೧ ಕೂಳಿಲ್ಲದಿಹ ನನಗೆ ಕಲ್ಲಿನಾರ್ಚನೆಯಂತೆ! ಸೆರೆಮನೆಯ ಸೋಬತಿಗೆ ಸೂರ್ಯ ಜಪ ತಪವಂತೆ! ೨ ನಾನೊಲ್ಲದಿಹ ನಾರಿ ನನಗಾಗಿ ಇಹಳಂತೆ! ಪಿತನ ನುಡಿ ಮೀರಿ ನಡೆಯೆ ನರಕವಂತೆ! ೩ ಹೆಣ್ಣಿನಾ ಹಣೆಬರಹ ಪುರುಷ ಬರೆದುದೆ ಅಂತೆ! ಇಲ್ಲದೊಡೆ ವಿರಹ ಅವಳ ಜೀವನಕಂತೆ! ೪...
ಬಾಪು ನೀ ಮಹಾನ್. ಕೃಷಿಯಲ್ಲಿ ನಿನ್ನ ಪ್ರೀತಿಯ ನಿತ್ಯ ಸತ್ಯಗಳು ಹಸಿರು. ಅಹಿಂಸೆಯು ಬಯಲ ಗಾಳಿಯಲಿ ತೇಲಿ ಒಂದು ಸರಳ ಮಾರ್ಗದರ್ಶನ ನಿನ್ನಿಂದ ಜಗಕೆ. ಬದುಕಿನ ಎಲ್ಲಾ ಜಂಝಡದ ಮಧ್ಯೆ ನೀ ಹೇಳಿದ ಪ್ರಾರ್ಥನೆಯ ಆಳ ಎದೆ ಎದೆಗೂ ಇಳಿದು ಸಂಧ್ಯಾರಾಗದ ಸಂಭ್...
ಲಕ್ಷ ಜನುಮಗಳ ಗಳದಾಟಿ ಬಂದೇವು ಈ ಮನುಜ ಶರೀರ ನಾವು ಪಡೆದೇವು ಈಗಲೂ ಪೂರ್‍ವ ಜನ್ಮಗಳ ಅಭ್ಯಾಸವೆ ನಿದ್ರೆ ಆಹಾರ ಮೈಥುನದ ದುರಭ್ಯಾಸವೆ! ಕ್ಷಣ ಸುಖದ ಲಾಲಸೆ ನಿನಗೇಕೆ ಬಂತು ನೀನು ಸಾಕ್ಷಾತ ಪರಮಾತ್ಮನ ತಂತು ಗಗನದೆತ್ತರದ ಯೋಜನೆಗಳ ಸೃಷ್ಟಿಸಿ ಈ ಬಾಳೆ...
ಶಾಬಯನು ಮರಳೆ ಬರುವ ನಿರೀಕ್ಷಣೆಯಿಂದೆ ಶಾದುಕೊಂಡಿರುವ ಕೊತ್ವಾಲನು ದಾರಿಯಲ್ಲಿ ಸಿಕ್ಕಿ ಉಭಯ ಮೂರ್ತಿಗಳು ಹಾಸ್ಯವದನರಾಗಿ ಮೆಲ್ಲಗೆ ಮಾತನಾಡುತ್ತಾ ನಡೆದರು. ಶಾಬಯ್ಯನ ಮನೆಯಲ್ಲಿ ಒಂದೆರಡು ಘಳಿಗೆ ಪರಿಯಂತರ ಇದ್ದು ಕೊತ್ವಾಲನು ತನ್ನ ಮನೆಗೆ ಬಂದ ಬಳಿ...
