ಹಿತ ಅಹಿತ ಹೀಗೆ ನನಗುಂಟು ಒಲವೆರಡು

ಹಿತ ಅಹಿತ ಹೀಗೆ ನನಗುಂಟು ಒಲವೆರಡು, ಪ್ರೇರಿಸುವುವೆರಡೂ ಮರುಳಂತೆ ಈಗಲೂ ; ಎರಡರಲಿ ಒಂದು ದೇವತೆ, ಚೆಂದ, ಗಂಡು, ಮತ್ತೊಂದು ಹೆಣ್ಣು ಕೆಟ್ಟುದು, ಬಣ್ಣ ಕಂದು. ಕೇಡಿ ಹೆಣ್ಣೋ ನನ್ನ ನರಕಕೆಳೆಯಲು ಬಯಸಿ ನನ್ನ...

ನಿರಾಳ

ಉತ್ತಿದ ಮಣ್ಣು ಮೈ ತುಂಬಾ ಕೆಂಗಣ್ಣಾಗಿ ಎದೆ ತುಂಬ ಬಿಸಿ ಉಸಿರು ಹೆಜ್ಜೆ ಇಟ್ಟಲ್ಲೆಲ್ಲ ಧೂಳು ಮತ್ತೆ ಮತ್ತೆ ಮುಖಕೆ ರಾಚಿ ಮಳೆಗಾಗಿ ಹಪಹಪಿಸಿ ಅಳುವ ದೈನ್ಯತೆ. ಕಾಲಿಟ್ಟಲ್ಲೆಲ್ಲ ಒಣಗರಿಕೆ ಬೆಟ್ಟದೊಳಗಿನ ಬೋಳು ಗಿಡಮರ...

ಗಿಳಿವಿಂಡು

ನನ್ನವೀ ನುಡಿಗಳಿರ! ಕಾಲದಲೆಗಳಲಿ ನಿಮ್ಮನುರಿಹಣತೆಯಂತಿದೊ ತೇಲಬಿಡುವೆ, ಅನುಗೊಳಲಿ ಜಗದುಸಿರು ನಿಮಗೆದುರುಗೊಳಲಿ, ಆಳ್ವಿನಂ ಬಾಳ್ವುದೆಂಬುದೆ ನಿಮ್ಮ ಗೊಡವೆ. ತನ್ನ ಮರಿಗಳೊಳೊಮ್ಮೆ ಕಟ್ಟೆರಕೆ ಮೂಡಿ ದನಿತುಮಂ ಪೊರಮಡಿಸಿದುಲಿನಕ್ಕಿಯಮ್ಮ ಸಂಜೆಯೊಳವಂ ಗೂಡುಗೊಳಿಪಂತೆ ಕೂಡಿ ಸಿಡುವೆನಾನೀ ಹೊತ್ತಗೆಯೊಳೆನ್ನ ನಿಮ್ಮ. ನನ್ನವೆಂದೆನೆ...

ಗಾಳಿಯಲಿ ತೇಲಿದ ನೆರಳು

ಕೆಂಪು ನಿಯಾನ್ ಲೈಟಿನ ಬೆಳಕಲ್ಲಿ ಕರೀ ರಸ್ತೆ ಮೈ ಕಾಯಿಸಿಕೊಂಡು ಉದ್ದುದ್ದ ಹರಿದ ರಾತ್ರಿ, ರಸ್ತೆಯ ತುದಿಯ ಮರದ ನೆರಳು ದೂರದಿಂದ ಭೀಮಾಕೃತಿ. ಮುರಿದ ಒಣಗಿದ ಬಾಳೆಯಲೆಯಂತೆ, ಅಲ್ಲಲ್ಲಿ ಚದುರಿದ ಕಸಗಳು ಮೆಲ್ಲಗೆ ಬೀಸುವ...

ಅನಂತ ಅನಂತವಾಗಿರು

ಅನಂತ ಅನಂತವಾಗಿರು ಮನವೆ ತಾಮಸ ಬೇಡ ನಿಸ್ವಾರ್‍ಥದ ಹಣತೆಯ ಹಚ್ಚು ನೀ ಓ ಮನವೆ ಕನ್ನಡ ಕನ್ನಡ ಎಂದುಲಿಯ ನೀ ಮನವೆ ದುಡಿದ ಮನಕೆ ತಣಿವ ಜಲವೆ ತಲ್ಲಣವೇಕೆ ನಿನಗೆ ಮಣಿವೆ ಧರೆಗೆ ಎಂದೆಂದಿಗೂ...

