ನನ್ನ ಉಸಿರು ಹರಿದಾಡುತಿಹುದು ಇಗೊ ಸೂಕ್ಷ್ಮ ಛಂದದಲ್ಲಿ; ನನ್ನ ಅವಯವದಿ ಬೆಳೆಯುತಿಹುದು ಭಗವಂತ ಶಕ್ತಿ-ವಲ್ಲಿ: ಆನಂತ್ಯವನ್ನು ನಾ ಕುಡಿದೆ ಎತ್ತಿಯಾ ಅಸುರ-ಸುರಾ-ಪಾತ್ರೆ ಕಾಲಲೀಲೆಯದು ನನ್ನ ನಾಟಕವು ನನ್ನ ಸ್ವಪ್ನಯಾತ್ರೆ ಈಗ ನನ್ನ ಜೀವಾಣುಗಣವು ಪ್...
ಮಳೆಗಾಲದ ನೀರಹೊಳೆಯನ್ನು ದಾಟಿಸಲು ಅಂಬಿಗರಣ್ಣ ಅರಿತವನಾದರೆ, ಅಳಿಗಾಲದ ಬಾಳಹೊಳೆಯನ್ನು ದಾಂಟಿಸಲು ಬಲ್ಲಿದರಾರು? ನಡುಹೊಳೆಯ ನಡುವಿನೊಳು ತೊಡಕಿ ಮಿಡುಕುತಲಿಹೆನು, ತಡೆಯದಲೆ ತೋರು ನೀ ತಡಿಯ ತಲುಪುವ ಹದನು ! ೧ ‘ನನ್ನ ನುಡಿ ಮನ್ನಿಸದೆ ಬೀಳದಿರು ! ...
ನಾನು, ನನ್ನ ಇರುವಿಕೆಗೆ ನನ್ನ ದಿನದ ಭತ್ಯಕ್ಕೆ ನ್ಯಾಯ ಒದಗಿಸುತಿರುವೆನೇ?|| ಇಷ್ಟೆಲ್ಲಾ ಗಾಳಿ ನೀರು ಭೂಮಿ ಬೆಳಕನು ಉಚಿತವಾಗಿ ಪಡೆಯುತ್ತಿರುವಾಗ|| ಹೆತ್ತತಂದೆ ತಾಯಿಯರ ಕರ್‍ತವ್ಯ ಮಾಡುತಿರುವೆನೇ? | ನನ್ನ ಬೆಳೆಸಿದ ಗುರುಹಿರಿಯರು ಈ ಸಮಾಜದ ಋಣವ...
ಬಿಳಿಯ ರಾತ್ರಿಗಳಲ್ಲಿ ಕರಿಯ ಮಿಂಚಾದವನು ಹಗಲು ಹರಿದಾಡುತ್ತ ಕೆಂಪು ಹೆಗಲಾದವನು ಬಿಳಿ ಕಸದ ಬಂಡಿಯನು ಹೊರಗೆಳೆಯುತ್ತ ಹೋಗಿ ಜಾರ ಜೇಲಿನ ಒಳಗೆ ಒಂಟಿ ಬಯಲಾದವನು. ಶ್ವೇತ ಸೆರೆಯಲ್ಲಿ ಸೂರ್‍ಯ ಕುರುಡಲ್ಲಿ ಬಿಳಿಯ ಬತ್ತಿಯ ಹೊಸೆದ ಕಪ್ಪು ಕಿರಣ ಮಗ್ಗಿ ...
Henrik Johan Ibsenನ ಸಮಕಾಲೀನರ ಪ್ರಕಾರ “The Ghosts” [ದಿ ಘೋಸ್ಟ] ಇಬಸೆನ್‌ನ ಗಮನಾರ್ಹ ಕೃತಿ. ಯಾಕೆಂದರೆ ೧೯ನೇ ಶತಮಾನದ ಸಾಂಪ್ರದಾಯಿಕ, ಸಮಾಜ ಒಪ್ಪದಿರುವ, ತಿರಸ್ಕರಿಸುವ ಗುಹ್ಯರೋಗವೊಂದರ ಸುತ್ತಹಣೆದ ನಾಟಕವನ್ನು ಬರೆದು ಧೈರ...