ಓ ಸ್ವಪ್ನಾಗ್ನಿಸೃಷ್ಟಾ ನೌಕಾರೂಢಾ ಗೂಢಾ ಯಾರವನೋ ಚಿರತರುಣಾ ಬಂದಾ ಹುಬ್ಬೋ, ಅನಂಗನು ಚಿತೆಯಲಿ ಮಣಿಸಿದ ಕಬ್ಬೋ ಆಹಾ ಈ ಕಾಯಾ ಹಿರಣ್ಯಾಗರ್ಭಚ್ಛಾಯಾ – ಆಕೃತಿಬಂಧಾ ಮೌನಾ ಕರಗಿಸಿ ಎರೆದಾ, ಸೆಳೆಮಿಂಚಿನ ತೆರದಾ, ಸವಿನುಡಿ ಛಂದಾ- `ಆ ಹೃದಯ ಜ್ವ...
೧ ಸುಮ್ಮಗಿರಬೇಡ ನನ್ನೆದೆಯ ಹಾಡೇ… ಸುಮ್ಮಗಿರಬೇಡ ನನ್ನೆದೆಯ ಹಾಡೇ! ಗುಡುಗಿನಬ್ಬರದಿ ಮೊರೆ, ವೀಣೆ ನುಡಿಸಿಲ್ಲದಿರೆ… ಸತ್ತವರ ಮನೆಯಂತಿದೇನು ಪಾಡೆ ? ಎತ್ತು ದನಿ, ಇನ್ನೊಂದನೇನು ಬೇಡೆ. ೨ ನೀನು ಗುಡುಗುತಲಿರ್ದ್ದರೆದೆಯ ಹಾಡೇ…...
ಸಂಸಾರವೆಂಬ ಸಾಗರದಲ್ಲಿ ಸಮಾಧಾನಿಯಾಗಿರಬೇಕು| ಸಾಗರದಲೆಯ ಎದುರಿಸಿ ದೋಣಿ ಮುಂದೆ ಸಾಗುವ ಹಾಗೆ ಸಾಗುತ್ತಿರಬೇಕು|| ಸಂಸಾರದಾಳವ ನೆನೆದು ಭಯವನು ಬೀಳದೆ ಸಂಯಮದೊಳಿರಬೇಕು| ಸಂಸಾರ ತೀರವ ಸೇರುವ ತವಕದಿ ಸದಾ ಕುತೂಹಲದಿಂದಿರಬೇಕು|| ಕೈಲಾಗುವಷ್ಟು, ಹಾಸಿ...
ಕಾಡುತ್ತಿವೆ ರಾತ್ರಿಗಳು ಹಗಲು ಕಟ್ಟಿದ ಇರುಳ ಕೋಟೆ ಒಳಗೆ ಒಂದೇ ಸಮ ಕತ್ತಿವರಸೆ ಪ್ರಾಣ ಹೋಗದ ಸಾವುಗಳು ಸದ್ದು ಮಾಡದ ನೋವುಗಳ. ಕತ್ತಲ ಸೋನೆ ಚರಿತ್ರೆಯಲ್ಲಿ ತೋಯ್ದ ಮೆದುಳ ನೆಲದಲ್ಲಿ ಮನಸ್ಸಿನ ಬೀಜ ಬಿರಿದು ತಿಕ್ಕಾಟವಾಗುತ್ತಲೇ ತೆಕ್ಕೆಯಾಗುವ ರೀತ...
ಅದೇನೋ ಮುಂಬಯಿ ಎಂದೊಡನೇ ವ್ಯಾಸರಾಯಬಲ್ಲಾಳರು ನೆನಪಾಗುತ್ತಾರೆ ಅಥವಾ ವ್ಯಾಸರಾಯ ಬಲ್ಲಾಳರೆಂದೊಡನೇ ಮುಂಬಯಿ ನೆನಪಾಗುತ್ತದೆ. ಅಂದರೆ ಅವರೆಡರ ಅವಿನಾಭಾವ ಸಂಬಂಧವನ್ನು ನಾವು ಹೇಳಿದಂತಾಯಿತು. ಉದ್ಯೋಗವನ್ನರಸಿ ತಮ್ಮ ಯೌವನದಲ್ಲಿಯೇ ಮುಂಬಯಿ ಸೇರಿದ ವ್...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...







