ಉಮರನ ಒಸಗೆ – ೨೪

ಬಿದಿಯೆನ್ನ ಕೇಳದೆಯೆ, ಎತ್ತಣಿಂದಲೊ ಬರಿಸಿ, ಮತ್ತೆನ್ನ ಕೇಳದೆತ್ತಲಿಗೊ ಕಳಿಪುವುದೆ? ಹಾ! ಒಂದು ಬಟ್ಟಲನು ತಾರಿಲ್ಲಿ ಮತ್ತೊಂದ ನದರೊಳೀ ದುರುಳತೆಯ ನೆನಪ ಮುಳುಗಿಪೆನು. *****

ಉಮರನ ಒಸಗೆ – ೧೯

ಮುದಿ ಉಮ್ಮರನ ಕೂಡೆ ನಡೆ; ಪಂಡಿತರನ್ನೆಲ್ಲ ವಾದಿಸಲು ಬಿಡು; ದಿಟವಿದೊಂದಿಹುದು ಕೇಳು: ಬಾಳು ಅಳಿವುದೆ ದಿಟವು; ಮಿಕ್ಕೆಲ್ಲ ಸಟೆಯೆ ಸರಿ; ಒಮ್ಮೆ ಅರಳಿದ ಹೂವು ಬಾಡುವುದೆ ದಿಟವು. *****

ಉಮರನ ಒಸಗೆ – ೧೬

ಮಣ್ಣಿನೊಳಗಕಟ! ನಾಮಿಳಿಯುವಂದಿನ ಮುನ್ನ ಇನ್ನು ಮುಳಿದಿಹ ದಿನವ ಬರಿದೆ ನೀಗುವುದೇಂ. ಮಣ್ಣೊಳಗೆ ಮಣ್ಣಾಗಿ ಮಣ್ಣೊಡನೆ ಬೆರೆವುದೇಂ ಮಧು ಗೀತ ಸತಿ ಗತಿಗಳೊಂದನರಿಯದೆಯೆ? *****

ಉಮರನ ಒಸಗೆ – ೧೫

ಹಾ! ಪ್ರಿಯಳೆ, ಬಾ; ಇಂದಿನಿಂ ಹಿಂದಿನಳಲುಗಳ ಮುಂದಿನಳುಕುಗಳ ತೊಲಗಿಸುವ ಬಟ್ಟಲನು ತುಂಬಿ ನೀಡೆನಗೀಗ; "ನಾಳೆ"ಯೆಂಬೆಯೊ?-ನಾಳೆ ಸೇರುವೆನು ನೂರ್‍ಕೊಟಿ ನಿನ್ನೆಗಳ ಜೊತೆಗೆ. *****