ಭೂಮಿಯ ಎದೆ ಮುಟ್ಟಿತು

ಒಬ್ಬ ಅತಿ ಎತ್ತರದ ಕಂಭವನ್ನು ಏರಿ ಕುಳಿತು ತಾನು ಎಲ್ಲರಕ್ಕಿಂತ ಎತ್ತರದಲ್ಲಿ ಇರುವನೆಂದು ಹೆಮ್ಮೆಪಡುತ್ತಿದ್ದ. ಅವನ ಸಹಪಾಠಿ ಹೇಳಿದ "ನಾನು ಹತ್ತದೇ ಈ ಕೋಲಿನಿಂದ ಕಂಭದತುದಿ ಮುಟ್ಟ ಬಲ್ಲೆ. ಸುಲಭದಲ್ಲಿ ಎತ್ತರ ಮುಟ್ಟುವಾಗ ನಿನಗೇಕೆ...

ದೃಷ್ಟಿ ಇರೆ ದಾರಿ

ಸಂಚಾರದಲ್ಲಿದ್ದ ಒಬ್ಬ ಗುರು ಒಂದು ದೇವಾಲಯದಲ್ಲಿ ತಂಗಿದ್ದರು. ಅಲ್ಲಿಗೆ ಕೆಲವು ಶಿಷ್ಯರು ಬಂದರು. "ಗುರುವೆ! ನಮಗೆ ದಾರಿ ತೋರಿಸಬೇಕೆಂದು" ಒಬ್ಬ ಶಿಷ್ಯ ಕೇಳಿದ. "ನಿನ್ನ ಮುಂದಿರುವ ವೃಕ್ಷವೇ ನಿನ್ನ ದಾರಿ" ಎಂದರು ಗುರುಗಳು. "ಅರ್ಥವಾಗಲಿಲ್ಲ...

ಜ್ಯೋತಿಯ ಹಂಬಲ

ಒಬ್ಬ ಶಿಲ್ಪಿ ದೇವತಾ ವಿಗ್ರಹಗಳನ್ನು ಕೆತ್ತುತ್ತ ಇದ್ದ. ವಿಗ್ರಹದದಲ್ಲಿ ಸೌಂದರ್‍ಯ ಜ್ಯೋತಿಯನ್ನು ಹುಡುಕುತ್ತಿದ್ದ. ಅತೃಪ್ತಿ ಆದಾಗ, ಕೆತ್ತಿದ ಶಿಲ್ಪಗಳನ್ನು ಬೆಂಕಿಯಲ್ಲಿ ಹಾಕಿ ದಹಿಸುತಿದ್ದ. ಇದನ್ನು ನೋಡಿದ ಜನ ಬೆರಗಾಗಿ "ಇದೇನು ಸುಂದರ ಶಿಲ್ಪಗಳನ್ನು ಹೀಗೆ...

ಮೌನದಲ್ಲಿ ಉತ್ತರ

ಎತ್ತರದ ತೆಂಗು, ಗಿಡ್ಡನೆಯ ತಾಳೆಮರಗಳೆರಡು ಪಕ್ಕ ಪಕ್ಕದಲ್ಲಿ ಬೆಳೆದಿದ್ದವು, ತಾಳೆ ಮರ ಕೇಳಿತು. "ನಿನ್ನ ಉದ್ದನೇಯ ದೇಹ ಕಾಪಾಡಲು ಆಗಸವಿರುವಾಗ ಅದೆಷ್ಟು ಗರಿಯ ಕೈಗಳು ನಿನಗೆ?" ಎಂದು ಪ್ರಚೋದಿಸಿತು. ತೆಂಗಿನಮರ ಒಂದು ಕ್ಷಣ ಮೌನ...

ಹನಿ ಕತೆ

‘ಇದು ಎಂತಹದು ಹನಿ ಕತೆ?’ ಎಂದು ಹೂವಿನ ಮೇಲಿನ ಹನಿಯನ್ನು ಕೇಳಿದ. ಅದು ರಸ ರೂಪ ಗಂಧ ವಿರುವ ನವಿರಾದ ಕತೆ’ ಎಂದಿತು. ಮತ್ತೆ ಸಾಗರದ ಹತ್ತಿರ ಬಂದು ‘ಹನಿ ಕತೆ ಎಂದರೇನು?’ ಎಂದ....

