Home / Kannada Poem

Browsing Tag: Kannada Poem

ವಧು ಪರೀಕ್ಷೆ ನಡೆದಿದೆ ಜಾತಕ ಫಲಗಳೆಲ್ಲ ಕೂಡಿ| ಹಿರಿಯರೆಲ್ಲರೂ ಒಂದೆಡೆ ಸೇರಿ ಕನ್ಯೆಯೋರ್ವಳ ಸಂಸಾರ ದೀಕ್ಷೆಗೆ|| ಗುಣ ಗಣಗಳನ್ನೆಲ್ಲಾ ಗಣನೆ ಮಾಡಿ ಎರಡು ಜಾತಕಗಳ ತಾಳೆ ನೋಡಿ| ತುಂಬು ಸೌಹಾರ್ದತೆಯಿಂದ ಕನ್ಯೆ ಇವಳ ಮನಸ ಅರಿಯೆ ಮೆಲು ದನಿಯಲಿ ಪ್ರಶ...

ಪಂಚಮಿ ಹಬ್ಬ ಬಂತು ನಾಡಿಗೆ ಸಂಭ್ರಮ ಸಡಗರ ನಾರಿಯರಿಗೆ ಮಡಿಯುಟ್ಟು ನಾರಿಯರೆಲ್ಲ ಮುತ್ತಿಗೆ ಹಾಕುವರಲ್ಲ ನಾಗರಾಜಗೆ ಅಳ್ಳುಂಡೆ, ಎಳ್ಳುಂಡೆ, ತಂಬಿಟ್ಟು ಮೀಸಲು ಅಡುಗೆಯ ಎಡೆಯಿಟ್ಟು ಅಂಗನೂಲಿನ ವಸ್ತ್ರವ ಮಾಡಿಟ್ಟು ಭಕ್ತಿ ಭಾವದಿ ಹುತ್ತಕೆ ಸುತ್ತಿಬಿ...

ಸತ್ಯುಳ್ಳ ಸರದಾರ ಸುದ್ದುಳ್ಳ ಸುಗಣೀಯ ಮುದ್ಮಾಡಿ ಕದ್ಮಾಡಿ ಬಿಡತೀಯಾ ||ಪಲ್ಲ|| ಆಗ್ಮಾಡಿ ಹೋಗ್ಮಾಡಿ ಕತ್ಲಾಗ ಗಿಣಿಮಾಡಿ ಪತ್ಲಾಗ ಪದುಮಿಟ್ಟು ಓಡ್ತೀಯಾ ಸುದ್ದೋಕಿ ಸೂರ್‍ಮಾಡಿ ಉದ್ದೋಕ ಊರ್‍ಮಾಡಿ ಕೇರ್‍ಮಾಡಿ ಕೆರುಮಾಡಿ ಹಾರ್‍ತೀಯಾ ||೧|| ಪುಗಸೆಟ...

ಭಾವನ ಭಾವನ ಭಾವನ ನಿನ್ನ ಉಳಿವಿನಲಿ ನನ್ನ ಚೇತನ ಚೇತನ ಚೇತನ ಚೇತನ || ಬದುಕೆಂಬ ಬಳ್ಳಿಯಲಿ ಹೂವೆಂಬ ಚೇತನ ಭಾವನ || ಉಣ್ಣುವ ತುತ್ತು ತುತ್ತಿನಲ್ಲಿ ಅನಂತ ಅನಂತ ಚೇತನ ಬಡವ ಬಲ್ಲಿದ ಭೇದ ತೊರೆದ ನಿತ್ಯನೂತನ ನೂತನ ಭಾವನ || ಜೋಗುಳ ಹಾಡುವ ತಾಯಿ ಮಮತ...

ಮರೆಯ ಬೇಡ ಮನುಜ ನೀನು ಮಾನವೀಯತೆ| ಮೆರೆಯಬೇಡ ಮನುಜ ನೀನು ಮದವೇರಿದ ಪ್ರಾಣಿಯಂತೆ| ಮನುಷ್ಯಗಲ್ಲದೆ ಮಾನವತೆಯಮೌಲ್ಯ ಪ್ರಾಣಿಗಳಿಗೆ ಶೋಭೆ ತರುವುದೇ|| ಅಧಿಕಾರ ದರ್ಪ ಯಾರ ಬಳಿ ಶಾಶ್ವತವಾಗಿ ನಿಂತಿದೆ| ಯಾರಬಳಿ ಲಕ್ಷ್ಮಿ ಸದಾ ಇರುವಳೆಂದು ಭ್ರಮಿಸುವೆ|...

ಜೀವ ಇರುವವರೆಗೂ ಸದಾ ಮಾಸದೆ ನೆನಪಲೇ ಇರುವ ಕಾಣಿಕೆ ಒಂದಿತ್ತು ನಾವು ಭೇಟಿಯಾದ ಹೊತ್ತು ಯಾರೂ ಕದಿಯದ ಎಲ್ಲೂ ಕಳೆಯದ ಮತ್ತಾರಿಗೂ ಕಾಣದ ಕಾಣಿಕೆ ಅದು ನನಗೇ ಗೊತ್ತು ಅದು ಮನದಲ್ಲೇ ಇತ್ತು ನಿನಗೆ ಕೊಡಲೆಂದೆ ಇತ್ತು ಕಣ್ಣಲ್ಲಿ ಏನೋ ಕಾತರ ಮನದಲ್ಲಿ ಏನ...

ಅಯ್ಯಯ್ಯ ನನಗಂಡ ಪಡಪೋಸಿ ಬಿಕನೇಸಿ ಹೊಸಗಂಡ ರಸಗಂಡ ಕೈಯತಾರ ||ಪಲ್ಲ|| ಸಪ್ಪಾನ ಸಪ್ಪಾಟಿ ಆ ಗಂಡ ಹಳೆರಗಟಿ ನನಗೆಣಿಯ ನೀ ಠೀಕು ಠುಮುಠುಮುಕಿ ತಾತಾರ ಬಾಬಾರ ಸರದಾರ ಸಾವ್ಕಾರ ನಿನ ಜೀವ ಗೆಳತ್ಯಾನು ಝುಮುಝುಮುಕಿ ||೧|| ಕುಂತುಂಡ್ರ ಪಡಿರೊಟ್ಟಿ ತಿಂತಾ...

ಜಯತು ವಿಶ್ವರೂಪಿಣಿ ಜಯತು ಜಯತು ಭಾರತಿಯೆ ಜಯತು ಜಗದಂಬೆ ಮಾತೆ ಜಯತು ಜಯತು ಶರ್ವಾಣಿಯೇ || ಕಾಳರಾತ್ರಿ ಕದಂಬ ವಾಸಿನಿ ಕಾಮಿನಿ ಕಲ್ಯಾಣಿ ಕಣ್ಮಣೀ ಜಯತು ಜಯತು ಮೂಕಾಂಬಿಕೆ ಜಯತು ಜಯತು ವಿಶ್ವಾಂಬಿಕೆಯೆ || ಜಯತು ರಾಜರಾಜೇಶ್ವರಿ ಜಯತು ಭುವನೇಶ್ವರಿ ...

1...4748495051...93

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...