ಕತ್ತಲೆಯ ಕಿಡಿಗೇಡಿತನ ಕಂಡು ಋಭು ನೊಂದು ದೇವಗಾನದಿ ಬೆಳಕ ತಂದನೇನು? ಬೆಳಕೆ ದಾರಿಯತೋರು ಎಂಬ ಒಳದನಿ ಕೇಳಿ ಸೂರ್ಯನಾರಾಯಣನು ಬಂದನೇನು ? ತಾಮಸದ ಪಾಚಿಯನು ಎತ್ತಿ ಹಾಕಿದ ಹಾಗೆ ಹಿಮಕೆ ಮುತ್ತಿದ ತಿಮಿರರಾಸಿಯನ್ನು ಮಾಯಮಾಡಿದ ಅಬ್ಬ! ಆದಿತ್ಯನವಗಾವು-...
ತುಂಬಿ ಬಂದಿದೆ ಹೃದಯವಿಂದು ನಿನ್ನ ನೆನಪೇ ತಂದಿದೆ | ಅಲೆಗಳಿಲ್ಲದೆ ಪ್ರೇಮಗಂಗೆ ಶಾಂತವಾಗಿ ಹರಿದಿದೆ || ಪ || ಹುಣ್ಣಿಮೆಯ ಈ ಶುಭ ರಾತ್ರಿ ಹಗಲಿನಂತೆ ಬೆಳಗಿದೆ | ಧರೆಗೆ ಇಳಿದಾ ಚಂದ್ರ ಕಾಂತಿ ಹಾಲಿನಂತೆ ಹರಡಿದೆ || ೨ || ಜೋಡಿ ಹಂಸದ ಪುಟ್ಟ ದೋಣ...
ಒಂದು ಸಿದ್ಧಾಂತದ ನ್ಯೂನ್ಯತೆಗಳನ್ನ ಅರಿಯಲು ಅದರ ಪರವಾಗಿ ನೋಡದೆ, ವಿರುದ್ಧವಾಗಿ ಮೊದಲು ನೋಡಬೇಕು ಆಗಲೇ ಸತ್ಯ ಆಚೆ ಬರುವುದು. *****...
ಘಾತಕ್ಕೊಳಗಾಗಿ ಪತರುಗುಟ್ಟುತ್ತಿದ್ದ ನನ್ನ ನಿರಾಕಾರ ಮಾನಕ್ಕೆ ಸೊಕ್ಕೆಂಬುದು ನೀವಿಟ್ಟ ಹೆಸರು. ಎತ್ತೆತ್ತಲಿಂದಲೂ ನೀವೆಷ್ಟೇ ಬೆಂಕಿ ಇಟ್ಟರೂ ‘ಅದು’ ದಹಿಸಿ ಹೋಗದ್ದಕ್ಕೆ ಕ್ಷಮೆ ಇರಲಿ ನನಗೆ. ಗವ್ವೆನುವ ಕತ್ತಲ ಗವಿಯೊಳಗೆ ನನಗೆಂದೇ ಹಚ್ಚಿಟ್ಟ ಆ ದ...
ಕಾವ್ಯ ಪ್ರಕಾರದ ಬಗ್ಗೆ ಆಧುನಿಕ ವಿಮರ್ಶಾಪ್ರಜ್ಞೆಯನ್ನು ಬೆಳೆಸಿದವರಲ್ಲಿ ಹತ್ತೊಂಬತ್ತನೆಯ ಶತಮಾನದ ಇಂಗ್ಲಿಷ್ ಲೇಖಕ ಮ್ಯಾಥ್ಯೂ ಅರ್ನಾಲ್ಡ್ ಒಬ್ಬ ಪ್ರಮುಖ ವ್ಯಕ್ತಿ. ಮೂವತ್ತೈದು ವರ್ಷಗಳ ಕಾಲ ಶಾಲಾ ಇನ್‌ಸ್ಪೆಕ್ಟರನಾಗಿ, ಹತ್ತು ವರ್ಷಗಳ ಕಾಲ ಆಕ್...