ಸದಾಶಿವಗೆ

ಶ್ರೀಗುರುವಿಗಾಗಿ ತನುಧಾರಿಯಾಗಿ ಬಂದಂಥ ಸದಾಶಿವಗೆ ಅನಂತಾನಂತ ನತಿಯ ಉಪಕೃತಿಯ ಒಪ್ಪಿಸುವೆವು ಇವಗೆ. ಎಷ್ಟು ದುಡಿದೆ ನೀನೆಷ್ಟು ಪಡೆದೆ ಹೇ ನಮೋನಮೋ ನಿನಗೆ. ಕಷ್ಟವೇನು, ಸಂಘರ್ಷವೇನು, ಪಾಡೇನು, ತಾಳ್ಮೆಯೇನು? ನಮಗಾಗಿ ಕಲ್ಪ, ನಮಗಾಗಿ ಶಿಲ್ಪ ಸಾಧಿಸಿದೆ...

ಬರುತಿ‌ಎಂದೆಯಲ್ಲೊ

ಬರುತಿ‌ಎಂದೆಯಲ್ಲೊ ಬಾರದೆಹೋದೆ ಎಲ್ಲೊ| ಮಗು ಲೋಹಿತಾಶ್ವ|| ಬಿಸಿಲ ಜಳಕೆ ನಿನಗೆ ಬಾಯಾರಿಕೆಯಾಗಿಹುದೋ| ನಿನ್ನ ಹಸಿವು ಬಾಧಿಸಿಹುದೋ? ನಿನ್ನ ಜೊತೆಗಿದ್ದವರು ನೀನು ಸಣ್ಣವನೆಂದು ನಿನ್ನ ಕಾಡಿನಲಿ ಹಿಂದೆಬಿಟ್ಟರೇನೋ?|| ಅರಮನೆಯಲಾಡಿ ಬೆಳೆದವ ನೀನು ಅಡವಿಯ ಪರಿಚಯವಿಲ್ಲ ನಿನಗೆ|...

ಗೋಮಾತೆ

ಮನುಜ ಕೋಟಿಯ ತಣಿಸಿ ಸವಿಯಮೃತಮನ್ನುಣಿಸಿ ಬೆಳೆಸುತಿಹ ತಾಯಾಗಿ ಬೆಳಕು ಹರಿಸಿ. ಎಲ್ಲ ದೇವತೆಗಳನು ಎಲ್ಲ ಜ್ಞಾನಂಗಳನು ಧರ್ಮದೇವತೆಯಾಗಿ ನೀನು ಧರಿಸಿ ಸಕಲ ಬೆಳೆಗಳ ಬಿತ್ತು ಸಕಲ ಜೀವದ ಮುತ್ತು ನಿನ್ನಿಂದ ಬಾಳ್ಮೊದಲು ಬದುಕು ಸರಸಿ...

ಬೆಳಕ ಹುಡುಕುತ್ತ

ಸದಾ ಹಸಿರಿನ ಉಸಿರು ಕವಿಯ ಕಾವ್ಯದ ಭೂಮಿ ಆಶೆಗಳಿವೆ, ಕನಸುಗಳಿವೆ ನೂರಾರು ಉಸಿರಾಡಿದರೆ ನನ್ನ ಕಾವ್ಯ ಬದುಕುತ್ತೇನೆ. ಇಲ್ಲಿಯ ಒಂದೊಂದು ವಸ್ತುವಿನಲ್ಲೂ ಗತಮರೆತ ಇತಿಹಾಸ ಹುಡುಕುತ್ತೇನೆ. ಕಾವ್ಯ ಬದುಕಿದರೆ ಉಸಿರಾಡುತ್ತೇನೆ. ವಿಶಾಲ ಭೂಮಿಯ ಮೇಲೆ...

ಧರ್ಮಕ್ಷೇತ್ರೇ ಕುರುಕ್ಷೇತ್ರೇ

ಧರ್ಮಕ್ಷೇತ್ರೇ ಕುರುಕ್ಷೇತ್ರೇ ಏನು ನಡೆಯಿತೊ ಸಂಜಯ ಯಾರು ಸೋತರು ಯಾರು ಗೆದ್ದರು ಎಲ್ಲ ಬಣ್ಣಿಸೊ ಸಂಜಯ ಯಾರ ಬಾಣಕೆ ಯಾರು ಗುರಿಯೊ ಯಾರ ತಲೆಗಿನ್ನೆಷ್ಟು ಗರಿಯೊ ಸಂಜಯ ಯಾರು ತಪ್ಪೊ ಯಾರು ಸರಿಯೊ ತಪ್ಪು...