ನನಗಿಹರು ಮೂವರು ತಾಯಂದಿರು
ಹೆತ್ತು ಹೊತ್ತು ಹಾಲುಣಿಸಿ ಲಾಲಿಹಾಡಿ
ಮುದ್ದು ಮಾಡಿ ಪೊರೆದವಳು ನಮ್ಮಮ್ಮ
ಅವಳ ಮಮತೆಯ ಕುಡಿ
ಹಿಮ್ಮೆಟ್ಟದೆ ಹೆಜ್ಜೆ ಇಡಲು
ಗೆಜ್ಜೆಯ ನಾದಕೆ ನಲಿದ
ಹಾದಿಯಲಿ ದಿವ್ಯತೆಯ ಮನವು
ಹೊಸ್ತಿಲ ದಾಟಿ ಆಡುತ್ತಾ
ತೊದಲು ನುಡಿಗಳ ಕಲಿತು
ನನ್ನ ಒಡಲ ಹೂವಾಗಿ ನಲಿಕಂದ!
ಕನ್ನಡಮ್ಮ ಮಡಿಲಕೂಸೆ
ಒಲುಮೇಯ ಚೆಲುಮೆಯಾಗಿ
ವಿಶ್ವದಲ್ಲೊಂದು ಕಿರಣ ಭವ್ಯತೆಯಲಿ
ಮೆರೆವ ನನ್ನ ಒಡಲಲ್ಲಿ ನಿನಗೊಂದುಸ್ಥಾನ ||
ಮಾನವತೆ ಮಾನ್ಯತೆಯಲಿ
ಸೌಹಾರ್‍ದತೆಯಲಿ ನಡೆವ
ದಿವ್ಯಂಬರದಾ ಜ್ಯೋತಿಯ
ಬೆಳಗು ಕಂದ ಎಂದವಳು ಭಾರತಮ್ಮ ||
*****