ಮೂಲಾತ್ಮ

ಒತ್ತರಿಸಿ ಒತ್ತಿರಿಸಿ ವಿಧಿಯ ದೂರಿರಿಸೆ ಕತ್ತಲೊಳು ಮಿಂಚೊಮ್ಮೆ ಬಂದು ಪೋಗುವುದು ಆಗುವುದು ಆಗುವುದು ಏನೇನೊ ಮನಕೆ ಭೋಗವನು ಚಣಕಾಲ ತಳ್ಳೆ ಪದತಲಕೆ ಮದಿಸಿತ್ತು ಮದಿಸಿತ್ತು ಮನಸು ಮದಿಸಿತ್ತು ಹದವನರಿಯದೆ ಎಲ್ಲೊ ಸುಳಿಯುತಿತ್ತು ಬಯಲಾಯ್ತು ಬಯಲಾಯ್ತು...

ವಿಧಿ

ತಾರಣ ವರುಷದ ನಾಲ್ಕನೆ ಮಾಸದ ಅಂತ್ಯದ ದಿನವದು ಮುಂಜಾನೆ ಊರಿನ ಜನರಿಗೆ ಹೇಳಲು ತೀರದ ಸಡಗರ ತುಂಬಿದೆ ಬಿಡುವಿಲ್ಲ ದಾನವು ಧರ್ಮವು ದಾಸರ ಪದಗಳು ಸ್ನಾನವು ಜಪಗಳು ನಡೆದಿಹುವು ಏನಿದು ಎಂದರೆ ಬಾಲಕನೊಬ್ಬನು ಕನ್ನಡಿಯೊಂದನು...

ದುರ್ದೈವಿ

ಮಾಮರದ ತೋಪಿನಲಿ ಚೆಂದಿರನ ಬೆಳಕಿನಲಿ ಕೊಳದ ಸೋಪಾನದಲಿ ಕುಳಿತಿರುವಳಿವಳಾರು? ನೀರಿನಂಚಿಗೆ ಸರಿದು ತೊಯ್ಸಿಹಳು ನಿರಿಗಳನು ಕಾಲ್ಗಳನು ಚಾಚುವಳು ಮುದುರುವಳು ಕ್ಷಣಕೊಮ್ಮೆ ಉಬ್ಬಿಹುದು ಇವಳೆದುಯು ನಿಟ್ಟುಸಿರ ಬಿಡುತಿಹಳು ಜೀವದಾಶೆಯ ತೊರೆದು ಕುಳಿತಿಹಳು ತನುಗಾತ್ರಿ ದಾರಿಗರ ಅರಿವಿಲ್ಲ...

ಸುಮ್ಮನಿರು ಸಾಕು

ಅಂತರಂಗದ ಭಾವ ಮಸಗಿರಲಿ ಅಡಗಿರಲಿ ಭ್ರಾಂತಿ ಇದು ಮರುಗದಿರು ಸುಮ್ಮನಿರು ತೆರೆ ಬರಲಿ! ನಾಟಕದ ರಂಗವಿದು: ಪಾತ್ರಗಳ ವಹಿಸುತಿರು ಶಾಂತಿಯಿಂ ನೀನೀಗ ಮೌನವನು ಅನುಸರಿಸು ಹೆದರದಿರು ಕುದಿಯದಿರು ಹೇಡಿ ನೀನಾಗದಿರು ಬಡಿಯುತಿಹ ಅಲೆಗಳಿಗೆ ಕಣ್ಮುಚ್ಚಿ...

ಕುಲಗೆಟ್ಟ ಹೆಣ್ಣು

ಕುಲಗೆಟ್ಟ ಹೆಣ್ಣಿವಳು ಅಂಟದಿರಿ ಜೋಕೆ ಹುಳುಕು ತುಂಬಿಹುದಂತೆ ಗೊಡವೆ ನಮಗೇಕೆ ಪತಿಹೀನೆಯಾದವಳು ಗತಿಹೀನೆಯಾದವಳು ಸುತರಿಲ್ಲದೇ ಮುಕ್ತಿ ಹೀನೆಯಾದವಳು ಮತಿ ಇಲ್ಲವೋ, ಅಕಟ ದೇಹವನು ಧರಿಸಿಹಳು ಹಿತವಿಲ್ಲದಾ ಜನಕೆ ಮುಖವ ತೋರುವಳು ಸಮಾಜದೊಳಗೆಲ್ಲ ಏನೇನೊ ಸುದ್ದಿಗಳು...

