Home / Kannada

Browsing Tag: Kannada

ವರ್ಷಕ್ಕೊಮ್ಮೆ ಬರುವ ಕುಲಾಯಿಯವರು ಆಗ ತಾನೆ ಮುಂಗಾರು ಮುಗಿದು ಹಸಿಯಾದ ಅಂಗಳದಲ್ಲಿ ಠಾಣೆ ಹೂಡುತ್ತಾರೆ. ಮನೆಯೊಳಗಿಂದ ಹೊರ ಬರುತ್ತವೆ ಕಿಲುಬು ಹಿಡಿದ ತಾಮ್ರದ ಪಾತ್ರೆಗಳು. ನಾವು ನೋಡುತ್ತಿರುವಂತೆಯೆ ಒಬ್ಬ ನೆಲ ಅಗೆದು ಕುಲುಮೆ ತಯಾರಿಸುತ್ತಾನೆ ಇ...

ಅಯ್ಯ ನಾ ಹುಟ್ಟುವಾಗ ಬಟ್ಟಬಯಲೆ ಗಟ್ಟಿಯಾಯಿತ್ತು. ಆ ಬಟ್ಟಬಯಲು ಗಟ್ಟಿಯಾದ ಬಳಿಯಲ್ಲಿ ನಾ ಜನನವಾದೆ. ಜನನವಾದವರಿಗೆ ಮರಣ ತಪ್ಪದು. ಅದೇನು ಕಾರಣವೆಂದರೆ, ಮರವೆಗೆ ಮುಂದು ಮಾಡಿತ್ತು. ಕರ್ಮಕ್ಕೆ ಗುರಿ ಮಾಡಿತ್ತು. ಕತ್ತಲೆಯಲ್ಲಿ ಮುಳುಗಿಸಿತ್ತು. ಕಣ...

ಒಂಽದ ಕಾಲಕ್ಕೆ ದೆವ್ವ- ಭೂತ – ಪ್ರೇತ ಅಂದ್ರ ಅಮವಾಶಿ ಕತ್ತಲು – ಸ್ಮಶಾನ, ಓಣಿಯೊಳಗ ಯಾರರ ಸತ್ತರ ನೆನಪಾಗತ್ತಿತ್ತು ಬಹುಷಃ ಆಗಿನ ವಯಸ್ಸೂ ಹಾಂಗಽಇತ್ತು ಆದರ ಈಗ – ಈ ವರ್ತಮಾನದ ದೆವ್ವಗೋಳು ಜನರ ರಕ್ತಾ ಹೀರಿ ಕುಡಿದು ಕುಕ್ಕ...

ಬಟ್ಟೆಗಳನು ತೊಟ್ಟು ತೊಟ್ಟು ಮೂರ ಬಟ್ಟೆಯಾಯ್ತು ನಿಟ್ಟುದಪ್ಪಿ ಕಳಚಿ ಉಟ್ಟು ಬಟ್ಟ ಬರಿಯದಾಯ್ತು ದೂರದಿಂದ ಬೇರೆ ಬಟ್ಟೆ ಬಣ್ಣ ಬಣ್ಣವಾಗೆ ಅದನು ತೊಟ್ಟೆ ಇದನು ಉಟ್ಟೆ ಹೊಂದಲಿಲ್ಲ ಮೈಗೆ ಅಡವಿಯೊಳಗೆ ನೂರು ಬಟ್ಟೆ ತೆರೆದುಕೊಂಡು ಇರಲು ಸಡಗರದಲಿ ಬಾಚಿ...