ಮಾತಿನ ಮರ್ಮ

ಎರಡು ಕಲ್ಲುಗಳ ನಡುವೆ ಬೆಳದ ಒಂದು ಅರಳಿ ಗಿಡವನ್ನು ಉಳಿಸಲು ಅವನು ಕಲ್ಲುಗಳನ್ನು ಜರಿಗಿಸಲು ಶ್ರಮ ಪಡುತ್ತಿದ್ದ. ಒಬ್ಬ ಶ್ರೀಮಂತ ಅಲ್ಲಿಗೆ ಬಂದು ‘ಕಲ್ಲಿನ ಮಧ್ಯ ಹೇಗೆ ಗಿಡ ಬೆಳದಿದೆಯೋ ತಿಳೀತಾ ಇಲ್ಲ’ ಎಂದ....

ಕಾವಲಗಾರ ಕಂಭ

ಅವನಿಗೆ ಪುಟ್ಟ ಡಬ್ಬ ಅಂಗಡಿಯಾದರು ಹಾಕಿ ಕೊಳ್ಳುವ ಕನಸಿತ್ತು. ತನ್ನ ಚಪ್ಪಲಿ ರಿಪೇರಿಗೆ ಕೆಲಸಕ್ಕೆ, ಹೊಂಗೆ ತಂಪಿನ ಸೂರು ಕಾವಲುಗಾರ ಕಂಭ ಸಿಕ್ಕಮೇಲೆ ಅವನ ಕನಸು ನನಸಾದಂತೆ ಆಯಿತು. ರಾತ್ರಿ ಹೊತ್ತು ತನ್ನ ಅಂಗಡಿ...

ಕನಸು

ಓರ್ವ ವಿರಹಿ ಪ್ರೇಮಿಗೆ ದಿನವೂ ಒಂದು ಕನಸು ಬೀಳುತ್ತಿತ್ತು. ಅವನು ತನ್ನ ಪ್ರೀತಿ ಪುತ್ಥಳಿಯನ್ನು ಹಿಂಬಾಲಿಸಿ ನಡೆಯುತ್ತಲೇ ಇದ್ದ. ಮೈಲಿ ಮೈಲಿಗೂ ಅವಳು ನಿಂತಂತೆ ಅನಿಸಿ ಮತ್ತೆ ಮುಂದೆ ಸಾಗುತ್ತಿದ್ದಳು. ಅದೇ ವೇಗದಲ್ಲಿ ಅವನೂ...

ಕನಸು-ನನಸು

ಅವನಿಗೆ ರಾತ್ರಿ ಪೂರ ಕನಸುಗಳು ಬೀಳುತಿದ್ದವು. ಕನಸಿನ ವನಗಳಲ್ಲಿ ಸಂಚರಿಸಿ ಕೈ ಬುಟ್ಟಿ ತುಂಬ ರಂಗು ರಂಗಿನ ಹೂಗಳನ್ನು ಆಯುತ್ತಿದ್ದ. ಆಕಾಶವನ್ನು ಕಾಡಿ ಬೇಡಿ ಬುಟ್ಟಿ ತುಂಬ ನಕ್ಷತ್ರ ಶೇಖರಿಸಿದ್ದ. ಕನಸಿನ ದೋಣಿಯಲ್ಲಿ ನದಿಯನ್ನು...

ಹೆಮ್ಮರಗಳ ಗೋರಿ

ಅವರು ತೋಟದಲ್ಲಿ ಹೆಮ್ಮರಗಳ ಸಾಲಿನಲ್ಲಿದ್ದ ಒಂದು ಪುಟ್ಟ ಗುಡಿಸಿಲಿನಲ್ಲಿ ಸಂಸಾರ ಹೂಡಿದ್ದರು. ವರ್ಷಗಳು ಉರುಳಿ, ಸಂಸಾರ ದೊಡ್ಡದಾಯಿತು. ವ್ಯಾಪಾರ ಆದಾಯ ಹೆಚ್ಚಿತು. ತೋಟದ ಎಲ್ಲಾ ಹೆಮ್ಮರಗಳನ್ನು ನೆಲಸಮ ಮಾಡಿ ದೊಡ್ಡ ಬಂಗಲೆ ಕಟ್ಟಿಸಿಕೊಂಡ. "ನೀನು...