ನಚ್ಚಿನ ಸೋದರಿ

ನಚ್ಚಿನಾ ಸೋದರಿಯೆ ಕಡುಜಾಣೆ ನೀನಮ್ಮ ಸ್ವಚ್ಛವಾಗಿದೆ ಮನವು ಮುದವಾಯಿತಮ್ಮ ಅಚ್ಯುತಾನಂತದೊಳು ಎನಿಬರೆನಿಬರು ಉಂಟೊ? ಸಚ್ಚರಿತ ಮಾನವರು ಶೀಲ ಸುಗುಣಾನ್ವಿತರು ನಿನ್ನ ನುಡಿ ಹಿತವಿಹುದು ನಿನ್ನ ನಡೆ ಸೊಗವಿಹುದು ನಿನ್ನ ಶ್ರಾವ್ಯದ ಗಾನ ಮಧುರವಾಗಿಹುದು ಬಿನ್ನಾಣ...

ಗೆಳತಿ

ತೊಳೆದ ಮುತ್ತಿನ ಹೆಸರೆ? ಹೊಳೆವ ರತ್ನದ ಹೆಸರೆ? ಥಳಥಳಿಸಿ ಮೆರೆಯುತಿಹ ತಾರೆಗಳ ಹೆಸರೆ? ಕಳಿತ ಫಲಗಳ ಹೆಸರೆ? ಚಿಗಿತ ಲತೆಗಳ ಹೆಸರೆ? ಕೊಳದೊಳಗೆ ಬಳುಕುತಿಹ ಕಮಲಗಳ ಹೆಸರೆ? ಸುರಿವ ಮಧುವಿನ ಹೆಸರೆ? ಹರಿವ ನದಿಗಳ...

ಎಚ್ಚರಿಕೆ

ಬಂಧನವರಿಯದೆ ಸುಖವನು ಬಯಸದೆ ಬೆಳೆಯುತ ಬರುತಿಹಳೀ ಸೀತೆ ನಿರುತವು ಶ್ರಾವ್ಯದ ಗಾನವನೊರೆವಳು ಕಿರುನಗೆ ಮೊಗದೊಳು ಸುಪ್ರೀತೆ ಗಾಯಕಿ ನಿನ್ನಯ ಗಾನವ ಕೇಳಲು ಕಾತರರಾಗಿಹೆವೆಂದೊಡನೆ ಕಂಗಳ ಮುಚ್ಚುತ ತಾಳವ ತಟ್ಟುತ ಝೇಂಕೃತನಾದವ ಗೆಯ್ಯುವಳು ಗಾನದ ಸಾಗರ-...

ನರಸಿಯ ಪರಿಸೆ

ಹದಿನಾಲ್ಕು ಹರೆಯದ ನರಸಿ ಬಲು ಚೆಲುವೆ ಮುದವಾಗುತಿದೆ ಇವಳ ನಡೆ ನುಡಿಯ ನೋಡೆ ಹರುಕು ಕಂಚುಕ ತೊಟ್ಟು ಮಲಿನಾಂಬರವುಟ್ಟು ಉಡುಗುವಳು ವರ್ತನೆಯ ಮನೆಗಳೊಳು ಕಸವ ಮುಕುರವೇತಕೆ ಇವಳ ಮೂಗೆ ಸಂಪಿಗೆ ಮೊಗ್ಗು ಪೊಳೆವ ಕಂಗಳ...

ಗುಬ್ಬಿ

ಗುಬ್ಬೀ ಗುಬ್ಬೀ ತರವಲ್ಲ ಮನೆ ಇದು ನನ್ನದು ನಿನದಲ್ಲ ಕಿಚಿಕಿಚಿ ಎಂಬೆಯ ಬಂದಿಲ್ಲಿ ಬಯಲಿದೆ ಹೊರಗಡೆ ಸಾಯಲ್ಲಿ ಜಂತೆಯ ಸಂದೇ ಮನೆಯಾಯ್ತು ಕಾಪುರವೇನೊ ಘನವಾಯ್ತು ನಿನ್ನೀ ವಲ್ಲಡಿ ಜೋರಾಯ್ತು ಮೂಡಿದ ಭಾವವು ಹಾಳಾಯ್ತು ಹುಶ್,...