡಕುಗಳ ಮಾಲೆ ನಮ್ಮೆದಿಯಲ್ಲಿ ಜೋಲಾಡು- ತಿದೆ; ಬೆನ್ನ ಬಿಡದೆ ಬರುತಿದೆ ಕರ್‍ಮವಿಧಿ ವಧುವಿ ನೊಲು; ತಲ...

ಬೆರಳು ಬೆರಳುಗಳಲ್ಲಿ, ಕೊರಳು ಕೊರಳಿನಲಿರಿಸಿ, ಸುರುಳುರುಳಿ, ಸುತ್ತಿರುವ ಬಳ್ಳಿಗಳ ಹಾಗಾಗಿ, ಅರಳಿಸುತಲೊಂದೊಂದೆ ಅವಳಿ ಹೂ, ದಿವ್ಯತರ ದೃಷ್ಟಿಯನು ಪಡೆಯುವಂತೆ, ಭರದಿ ಮೈಮೇಲೆಲ್ಲ ಕಣ್ಣಾಗೆ, ಆಗ ಮೈ- ಮರೆತು ನೋಡುತ್ತ ನಿಲ್ಲೋಣ ಸ್ವರ್‍ಲೋಕವನು, ಹರ...

ನೆಲ ಹಸಿರು; ಹೊಲ ಹಸಿರು; ಗಿಡಗಂಟಿ ಹಸಿರು; ಫಲ ಏನೊ ? ಬಳೆಯುತಿದೆ ಬಯಲ ಬಸಿರು. ನೆನೆನೆನೆಸಿ ಅತ್ತಂತೆ ಆಗಾಗ ಮಳೆಯು, ಅನಿತರೊಳು ನಡು ನಡುವೆ ಹೊಂಬಿಸಿಲ ಕಳೆಯು. ಗಾಳ ಗೋಳಿಡುವಂತೆ ಭೋರಾಡುತಿಹುದು; ಬಾಳುವೆಯೆ ಹೊಸದೊಂದು ಒಗಟವಾಗಿಹುದು. ನೆಲೆಯರಿ...

ತಡಸಲು ತಡಸಲು ಅಗೊ ಅಲ್ಲಿ, ದಡದಡ ಎನುವದು ಎದೆ ಇಲ್ಲಿ. ದಿಡುಗದೊ ಗುಡುಗುಡು ಗುಡುಗುತಿದೆ ಗಿಡ, ಮರ, ಜನ, ಮನ ನಡುಗುತಿದೆ. ಗುಡುಗೇ ನೀರಾಗಿಹುದಲ್ಲಿ, ಮೋಡ ಹುಟ್ಟುತಿದೆ ಮಳೆಯಲ್ಲಿ; ತುಂತುರ ಮಳೆ ಹೊಳೆಯಂಚಿಗಿದೆ, ನೀರೇ ಮಿರಿ ಮಿರಿ ಮಿಂಚುತಿದೆ. ಮ...

ಮಳೆ ಬರುವ ಕಾಲಕ್ಕ ಒಳಗ್ಯಾಕ ಕೂತೇವೊ ಇಳೆಯೊಡನೆ ಜಳಕ ಮಾಡೋಣ ನಾವೂನು, ಮೋಡಗಳ ಆಟ, ನೋಡೋಣ. ಮರಿಗುಡುಗು ಕೆಲೆವಾಗ ಮಳೆಗಾಳಿ ಸೆಳೆವಾಗ ಮರಗಿಡಗಳನ್ನು ಎಳೆವಾಗ ನಾವ್ಯಾಕ, ಮನೆಯಲ್ಲಿ ಅವಿತು ಕೂತೇವೊ. ಕೋಲ್ಮಿಂಚು ಇಣಿಕಿಣಿಕಿ ಕಣ್ಕುಣಿಸಿ ಕೆಣಕೆಣಕಿ ಬ...

123...8

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...