“ವರನೆ ಬಾ ಇಲ್ಲ; ಮುಗಿಲಿಗೆ ನೆಲವನಿತ್ತಂತೆ
ನಿನಗೊಪ್ಪಿಸುವೆನಿವಳ. ಇವಳು ಸುಕ್ಷೇತ್ರ, ಕಾ-
ದುದಲಿ ಅರ್‍ಥದಲಿ ಸಹಧರ್‍ಮಿಣಿಯು ಮುಕ್ತರೊಲು,
ಚೆಲುವರನು, ಕಟ್ಟಾಳುಗಳನು, ಗಂಭೀರರನು
ಪಡೆದು ಇವಳಲಿ ಬುನಾದಿಯ ಮನೆಯ ಕಟ್ಟುಮುಂ-
ದಕೆ. ದೇವ ದೇವತಾ ಗಣಕೆ ಮೇಲ್ಪಂಕ್ತಿಯೆನೆ
ನಿನ್ನ ಮನದಲಿ ಹೊಳೆದು ಬೆಳೆವ, ಕನಸಲಿ ಇವಳು-
ಕೊಂಡು ಕೊನೆಯುವ ಮೂರ್‍ತಿಗಳನ್ನು ಮೂಡಿಸಿರಿನ್ನು”
“ಕೃತಯುಗವು ಕಲಿಯುಗಕೆ ಇಳಿದು ನಿಂತಿತು; ಮಾನ-
ವನ ದುಃಖದರ್‍ಶನವು ಬೆಳೆದು ಬಂದಿತು; ಸುಖವು
ಕಣಸಿನಲಿ ಕೆಣಕುತಿದೆ. ವಾನರರು ನರರಾದ-
ರೋ, ನರರೆ ವಾನರರು ಆಗುತಿಹರೋ? ಕವಲು
ಕವಲಾಗುತಿದೆ ಆಸೆ; ಕುಣಿಯುತಿದೆ ಪ್ರಾಣ, ಮಂ-
ತ್ರವನೆ ನುಂಗಿತೊ ತಂತ್ರ, ಎಲೆ ಕನ್ನೆ, ಮನದನ್ನೆ?”
*****