ಗೆಳತಿ

ತೊಳೆದ ಮುತ್ತಿನ ಹೆಸರೆ?
ಹೊಳೆವ ರತ್ನದ ಹೆಸರೆ?
ಥಳಥಳಿಸಿ ಮೆರೆಯುತಿಹ ತಾರೆಗಳ ಹೆಸರೆ?

ಕಳಿತ ಫಲಗಳ ಹೆಸರೆ?
ಚಿಗಿತ ಲತೆಗಳ ಹೆಸರೆ?
ಕೊಳದೊಳಗೆ ಬಳುಕುತಿಹ ಕಮಲಗಳ ಹೆಸರೆ?

ಸುರಿವ ಮಧುವಿನ ಹೆಸರೆ?
ಹರಿವ ನದಿಗಳ ಹೆಸರೆ?
ಕಿರುನಗೆಯ ಸೂಸುತಿಹ ಪುಷ್ಪಗಳ ಹೆಸರೆ?

ಜ್ಞಾನಸರಸತಿ ಹೆಸರೆ?
ದೇವಿ ಲಕುಮಿಯ ಹೆಸರೆ?
ದೇವನಂ ಜಾನಿಸುವ ಭಾವಗಳ ಹೆಸರೆ?

ಗೆಳತಿಗೇನ್ ಹೆಸರಿಡಲಿ?
ಒಲವೆಂತು ಬಣ್ಣಿಸಲಿ?
ತುಳುಕುತಿದೆ ಸ್ನೇಹದೊಳು ಸುಖವು ಜನಕಜೆಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೆಂಪು ಬಸ್ಸು ನಾ…
Next post ಮುಳುಸೌತೆ

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…