ಮೊಟ್ಮೊದಲು

ನನಗೂನೆ ಯೆಂಡಕ್ಕು ಬಲಬಲೆ ದೋಸ್ತಿ. ಕುಡದ್ ಬುಟ್ಟಾಗ್ ಆಡೋದು ನಂಗ್ ಪೂರ ಜಾಸ್ತಿ. ನಂಗ್ ಎಸರು ಯೋಳ್ತಾರೆ-ರ್ರರ್ರರ್ರರ್ರರ್ರತ್ನ. ನಾನ್ ಆಡೋ ಪದಗೋಳು ಯೆಂಡದ್ ಪ್ರಯತ್ನ. ೧ ಮಾಬಾರ್‍ತ ಬರೆಯಾಕೆ ಯಾಸಂಗ್ ಇನಾಯ್ಕ ಸಿಕ್ದಂಗೆ ನಂಗ್...

ಮೋಡ

ಜಗದ ಜೀವವನುಂಡು ಹಲವು ಬಗಗಳ ಕಂಡು ನಗುತ ನೆಗೆದಾಡುತ್ತ ಹಗಲಿರುಳು ಹಾರಾಡಿ ತೆಗೆದು ತೀರದ ವಾರಿ ಹೊಗೆಯಾಗಿ ಹೂವಾಗಿ ಮುಗಿಸೆ ನಭಯಾತ್ರೆಗಳ ಹಗುರಾಗಿ ನಡೆದಿರುವೆ. ಬಿಸಿಲಿಂಗೆ ಮೈಯೊಡ್ಡಿ ಬಿಳಿ ವಸನಮಂ ಹೊದೆದು ಹಸಿತ ವದನದಿ...

ಹೋರಾಡುತ್ತೇನೆ ಶಬ್ದಗಳಿಂದ

ವ್ಯವಸ್ಥೆಯ ಒಳಗಿನಿಂದ ಒಂದೊಂದೇ ಪ್ರಶ್ನೆಗಳೇಳುತ್ತವೆ ರಾಜಕೀಯದ ಬಣ್ಣ ಬಯಲಾಗುತ್ತದೆ ಶಸ್ತ್ರಾಸ್ತ್ರ ಕೆಳಗಿಟ್ಟ ಅವರು ಶಾಂತಿ ಮಂತ್ರಗಳ ಜಪಿಸುತ್ತಿದ್ದಾರೆ ನೋಡು! ಪಾರ್ಲಿಮೆಂಟರಿ ಪ್ರಜಾಪ್ರಭುತ್ವದಲಿ ಕೆಂಪು ಬಣ್ಣಕ್ಕೆ ಅನೇಕ ಛಾಯೆಗಳಿವೆ ತಾನೇ? ಶಾಂತಿ ಒಪ್ಪಂದ ಆಗಿದೆ ಅವರೊಂದಿಗೆ...

ಯಾವ ಕ್ಷಣದಲಿ ಯಾರೋ

ಯಾವ ಕ್ಷಣದಲಿ ಯಾರೋ ಯಾರೂ ಅರಿಯದ ಊರಲಿ ಕರೆದು ಮಾತಾಡಿಸಿದವರು ಯಾರೋ ಬಾಯಾರಿದ ವೇಳೆಯಲಿ ನೀರೂಡಿಸಿದವರು ಯಾರೋ ಯಾವ ಕ್ಷಣದಲಿ ಯಾರೋ ನಡೆ ತಪ್ಪಿ ಬಿದ್ದಾಗ ಹಿಡಿದೆತ್ತಿದವರು ಯಾರೋ ಬೇಸರದಿ ಅಲೆಯುತಿದ್ದಾಗ ಕೆಲಸ ನೀಡಿದವರು...

