Home / Kannada Poetry

Browsing Tag: Kannada Poetry

ನನ್ನೆಳೆಯ ದಿನಗಳಲ್ಲಿ ಕೂಡಿ ಹಾಡಿದ ತಂಗಿ ನನ್ನ ಕಣ್ಮರೆಯಾಗಿ ಹೋದೆಯಲ್ಲ; ಮಾತು ಮಾತಿಗೆ ಹೂವ ಸುರಿಸಿ ನಗಿಸುವ ಜೀವಿ ಬಾಳುದ್ದಕೂ ನೆನವೆ ನಿಂತಿತಲ್ಲ. ಭೂದೇವಿ ಮಂದಿರದ ಗರ್ಭಗುಡಿ ಬಾಗಿಲಲಿ ತೋಳ ತೊಟ್ಟಿಲದಲ್ಲಿ ಹೊತ್ತು ನಿಂದು ದೈನ್ಯದಲಿ ಕೈಚಾಚಿ ...

ಸಾಕ್ಷಿಕ ಭೂಮಿಕೆಯೊಳಿಹ ನಿಲಿಂಪ ಛಳಿಜ್ವರವಲ್ಲವು ಸಾತ್ತ್ವಿಕ ಕಂಪ ಚೈತ್ಯ ಶಿಖೆಯೊಳಿದೆ ಶ್ರೀನಕ್ಷತ್ರ ನಿರೀಕ್ಷಿಸುತ್ತಿದೆ ಸಾಹಸ ಕ್ಷೇತ್ರ ಕರೆಯಬೇಡವೇ ಜೀವೋದ್ಗೀತಾ ಅಪೂರ್ವ ಭಾವದ ನವನವನೀತಾ ಹಣ್ಣಲ್ಲವು ಈ ಸ್ವಯಂಭು ಕಣ್ಣು ಪರ್ವ ಪರ್ವ ನಿಪ್ಪೊಸತ...

೧ ದೇವ ನಿನ್ನಪಾರ ಕರುಣೆಗಾವ ನೆಲೆಯ ಕಾಣಲಿ! ಈವ ಶಕ್ತಿ ಈಯುತಿರಲಿ ಭಕ್ತಿಭಾವ ಬೆಳೆಯಲಿ! ಬೆಳಕು ಗಾಳಿ ನೀರು ನೆಲ ಇತ್ತುದೆಲ್ಲ ಸಾಲದೆ? ಬೆಳೆವ ಬದುಕಿಗಿದುವೆ ಭಾರವೆಂದರೆಂತು ಹೇವವೆ? ತಾಯಿ ಈದ ಮಗುವು ನೀನು ಬಂದೆ ಇತ್ತರಲ್ಲವೆ? ಮಾಯ ಬಿಸುಟಿ ನಿನ್...

೧ ತಾಯಿ ತಂದೆಯು ಒ೦ದರಲ್ಲಾದ ಪರಶಿವನ ಪರಮ ಪ್ರಸಾದವುಂಡು ಸಾಯಗೊಲ್ಲುತ್ತ ಬಂದಿರಿ ನಂದಿಕೇಶ್ವರರೆ ಜಗದಿ ಕಹಿಯನ್ನು ಕಂಡು! ೨ ಬಸವೇಶ್ವರರೆ ಜಗದಿ ನೆಲಿಸಿರುವ ಹೊಸತನದ ಕಟ್ಟೆಸಕ ನಿಟ್ಟಿಸುತ್ತ ಎಸೆದಿರೀ ವಸುಧೆಯಲಿ ಜಗದ ಜನರೊಳು ಜಗದ ಹೊಸತನವ ಹುಟ್ಟಿ...

೧ ಕಾಂತಿಗೆಲುವು ಶಾಂತಿಚೆಲುವು ಪಡುವಮುಗಿಲನೇರಿತು. ತಾರೆಕಿರಣ ಮಿಸುನಿವರ್ಣ ಭಾನಬಯಲ ಸೇರಿತು. ೨ ಪಡುವಮುಗಿಲು ಮೂಡಬಯಲು ಮಿಂಚುತಿತ್ತು ಹೊಳಪಲಿ ನೀಲಮೇಘ ಮಲೆಯಶಿಖರ ಜ್ವಲಿಸುತಿತ್ತು ತಿಳಿಯಲಿ. ೩ ತಟನಿತೀರ ವಟದನೇರ ನಿರವಹಾಯ್ದು ತೀಡಿತು ಬನದತಡುವೆ...

೧ ಕಣ್ಣು ಕಣ್ಣ ಕೂಡಿದಾಗ ಮಿಂಚು ಹೊಳೆಯು ಹರಿಯುವಾಗ ಜೀವಪಕ್ಷಿ ಭಾವದುಂಬಿ ನಲಿಯುತಿದ್ದಿತು; ನೂರು ಆಶೆ ನೂರು ದಾರಿ ಎಲ್ಲ ಮರೆತು ನಿನ್ನ ಸೇರಿ ಎದೆಯ ನೀಲ ಗಗನದಲ್ಲಿ ಹಾರುತಿದ್ದಿತು. ೨ ಮಾತು ಮೂಕವಾಗುತಿರಲು ಎದೆಯಲೇನೊ ಮಿಡಿಯುತಿರಲು ಪ್ರೀತಿ ಲತೆ...

ನೆಲವು ಕಾದು, ಅಂಗಾಲು ಕಾದು, ಮೈ ಕಾದು ಉರಿದು ನೆತ್ತಿ ಬಿಸಿಲ ಎಣ್ಣೆಯಲಿ ಹೊತ್ತಿ ಆದೆ ನಾ ಬೆಂಕಿಗೊಂಡ ಬತ್ತಿ ಕಣ್ಣು ಉರಿದು ಕೆಂಗೆಂಡವಾಗಿ ಭಗ ಭಗನೆ ಬಾನ ಭಾಗ ನೆತ್ತಿಯಲ್ಲಿ ಸುಡುತಿದ್ದ ಸೂರ್ಯ ಕತ್ತೆತ್ತಿ ನೋಡಿದಾಗ. ಮಣ್ಣು ನೆಲದ ಈ ಅನ್ನಪಿಂಡ ...

ಮಳಿ ಬಂತು ನೋಡು ಮೂಡಲಿನ್ಯಾಗ- ಮರಡೀಯ ತಲಿಯ ಮ್ಯಾಗ ಗುಡು ಗುಡುಡು ಎಂದು ಗುಡಗ್ತದ ಕಾಡು ಕರಿಮುಗಿಲು- ಕೇಳ್ದವರ ಎದೆಗೆ ಭುಗಿಲು ಗಡಗಡಡ ಎ೦ದು ನಡಗ್ತದ ನಿಂತ ನೆಲದೊಡಲು- ನೆರೆದವರಿಗೆಲ್ಲ ದಿಗಿಲು ಇದನೋಡಿ ರವಿಯು ತಾನೋಡಿ ಹೋದನಪ ಚದರಿ ಬರಲಿಲ್ಲ ಚಿ...

1...2728293031...194

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...