ಮೂರೊಂದ್ಲೇ ಮೂರು ಮೇಲೇಳು ಗಂಟೆ ಆರು ಮೂರೆರಡ್ಲೇ ಆರು ಜಳಕದ ಮನೆಗೆ ಹಾರು ಮೂರ್ ಮೂರ್ಲೆ ಒಂಭತ್ತು ತಿಂಡಿ ತಿನ್ನಲಿಕ್ಕೆ ಹತ್ತು ಮೂರ್ ನಾಕ್ಲೆ ಹನ್ನೆರಡು ಹಟವನು ಬಿಟ್ಟುಬಿಡು ಮೂರೈದ್ಲೆ ಹದಿನೈದು ರೆಡಿಮಾಡುವರು ಬೈದು ಮೂರಾರ್ಲೆ ಹದಿನೆಂಟು ಪುಸ್ತ...
ಜಗದ ಮೌನವನೊಡೆದು ಗಗನ ಗರ್ಭವ ಸೀಳಿ ಜಲದ ಶಾಂತಿಯ ಕಡೆದು ಯುಗಯುಗದ ಬಗೆ ಕನಲಿ ಉರಿವ ಬೆಂಕಿಯ ಜ್ವಾಲೆ ಹರಿವ ಗಾಳಿಯನಾಳಿ ಮಾನವರ ಜೀವನವ ಬಲಿಗೊಳ್ಳುತಿದಿರಾಳಿ ಸತ್ಯ ಧರ್ಮದ ಹೆಸರ ಬಗೆಯೆತ್ತಿ ಕರೆಯುತಿದೆ ಲೋಕವೇ ಬರೆದಿಟ್ಟ ಶಾಸನವ ಮುರಿಯುತಿದೆ ಕ್ರಾ...
ಕಣ್ಣು ಮುಚ್ಚಿ ದೀರ್ಘ ಪ್ರಾರ್ಥನೆ ಸಲ್ಲಿಸಿ, ತಲೆ ತುಂಬ ಎಳೆದ ಮುಸುಕಿನಡಿಯಲ್ಲಿ ಕಣ್ಣ ಮುತ್ತುಗಳ ಬಳಬಳನೆ ಉದುರಿಸಿ, ಕರುಳಿಗೆ ಹೊತ್ತಿಕೊಂಡ ಬೆಂಕಿಯ ಜ್ವಾಲೆ- ಹೊರ ಚಾಚದಂತೆ ನಂದಿಸಿ ಮೇಲೇಳುವ ಹೊಗೆಯ ನೋಡುತ್ತ ನಿಟ್ಟುಸಿರು ಬಿಡುತ್ತ ಗೆದ್ದು ಬರ...
ಗುರಿಯಿಟ್ಟು ಬಿಟ್ಟ ಬಾಣದರಿವಿರದೆ ಹಕ್ಕಿ ಹಾರುವುದು ರೆಕ್ಕೆ ಬಿಚ್ಚಿ ನೊರೆ ಮುಗಿಲ ಹಾದು ಸೀಮಾತೀತ ನಭದ ವಿಸ್ತಾರವನ್ನೆ ನೆಚ್ಚಿ ಬಿಟ್ಟ ಕ್ಷಣದಿಂದ ಬಿಡುವ ಕ್ಷಣ ತನಕ ಮಧ್ಯಂತರ ಇರುವ ಬದುಕು ಕ್ಷಣವೊ ಯುಗವೊ ಅದು ಅಷ್ಟು ಸಾಕೊ ಇನ್ನಷ್ಟು ಬೇಕೊ ಯಾರ...
ಮೂಲತಃ ನಮ್ಮ ಹಿರಿಯರು ಮಣ್ಣಿನ ಮಡಿಕೆ ಕುಡಿಕೆಗಳಲ್ಲಿ ಆಹಾರವನ್ನು ಬೇಯಿಸಿ ಊಟಮಾಡುತ್ತಿದ್ದರು. ನಂತರ ಕಂಚು, ಹಿತ್ತಾಳೆ ಪಾತ್ರೆಗಳಲ್ಲಿ (ಕಲಾಯಿಮಾಡಿದ) ಅಡುಗೆ ಮಾಡಲಾರಂಭಿಸಿದರು. (ಇಂದಿಗೂ ಹಿರಿಯರ ಮನೆಗಳಲ್ಲಿ ಒಂದೊಂದು ಈ ವಸ್ತುಗಳಿವೆ) ಇದಾದ ನ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...