ಮಳೆಯ ಹಾಡು

ಮತ್ತೆ ಮಳೆ ಹೊಯ್ಯುತಿದೆ ಆದರೆ ಎಲ್ಲಾ ನೆನಪಾಗುವುದಿಲ್ಲ. ಮತ್ತೆ ಮತ್ತೆ ಮಳೆ ಬರಬೇಕು ಅಂದರೇ ಈ ನೆಲ ಹಸಿರಾಗುವುದು ಹಸಿರಾದೊಡೆ ಚಿಗುರಿತೆಂದು ನಾವು ಭ್ರಮಿಸುವುದು, ಅದು ಜ್ವಾಲಾಮುಖಿಯ ಮೇಲಿನ ಹಸಿರೆಂದು ಈ ಇಳೆ ಅದೆಷ್ಟು...

ಪ್ರಾರ್‍ಥನೆ

ಬಂಗಾರ ನೀರಿನಲಿ ಬೆಳಗುತಿದೆ ಬೆಳಗು ಮಂಜಿನ ತೆರೆಯಲಿ ಈ ಹೂವು ಆ ಹಕ್ಕಿ ನಲಿಯುತಿರೆ ನಯನ ಮನೋಹರ ವನಸಿರಿ ದುಂಬಿಗೆ ಮಧು ಮಹೋತ್ಸವ ಕನ್ನಡ ತೆನೆ ಹೊಯ್ದಾಡುತಿರೆ ಕನ್ನಡ ಕಂಪ ಸೂಸುವಂಗೆ ರಾಮನಾದರ್ಶ ಗಾಂಧೀಸತ್ಯ...

ಏ ಕ್ರೂರಿ ಹೆಣ್ಣೆ ತುಸು ಕಿವಿಗೊಡು ವಿವೇಕಕ್ಕೆ

ಏ ಕ್ರೂರಿ ಹೆಣ್ಣೆ ತುಸು ಕಿವಿಗೊಡು ವಿವೇಕಕ್ಕೆ, ತುಟಿ ಬಿಗಿಹಿಡಿದ ನನ್ನ ತಾಳ್ಮೆಯ ತಿರಸ್ಕರಿಸಿ ಸಿಡಿಸದಿರು, ಇಲ್ಲವೇ ವ್ಯಥೆ ನನ್ನ ನಾಲಿಗೆಗೆ ನುಡಿಯ ಕೊಡುವುದು; ಅವೋ ನಿನ್ನ ಕರುಣೆಯ ಬಯಸಿ ನಾ ಪಡುವ ಯಾತನೆಯನೆಲ್ಲ...

ಸ್ವಚ್ಛ ಭಾರತ್

ತಲೆದೂಗಿದೆವು ಮೋದಿಜಿ ನಿಮ್ಮ ಸ್ವಚ್ಛಭಾರತ ಅಭಿಯಾನಕೆ ತಲೆದೂಗಿದೆವು ಮೋದಿಜಿ ನಿಮ್ಮ ಸ್ವಚ್ಛಭಾರತ ಅಭಿಮಾನಕೆ ಕೈಜೋಡಿಸಿದೆವು ಪ್ರಮಾಣವಚನ ಮಾಡಿಸಿದಿರಿ ಬೀದಿಗಿಳಿಸಿದಿರಿ ಆದ ಸಂತೋಷ ಅಷ್ಟಿಷ್ಟಲ್ಲ ಆರೋಗ್ಯವೇ ಭಾಗ್ಯ: ಸರ್ವಂ ಸುಂದರಂ ಅಲ್ಲವೆ ಮತ್ತೆ ಕಿವಿಗಳು ಕೇಳಿಯೇ...

ಒಂದು ಪ್ರಲಾಪ

ನನ್ನ ಕಹಿ ಅನುಭವಗಳು ದ್ರಾಕ್ಷಿ ರಸದ ಹುಳಿಯಂತೆ ಲೊಳೆಗುಟ್ಟಿದಾಗ ನೀನು ಮೆಲ್ಲನೆ ಇಬ್ಬನಿ ಹನಿ ಬೆರೆಸಿ, ತುಸು ಕಬ್ಬುರಸ ಸೇರಿಸಿ ತಿಳಿಯಾದ ಪಾನಕ ಮಾಡಿದ ಇರುಳು. ಮರುದಿವಸ ಬಾಲಸೂರ್ಯನ ಹೊಂಗಿರಣಗಳು ಸೋಕಿ ಆಕಾಶದ ತುಂಬೆಲ್ಲಾ...