ಪ್ರಿಯ ಸಖಿ, ಅವಳು. ದಿನವೂ ಯಾರದಾದರೂ ಮನೆಯ ಜಗುಲಿಯ ಮೇಲೆ ತನ್ನ ದೊಡ್ಡ ಬಟ್ಟೆಯ ಗಂಟನ್ನು ಇಟ್ಟುಕೊಂಡು ಕೂರುತ್ತಾಳೆ. ಸದಾ ಬಾಯಿ ವಟಗುಟ್ಟುತ್ತಲೇ ಇರುತ್ತದೆ ಕೆಲವೊಮ್ಮೆ ಯಾವುದಾದರೂ ಹಾಡನ್ನು ರಾಗವಾಗಿ ಹಾಡುತ್ತಿರುತ್ತಾಳೆ. ಇನ್ನೊಮ್ಮೆ ಶಾಲೆಯಲ...

“ಎಲ್ಲಾ ಮರಕ್ಕು ಮೈ ತುಂಬಾ ಎಲೆ ನಂಗೇ ಯಾಕಿಲ್ಲ? ಮರಕ್ಕೆ ಕಾಯಿ ಹೂವು ಹಣ್ಣು, ನಂಗೂ ಬೇಕಲ್ಲ” “ಮರಕ್ಕೆ ಅಪ್ಪ ಅಮ್ಮ ಇಲ್ಲ ನಿನಗದು ಇದೆಯಲ್ಲ ಅದಕ್ಕೆ ಬೆಚ್ಚನೆ ಮನೆಯೂ ಇಲ್ಲ ಸ್ನೇಹಿತರೇ ಎಲ್ಲ” “ಮರಕ್ಕೆ ದಿನವ...

ಹನ್ನೊಂದು ಸಾವಿರದ ಮುಂದೆ ಹನ್ನೊಂದು ಸಾವಿರಿದ ಮುಂದೆ ಮತ್ತೆ ಹನ್ನೊಂದು ಸಾವಿರ ಅದಕ್ಕಿಂತ ಹೆಚ್ಚು ಸಂಖ್ಯೆ ಸೂರ್ಯರಿದ್ದಾರೆ ಸಾಕೇ? ಸೂರ್ಯ, ಸೂರ್ಯ, ಇವನೊಬ್ಬನೇ ಅಂತ ಇನ್ನೊಂದ್ಸಾರಿ ಹೇಳಿದರೆ ಜೋಕೆ. *****...

ನೆನೆಯದೆ ಇರುವಾಗ ಬರುತ್ತಾನೆ ಕಿಟ್ಟುಣ್ಣಿ (ಅವನ ಆತ್ಮಕ್ಕೆ ಶಾಂತಿಯಿರಲಿ!) ತನ್ನ ಜನರೊಂದಿಗೆ ಸರಂಜಾಮುಗಳೊಂದಿಗೆ, ಬಂದು ಶಾಲೆಯಂಗಳದಲ್ಲಿ ಹೂಡುತ್ತಾನೆ ಗೂಟ. ಡೇರೆಯಿಲ್ಲದ ಸರ್ಕಸ್ಸು, ಕಿಟ್ಟುಣ್ಣಿ ಸರ್ಕಸ್ಸು ನಿಜವಾದ ಸರ್ಕಸ್ಸಿಗಿಂತ ಸ್ವಲ್ಪ ಕೆ...

ಅಯ್ಯ ಅದೇನು ಕಾರಣವೆಂದರೆ, ಕಂಗಳ ಕತ್ತಲೆಯನೆ ಹರಿಸಿದಿರಿ. ಮನದ ಕಾಳಿಕೆಯನೆ ಹಿಂಗಿಸಿದಿರಿ. ಮಾತಿನ ಮೊದಲನೆ ಹರಿದಿರಿ. ಜ್ಯೋತಿಯ ಬೆಳಗ ತೋರಿದಿರಿ. ಮಾತು ಮಥನವ ಕೆಡಿಸಿದಿರಿ. ವ್ಯಾಕುಳವನೆ ಬಿಡಿಸಿ ವಿವೇಕಿಯ ಮಾಡಿ ನಿಮ್ಮ ಪಾದದಲ್ಲಿ ಏಕವಾದ ಕಾರಣದ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...