ಶಿವ ಕೋಲೆನ್ನ ಗಂಗಿಗೆ ಶಿವ ಕೋಲೆನ್ನ ಗೌರಿಗೇ ಶಿವ ಕೋಲೋ ಕಬ್ಬಿಣದ ಬಸವಗೆಯ್ಯಾ ಕೋಲೇ || ೧ || ವಂದು ಮುದಿನಾ ಮರದಲ್ಲಿ ಬಂದೀತು ಸುಮಗಳು ವಂದು ಮೊಕಿನಾ ಮಾರಾಟ ಮಾರಾಟ ಕೋಲೇ || ೨ || ಶಿವ ಕೋಲೇನ್ನ ಗಂಗಿಗೇ ಶಿವ ಕೋಲೇನ್ನ ಗವರಿಗೆ ವಳ್ಳೆ ಬೆನ್ನಂತ...
ಬೀಜ ವೃಕ್ಷ ನ್ಯಾಯವದಂತಿರಲಿ ಅನ್ಯಾಯವದಾವ ಬೀಜಕುಂ ವೃಕ್ಷಕುಂ ಆಗದಿರಲಿ, ರಾಶಿ ಬೀಜವಿದ್ಯಾಕೆನುತ ಕೋಜ ಬೀಜ ಬೆಳೆಸುವಾಧುನಿಕ ಕೃಷಿ ಬಾಳದಿರಲಿ ಯೋಜನೆಗಳಂತಿಮದಿ ಕೃಷಿ ಹೆಸರಿನೊಳಾ ಪೂಜ್ಯ ಬದುಕಿನೊಸರನಾರಿಸದಿರಲಿ – ವಿಜ್ಞಾನೇಶ್ವರಾ *****...
ಮೇಷ್ಟ್ರು: “ಅತಿಯಾದ ಜನ ದಟ್ಟಣೆ ಇರುವ ಪ್ರದೇಶಕ್ಕೊಂದು ಉದಾಹರಣೆ ಕೊಡು..” ಶೀಲಾ: “ಬಿ.ಟಿ.ಎಸ್. ಬಸ್ಸು” *****...
ಎಲ್ಲೋ ನೋಡಿದ್ದೇನೆ ಇವರನ್ನು ಕೇಳಿದ್ದೇನೆ ಮಾತುಗಳನ್ನು ಯಾರಿವರು? ಅಟ್ಟದಿಂದ ಬೆಟ್ಟಕ್ಕೆ ಏರಿಸಿ ಧೊಪ್ಪನೆ ಕೆಡುವವರು ಕಂಬಿ ಇಲ್ಲದೆ ರೈಲು ಬಿಡುವ ಅತಿ ಮಾನುಷರು. ಮಾತಿನಲ್ಲೇ ಮನೆ ಕಟ್ಟಿ ಮಾತಿನಲ್ಲೇ ಹೊಟ್ಟೆ ಬಟ್ಟೆ ಮಾತಿನಲ್ಲೇ ಸ್ವರ್ಗ ತೋರಿಸು...
ಆಳುತನದ ಮಾತನೇರಿಸಿ ನುಡಿದಡೆ ಆಗಳೆ ಕಟ್ಟಿದೆನು ಗಂಡುಗಚ್ಚೆಯ ತಿಗುರನೇರಿಸಿ ತಿಲಕವನಿಟ್ಟು ಕೈದುವ ಕೊಂಡು ಕಳನೇರಿದ ಬಳಿಕ ಕಟ್ಟಿದ ನಿರಿ ಸಡಿಲಿಸಿದಡೆ ಇನ್ನು ನಿಮ್ಮಾಣೆ ಕಾಣಾ ಚೆನ್ನಮಲ್ಲಿಕಾರ್ಜುನಾ [ತಿಗುರನೇರಿಸಿ-ಪರಿಮಳ ಲೇಪಿಸಿ, ಕೈದುವ-ಆಯುಧವ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...







